ಮೈಸೂರು

ಶಾಸಕ ವೆಂಕಟೇಶ್‌ರಿಂದ ದಬ್ಬಾಳಿಕೆ ರಾಜಕಾರಣ: ಆರೋಪ

Published On :

ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮಾ.30
ಶಾಸಕ ಕೆ. ವೆಂಕಟೇಶ್‌ಗೆ ತಾಕತ್ತಿದ್ದರೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ವಕೀಲ ಬಿ.ವಿ. ಜವರೇಗೌಡ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಕರೆದೊಯ್ಯಲಿ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಟಿ.ಡಿ. ಗಣೇಶ್ ಸವಾಲೆಸೆದರು.
ಜಿಪಂ ಮಾಜಿ ಸದಸ್ಯ ಹಾಗೂ ಹಾಲಿ ಎಪಿಎಂಸಿ ಸದಸ್ಯ ಎಸ್.ಟಿ. ರಾಜಶೇಖರ್ ಗುರುವಾರ ಕಾಂಗ್ರೆಸ್ ತೊರೆದು ಬಿಎಸ್‌ಆರ್ ಕಾಂಗ್ರೆಸ್‌ಗೆ ತಾವಾಗಿಯೇ ಬಂದು ಸೇರ್ಪಡೆಗೊಂಡಿದ್ದರು. ಆದರೆ, ಇದನ್ನು ಸಹಿಸದ ಶಾಸಕ ಕೆ. ವೆಂಕಟೇಶ್ ರಾಜಶೇಖರ್ ಅವರ ಕುಟುಂಬಸ್ಥರನ್ನು ಬಳಸಿಕೊಂಡು ಬಲವಂತದಿಂದ ರಾಜಶೇಖರ್ ಅವರನ್ನು ಮತ್ತೆ ಶುಕ್ರವಾರ ಕಾಂಗ್ರೆಸ್‌ಗೆ ಮರಳುವಂತೆ ಮಾಡುವ ಮೂಲಕ ದಬ್ಬಾಳಿಕೆಯ ರಾಜಕಾರಣಕ್ಕೆ ಕಾರಣರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಶಾಸಕರು ಈವರೆಗೆ ಕಾಂಗ್ರೆಸ್ ಪಕ್ಷದಲ್ಲಿನ ಎರಡನೇ ಪಂಕ್ತಿಯ ನಾಯಕನೊಬ್ಬನನ್ನು ಗುರುತಿಸಿ ಬೆಳೆಸಲಿಲ್ಲ. ಈ ಕಾರಣದಿಂದಾಗಿ ಹಲವಾರು ಕಾಂಗ್ರೆಸ್ಸಿಗರು ಮನನೊಂದು ಪಕ್ಷ ಬಿಡುವ ಮಟ್ಟಿಗೆ ನಿರ್ಧಾರ ಕೈಗೊಳ್ಳುತ್ತಿದ್ದು, ಶಾಸಕ ಕೆ. ವೆಂಕಟೇಶ್ ಇದನ್ನು ತಪ್ಪಿಸಲು ಬಲ ಪ್ರಯೋಗ ಮಾಡುತ್ತಿರುವುದನ್ನು ಬಿಎಸ್‌ಆರ್ ಕಾಂಗ್ರೆಸ್ ಖಂಡಿಸುತ್ತದೆ. ವಕೀಲ ಬಿ.ವಿ. ಜವರೇಗೌಡ ಅವರು ಸಹ ಶಾಸಕರ ಧೋರಣೆಯಿಂದಾಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಶಾಸಕರು ಅವರನ್ನು ಮತ್ತೆ ಕಾಂಗ್ರೆಸ್‌ಗೆ ಕರೆದೊಯ್ಯಲಿ ಎಂದು ಸವಾಲೆಸೆದರು. ಪಕ್ಷದ ಪದಾಧಿಕಾರಿಗಳಾದ ಚೆಲುವನಾಯಕ, ಶಿವಪ್ಪ, ಮಹದೇವ, ಜಯಣ್ಣ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.