ಹವಾಮಾನ ವೈಪರೀತ್ಯ ತಡೆಗೆ ಪ್ರಣಾಳಿಕೆ ತಯಾರಿಸಲು ನಿರ್ಧಾರ
ಕ.ಪ್ರ.ವಾರ್ತೆ ಮೈಸೂರು ಮಾ.30
ನೆಲ, ಜಲ, ಬೀಜ, ಆಹಾರ, ಶಕ್ತಿಮೂಲಗಳು, ಪರ್ಯಾಯಗಳು ಒಳಗೊಂಡಂತೆ ಹವಾಮಾನ ವೈಪರೀತ್ಯ ತಡೆಗಟ್ಟಲು ದಿಕ್ಸೂಚಿಯಾಗುವಂತಹ ಜನಪರ ಪ್ರಣಾಳಿಕೆ ತಯಾರಿಸಿ ರಾಜಕೀಯ ಪಕ್ಷಗಳಿಗೆ ನೀಡಲು ಗುರುವಾರ ಹವಾಮಾನ ವೈಪರೀತ್ಯ ಕುರಿತ ಸಿಟಿಜನ್ಸ್ ಗ್ಲೋಬಲ್ ಫ್ಲಾಟ್‌ಫೋ ಮತ್ತು ಪೀಪಲ್ಸ್ ಲೀಗಲ್ ಫೋರಂ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಾಹಿತಿ, ಜಾನಪದ ತಜ್ಞ ಪ್ರೊ. ಕಾಳೇಗೌಡ ನಾಗವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ, ನೈಸರ್ಗಿಕ ಕೃಷಿಗೆ ಬದ್ಧತೆ ಮತ್ತು ನಿರಂತರ ಪ್ರೋತ್ಸಾಹ, ವಿಶೇಷ ಆರ್ಥಿಕ ವಲಯಗಳ ವಿರುದ್ಧ ಚಳವಳಿ, ವಿದ್ಯುತ್ ಮತ್ತು ಖಾಸಗಿ ವಾಹನಗಳಿಗೆ ವಾರಕ್ಕೊಮ್ಮೆಯಾದರೂ ರಜಾ ನೀಡುವುದು, ಹೆಚ್ಚು ನೀರು ಬೇಡುವ ಕಬ್ಬು, ಬತ್ತದ ಬದಲು ಕಡಿಮೆ ನೀರು ಬೇಡುವ ಪೌಷ್ಟಿಕವಾದ ಕಿರುಧಾನ್ಯಗಳ ಬೇಸಾಯ, ಅಂತರ್ಜಲದ ಮೇಲೆ ನಿಯಂತ್ರಣ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಲೇಖನಗಳ ಪ್ರಕಟಣೆ, ತಾಲೂಕು, ಗ್ರಾಮ ಮಟ್ಟದಲ್ಲಿ ಜಾಗೃತಿ ಅಭಿಯಾನ ಒಳಗೊಂಡಂತಹ ಕ್ರಿಯಾಯೋಜನೆಗೆ ಒಪ್ಪಿಗೆ ನೀಡಲಾಯಿತು.
ಈ ಕಾರ್ಯಕ್ರಮಗಳಿಗೆ ಶಿಸ್ತುಬದ್ಧ ರೂಪು ನೀಡಿ ಮುನ್ನಡೆಸಲು ಸಮಿತಿಯೊಂದನ್ನು ರಚಿಸಲು ಸಭೆ ತೀರ್ಮಾನಿಸಿತು. ಸಮಿತಿಯ ರಚನಾ ಪ್ರಕ್ರಿಯೆ ಜವಾಬ್ದಾರಿಯನ್ನು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಪೀಪಲ್ಸ್ ಲೀಗಲ್ ಫೋರಂನ ಪಿ.ಪಿ. ಬಾಬುರಾಜ್ ಅವರಿಗೆ ವಹಿಸಲಾಯಿತು.
ಡಾ. ಮುಜಾಫರ್ ಅಸ್ಸಾದಿ, ಪ್ರೊ. ಕೆ.ಸಿ. ಬಸವರಾಜ್, ಕೆ.ಎಂ. ಪುಟ್ಟಸ್ವಾಮಿ, ಯು.ಎನ್. ರವಿಕುಮಾರ್, ಡಾ.ಎಸ್.ಎನ್. ಗಣನಾಥ, ರಾಜಶೇಖರ ನಾಯ್ಕಲ್, ಹೊಸೂರು ಕುಮಾರ್, ಸಂಜಯ್ ಹುಣಸೂರು, ರೈತ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

