ಇಂದು ದೇವೇಗೌಡ ಪ್ರಚಾರ, ಭಾಷಣ (ಸುದ್ದಿ ಸಂಕ್ಷೇಪ)
ಕೆ.ಆರ್. ನಗರ: ತಾಲೂಕಿನ ಮಿರ್ಲೆ ಮತ್ತು ಹೊಸೂರು ಗ್ರಾಮಗಳಿಗೆ ಮಾ.30 ರಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಭೇಟಿ ನೀಡಿ, ಪಕ್ಷದ ಅಭ್ಯರ್ಥಿ ಸಾ.ರಾ. ಮಹೇಶ್ ಪರ ಬಹಿರಂಗ ಸಭೆ ನಡೆಸಿ, ಚುನಾವಣಾ ಪ್ರಚಾರ ಭಾಷಣ ಮಾಡುವರು. ಮಧ್ಯಾಹ್ನ 3ಕ್ಕೆ ಮಿರ್ಲೆ, ಸಂಜೆ 5ಕ್ಕೆ ಹೊಸೂರು ಗ್ರಾಮಗಳಲ್ಲಿ ಅವರು ಬಹಿರಂಗ ಸಭೆಯಲ್ಲಿ ಮಾತನಾಡುವರು. ಸಂಸದ ಎನ್.ಚಲುವರಾಯಸ್ವಾಮಿ, ಶಾಸಕರಾದ ಸಾ.ರಾ. ಮಹೇಶ್, ಸಂದೇಶ್ ನಾಗರಾಜು, ಪಕ್ಷದ ಜಿಲ್ಲಾಧ್ಯಕ್ಷ ಎಸ್. ಚಿಕ್ಕಮಾದು, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಭಾಗವಹಿಸುವರು. ಈ ಎರಡು ಸಭೆಗಳಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್ ಕೋರಿದ್ದಾರೆ.
ರಾಜಕೀಯ ಕುಮ್ಮಕ್ಕು, ಅಡ್ಡಿ: ಆರೋಪ
ಸುತ್ತೂರು: ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿಯ ಮರಡಿಹುಂಡಿ ಹಾಗೂ ತುಮ್ಮನೇರಳೆ ಗ್ರಾಮಗಳಿಗೆ ಸೇರಿರುವ ಶ್ರೀದಾಳಕಾರತೋದೆಶ್ವರಸ್ವಾಮಿ ಮತ್ತು ಅಮ್ಮನವರ ದೇವಸ್ಥಾನದ ಕಾರ್ಯಕ್ರಮಕ್ಕೆ ರಾಜಕೀಯ ಕುಮ್ಮಕ್ಕಿನಿಂದ ಅಡ್ಡಿ ಮಾಡಲಾಗುತ್ತಿದೆ ಎಂದು ಮುಖಂಡರು ಆರೋಪಿಸಿದ್ದಾರೆ. ಶಿಥಿಲಗೊಂಡಿದ್ದ ಈ ದೇವಸ್ಥಾನವನ್ನು ದಾನಿಗಳ ನೆರವಿನಿಂದ ಜೀರ್ಣೋದ್ಧಾರ ಮಾಡಿಸಲಾಗಿದ್ದು, ಮಾ.28 ಮತ್ತು 29 ರಂದು ದೇವಸ್ಥಾನದಲ್ಲಿ ಗಣಪತಿ ಪೂಜೆ, ಗಂಗೆ ಪೂಜೆ ಮತ್ತಿತರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವಂತೆ ನಾಗೇಂದ್ರ ಮತ್ತಿತರರು ತಿಳಿಸಿದ್ದರು. ಆದರೆ ಯಾವ ರಾಜಕೀಯ ವ್ಯಕ್ತಿಗಳನ್ನು ಆಹಾನಿಸಲು ಭಕ್ತಾದಿಗಳು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಗುಂಪಿನವರಾದ ನಾಗೇಂದ್ರ ಮತ್ತು ಬುಲೆಟ್ ಮಹದೇವ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಮರಡಿಹುಂಡಿಯ ಎಂ.ಡಿ. ಶಿವಣ್ಣ ಹಾಗೂ ತುಮ್ಮನೇರಳೆ ಟಿ.ಎನ್. ಮಹೇಶ್ ಆರೋಪಿಸಿದ್ದಾರೆ.
ವರುಣ ಯುವ ಜೆಡಿಎಸ್‌ಗೆ ನೇಮಕ
ಸುತ್ತೂರು: ವರುಣಾ ವಿಧಾನಸಭಾ ಕ್ಷೇತ್ರದ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷರಾಗಿ ನಂಜನಗೂಡು ತಾಲೂಕಿನ ಚಿನ್ನಂಬಳ್ಳಿ ಗ್ರಾಮದ ಶೇಷಾದ್ರಿ ಅವರನ್ನು ನೇಮಕ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

