8ನೇ ದಿನಕ್ಕೆ ರಂಗಾಯಣ ಹೋರಾಟ
ಕ.ಪ್ರ.ವಾರ್ತೆ ಮೈಸೂರು ಮಾ.29
ರಂಗಾಯಣ ಕಲಾವಿದರ ವರ್ಗಾವಣೆ ಹಾಗೂ ನಿರ್ದೇಶಕರ ವಜಾ ಖಂಡಿಸಿ ಮೈಸೂರಿನ ಸಾಹಿತಿ, ಕಲಾವಿದರ ಒಕ್ಕೂಟದವರು ನಡೆಸುತ್ತಿರುವ ರಂಗಾಯಣ ಉಳಿಸಿ ಆಂದೋಲನವು 8ನೇ ದಿನವಾದ ಶುಕ್ರವಾರ ಸಹ ಮುಂದುವರಿಯಿತು. ಧಾರವಾಡ ಮತ್ತು ಶಿವಮೊಗ್ಗದ ರಂಗಾಯಣಕ್ಕೆ ಮೈಸೂರಿನ ರಂಗಾಯಣದ 12 ಕಲಾವಿದರನ್ನು ವರ್ಗಾವಣೆ ಹಾಗೂ ಇದನ್ನು ವಿರೋಧಿಸಿ ಕಲಾವಿದರೊಂದಿಗೆ ಪ್ರತಿಭಟಿಸಿದ ಡಾ.ಬಿ.ವಿ. ರಾಜಾರಾಂ ಅವರನ್ನು ರಂಗಾಯಣ ನಿರ್ದೇಶಕರ ಸ್ಥಾನದಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಈ ಆಂದೋಲನ ಹಮ್ಮಿಕೊಂಡಿದ್ದಾರೆ.
ರಂಗಾಯಣ ಕಲಾವಿದರ ಬೆಂಬಲಕ್ಕೆ ನಿಂತ ರಂಗಾಸಕ್ತರು, ರಂಗಕರ್ಮಿಗಳು ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರಂಗಕರ್ಮಿಗಳಾದ ಗಂಗಾಧರ್, ಪ್ರಶಾಂತ ಹಿರೇಮಠ್ ಅವರು ಕಲಾವಿದರ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರತಿಭಟನೆಗೆ ಸರ್ಕಾರ ಜಗ್ಗಲ್ಲ
ಮೈಸೂರು ರಂಗಾಯಣ ಕಲಾವಿದರ ಪ್ರತಿಭಟನೆಗೆ ಸರ್ಕಾರ ಜಗ್ಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಹಾಗೂ ರಂಗಾಯಣದ ಪ್ರಭಾರ ನಿರ್ದೇಶಕ ಕೆ.ಆರ್. ರಾಮಕೃಷ್ಣ ಹೇಳಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಗಾಯಣದಲ್ಲೇ ಜ್ವಲಂತ ಸಮಸ್ಯೆಗಳಿವೆ. ಕಲಾವಿದರ ಪ್ರತಿಭಟನೆಯನ್ನು ಸರ್ಕಾರ ಕಡೆಗಣಿಸಿದೆ. ಕಲಾವಿದರ ಪ್ರತಿಭಟನೆ ತಡೆಯಲಾಗದು ಎಂದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗದರ್ಶನ ನಿರೀಕ್ಷಿಸಿದ್ದೇನೆ. ಕಲಾವಿದರ ಪ್ರತಿಭಟನೆಯಿಂದ ಚಿಣ್ಣರ ಮೇಳಕ್ಕೆ ತೊಂದರೆ ಇಲ್ಲ. ಅರ್ಥಪೂರ್ಣವಾಗಿ ಮೇಳ ಆಯೋಜಿಸಲಾಗುವುದು. ಕಲಾವಿದರಿಂದ ರಂಗಾಯಣ ಕಟ್ಟಲು ಸಾಧ್ಯವಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

