ನಾಲ್ಕು ಮರಿಗೆ ಜನ್ಮ ನೀಡಿದ ಕುರಿ!
ಕ.ಪ್ರ.ವಾರ್ತೆ ಕೆ.ಆರ್. ನಗರ ಮಾ.30
ಇಲ್ಲಿನ ತರಕಾರಿ ವ್ಯಾಪಾರಿ ಅನ್ಸರ್‌ಪಾಷ ಅವರು ಸಾಕಿರುವ ಕುರಿಯು ಶನಿವಾರ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.
ಕಳೆದ ಎರಡು ವರ್ಷಗಳಲ್ಲಿ ಒಂದು ಬಾರಿ ಮೂರು, ಮತ್ತೊಂದು ಬಾರಿ ನಾಲ್ಕರಂತೆ ಒಟ್ಟು 14 ಮರಿಗಳಿಗೆ ಜನ್ಮ ನೀಡಿದೆ.
ನಗರದ ಮುಸ್ಲಿಂ ಬಡಾವಣೆಯ ಅನ್ಸರ್‌ಪಾಷ ವಿವಿಧ ತಳಿಯ ಕುರಿಗಳನ್ನು ಸಾಕುವ ಹವ್ಯಾಸವನ್ನು ಹಲವಾರು ವರ್ಷಗಳಿಂದ ರೂಢಿಸಿಕೊಂಡಿದ್ದು, ಈ ಕುರಿಯನ್ನು ಕಾಶ್ಮೀರದಿಂದ ತರಲಾಗಿತ್ತು. ತನ್ನ ತರಕಾರಿ ಅಂಗಡಿಯಲ್ಲಿ ಅಳಿದುಳಿದ ತರಕಾರಿಗಳನ್ನು ಕುರಿಗಳಿಗೆ ಆಹಾರವಾಗಿ ನೀಡುವುದರ ಜೊತೆಗೆ, ಆಗಾಗ ಪಶು ವೈದ್ಯರಿಂದ ಸಲಹೆ ಪಡೆದು ಅವರ ನಿರ್ದೇಶನದಂತೆ ಕುರಿಗಳನ್ನು ಸಾಕುತ್ತ ಬಂದಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ನಡೆಯುವ ಜಾನುವಾರು ಜಾತ್ರೆಗಳಲ್ಲಿ ತನ್ನ ಸಾಕು ಕುರಿಗಳನ್ನು ಪ್ರದರ್ಶನ ಮಾಡಿ ಬಹುಮಾನ ಪಡೆದಿದ್ದಾರೆ.
ಪಶುವೈದ್ಯ ಡಾ. ಷಡಕ್ಷರಿ ಭೇಟಿ ನೀಡಿ, ನಾಲ್ಕು ಮರಿಗಳು ಮತ್ತು ತಾಯಿ ಕುರಿಯನ್ನು ಪರೀಕ್ಷಿಸಿ ಆರೋಗ್ಯವಾಗಿ ಇರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

