ಮೈಸೂರು

ನಮಗಿಲ್ಲವೇ ಕುಡಿಯುವ ನೀರು?

Published On :

ಮೈಸೂರು: ನಗರಪಾಲಿಕೆಯ 56 ರಿಂದ 60ನೇ ವಾರ್ಡ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಈ ವಾರ್ಡ್‌ಗಳ ಯಾವ ಸದಸ್ಯರನ್ನು ಕೇಳಿದರೂ ನೀರಿಲ್ಲ.... ನೀರಿಲ್ಲ... ಎಂದು ಬಾಯಿಬಡಿದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ನೀರಿನ ಸಮಸ್ಯೆ ತಲೆದೂರಿದೆ.
ಮೇಳಾಪುರದಿಂದ ನರಸಿಂಹರಾಜ ಕ್ಷೇತ್ರಕ್ಕೆ ಕಾವೇರಿ ನೀರು ಸರಬರಾಜು ಆಗುತ್ತಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಅಧಿಕಾರಿಗಳ ಮೇಲೆ ದರ್ಪ ಪ್ರದರ್ಶಿಸಿ, ಕಾವೇರಿ ನೀರನ್ನು ಕೆ.ಆರ್. ಕ್ಷೇತ್ರಕ್ಕೆ ಸರಬರಾಜು ಮಾಡಿಸುತ್ತಿದ್ದಾರೆ.
ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಇದನ್ನು ಕಂಡರು ಕಾಣದಂತೆ ನಿದ್ದೆ ಮಾಡುತ್ತಿದ್ದಾರೆ ಎಂದು ನಗರಪಾಲಿಕೆಯ ಹಿರಿಯ ಸದಸ್ಯ ಹಾಗೂ ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಈ ವಾರ್ಡ್‌ಗಳಲ್ಲಿ ಕಂದಾಯ ಬಡಾವಣೆಗಳಿದ್ದು, ನೀರು, ಒಳಚರಂಡಿ, ರಸ್ತೆ, ಉದ್ಯಾನವನಗಳ ಅಭಿವೃದ್ಧಿ ಆಗಬೇಕಿದೆ. 57ನೇ ವಾರ್ಡ್‌ನಲ್ಲಿ ಮೂಲ ಸೌಲಭ್ಯಗಳು ಕೊರತೆಯ ಮಹಾಪೂರ ಇದೆ.
56ನೇ ವಾರ್ಡ್‌ನ ಸಿ.ಎಸ್. ರಜನಿ, 57ನೇ ವಾರ್ಡ್‌ನ ಬಿ.ಎಂ. ನಟರಾಜ್, 59ನೇ ವಾರ್ಡ್‌ನ ರೇಷ್ಮಾ ಜಬೀನ್ ಅವರು ಇದೇ ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 58ನೇ ವಾರ್ಡ್‌ನ ಆರ್. ಅನಂತು ಅವರು ಹಿಂದಿನ ಸಾಲಿನಲ್ಲಿ ಪಕ್ಷೇತರವಾಗಿ ಆಯ್ಕೆಯಾಗಿದ್ದರು.
ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.
60ನೇ ವಾರ್ಡ್‌ನಲ್ಲಿ ಎಚ್.ಎನ್. ಶ್ರೀಕಂಠಯ್ಯ ಅವರು ಆರಂಭದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ ಜೆಡಿಎಸ್‌ದಿಂದ ಸ್ಪರ್ಧಿಸಿ ಎರಡು ಬಾರಿ ಗೆದ್ದು, ಮೇಯರ್ ಆಗಿದ್ದರು.
ಪ್ರಸ್ತುತ 4ನೇ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.