ಮೈಸೂರು

ಸಂತ ಜೋಸೆಫ್ ಶಾಲೆಗೆ ಪ್ರಥಮ ಸ್ಥಾನ

Published On :

ಕ.ಪ್ರ.ವಾರ್ತೆ  ಹುಣಸೂರು  ಮೇ 11
ಮಾರ್ಚ್‌ನಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಸಂತ ಜೋಸೆಫರ ಪದವಿ ಪೂರ್ವ ಕಾಲೇಜ್ ಶೇ. 92.5ರಷ್ಟು ಫಲಿತಾಂಶ ಪಡೆದು ತಾಲೂಕಿಗೆ ಮೊದಲ ಸ್ಥಾನ ಪಡೆದಿದೆ.
ವಿಜ್ಞಾನ ವಿಭಾಗದ ಪಿ. ಶಿಲ್ಪಾ 567 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕೆ.ಬಿ. ಯೋಗೇಶ್ 553, ಜೈನ್ ವಿನೀತ್ ರಮೇಶ್ 529, ಎಚ್.ಪಿ. ಮಂಗಳ 512, ಶ್ರವಣರಾವ್ ಕರಾಡೆ ಹಾಗೂ ಬಾಂಧವ್ಯ ತಲಾ 510 ಅಂಕ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಕೆ.ಸಿ. ಭವಾನಿ 559, ಸ್ಪೂರ್ತಿ 518, ರಫೀಕ್ ತರನ್ನಮ್ 510 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಶೇ. 100 ಅಂಕ ಪಡೆದವರು: ವಾಣಿಜ್ಯ ವಿಭಾಗದ ಕೆ.ಬಿ. ಯೋಗೇಶ ಹಾಗೂ ಎಚ್.ಪಿ. ಮಂಗಳ ವ್ಯವಹಾರ ಅಧ್ಯಯನದ ವಿಷಯದಲ್ಲಿ ಹಾಗೂ ಸಿ.ಕೆ. ಭವಾನಿ ಕನ್ನಡ ವಿಷಯದಲ್ಲಿ ತಲಾ ಶೇ. 100 ಅಂಕ ಪಡೆದಿದ್ದಾರೆ.
ಕರ್ಣಕುಪ್ಪೆ ಎಸ್‌ಎನ್‌ಜಿ ಪ್ರೌಢಶಾಲೆ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಇಬ್ಬರು, ಪ್ರಥಮ ಶ್ರೇಣಿಯಲ್ಲಿ 23, ದ್ವಿತೀಯ 25, ತೃತೀಯ ಶ್ರೇಣಿಯಲ್ಲಿ 16 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟು 67 ವಿದ್ಯಾರ್ಥಿಗಳಲ್ಲಿ 66 ಮಂದಿ ತೇರ್ಗಡೆಯಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂ ಕೇಂಬ್ರಿಡ್ಜ್: ಇಲ್ಲಿನ ನ್ಯೂ ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಶೇ. 91.02 ಫಲಿತಾಂಶ ಪಡೆದುಕೊಂಡಿದೆ ಎಂದು ಸಂಸ್ಥೆಯ ತಮ್ಮಣ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.