ಶಂಕರ ಭಗವತ್ಪಾದರ ಉತ್ಸವ
ಕ.ಪ್ರ.ವಾರ್ತೆ ನಂಜನಗೂಡು ಮೇ 10
ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವದ ಅಂಗವಾಗಿ ಇಲ್ಲಿನ ಶ್ರೀ ಶೃಂಗೇರಿ ಶಂಕರ ಮಠದ ವತಿಯಿಂದ ಶುಕ್ರವಾರ ಭಗವತ್ಪಾದರ ಪಲ್ಲಕ್ಕಿ ಉತ್ಸವ ವೈಭವಯುತವಾಗಿ ಜರುಗಿತು.
ದೇವಾಲಯದ ಆನೆ ಗೌರಿ ಸಾರಥ್ಯದೊಡನೆ ಮಂಗಳವಾದ್ಯ ಮತ್ತು ವಿಪ್ರರ ವೇದಘೋಷದ ನಡುವೆ ಸಾಗಿದ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರಲ್ಲದೆ, ಸಾವಿರಾರು ಭಕ್ತರು ದರ್ಶನ ಪಡೆದರು.
ಶ್ರೀ ಮಠದ ಧರ್ಮಾಧಿಕಾರಿ ಎನ್.ಸಿ. ಶ್ರೀಕಂಠ ಜೋಯಿಸ್, ವೇ.ಬ್ರ. ರಾಘವೇಂದ್ರ, ಗುರು ಸೇವಾಸಕ್ತರಾದ ಆರ್. ಗೋವರ್ಧನ್, ಸತೀಶ್, ನಾಗರಾಜ್, ಗೋಪಿನಾಥ್, ರಂಗನಾಥ್, ಎಂ.ಎನ್. ನಾಗರಾಜ್, ವಕೀಲ ವೆಂಕಟೇಶ್, ಭಜನಾ ಮಂಡಳಿಯ ಪದ್ಮಶ್ರೀನಿವಾಸ್, ವಿಜಯ, ರಮಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮೇ 10 ರಿಂದ ಮೇ 15 ರವರೆಗೆ ಜಯಂತಿ ಮಹೋತ್ಸವ ನಡೆಯಲಿದೆ. ಪ್ರತಿನಿತ್ಯ ಬೆಳಗ್ಗೆ ಹೋಮ ಹವನಾದಿ ದೇವತಾ ಕಾರ್ಯಗಳು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶನಿವಾರ ಬೆಳಗ್ಗೆ ಶ್ರೀರಾಮ ಪಟ್ಟಾಭಿಷೇಕ, ಮೇ 12 ಬೆಳಗ್ಗೆ ಉಚಿತ ಸಾಮೂಹಿಕ ಉಪನಯನ ನಡೆಯಲಿದೆ. ಮೇ 15 ರಂದು ಶಂಕರ ಭಗವತ್ಪಾದರ ಉತ್ಸವವು ರಥದ ಬೀದಿಯಲ್ಲಿ ನೆರವೇರಲಿದೆ. ಅಂದೇ ಬೆಳಗ್ಗೆ 10.30ಕ್ಕೆ ಶ್ರೀಮಠದಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ಮಂಟಪೋತ್ಸವ ನೆರವೇರುವುದು. ಸಂಜೆ ಕಾರ್ಯಕ್ರಮದಲ್ಲಿ ಸಮಾಜ ಸೇವಾ ಧುರೀಣರನ್ನು ಗೌರವಿಸಲಾಗುವುದು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

