ಬೇಸಾಯ ಕ್ರಮ ಅನುಸರಿಸಲು ಸಲಹೆ
ಮೂಗೂರು: ಸುಧಾರಿತ ಬೇಸಾಯ ಕ್ರಮ ಅನುಸರಿಸುವುದರ ಮೂಲಕ, ರೈತರು ಕೃಷಿ ಉತ್ಪನ್ನಗಳನ್ನು ಹೆಚ್ಚಿಸಿ, ತಮ್ಮ ಆರ್ಥಿಕ ಮಟ್ಟವನ್ನು ವೃದ್ಧಿಸಿಕೊಳ್ಳಬೇಕೆಂದು ಎಂದು ಸಹಾಯಕ ಕೃಷಿ ನಿರ್ದೇಶಕ ಎನ್. ಕೃಷ್ಣಮೂರ್ತಿ ಹೇಳಿದರು. ಗ್ರಾಮದ ರೇಷ್ಮೆ ಹುಳು ಸಾಕಾಣಿಕ ಕೇಂದ್ರದ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಕೃಷಿ ಮಾಹಿತಿ ಆಂದೋಲನದ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ರೈತರು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು, ರಾಸಾಯನಿಕ ಗೊಬ್ಬರದ ಬಳಕೆಯನ್ನು ಮಿತಿಗೊಳಿಸಿ ಅಧಿಕ ಹಿಳುವರಿ ಪಡೆಯುವುದರ ಜತೆಗೆ, ಮಣ್ಣಿನ ಸಂರಕ್ಷಣೆ ಹಾಗೂ ಅಧಿಕ ಆಹಾರ ಉತ್ಪಾದನ ಕ್ರಮವನ್ನು ತಿಳಿದುಕೊಳ್ಳಬೇಕು ಎಂದರು.
ಸಸ್ಯ ನಾಶಕ ಔಷಧಗಳಿಂದ ಕೀಟನಾಶಕ ಹಾಗೂ ಬೆಳೆಗಳಿಗೆ ಹರಡುವ ರೋಗಗಳನ್ನು ನಿಯಂತ್ರಿಸಬಹುದು. ಹಸಿರೇಲೆ, ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಾಪಾಡಿ ಅಧಿಕ ಇಳುವರಿ ಪಡೆಯಬಹುದು. ನೂತನ ಕೃಷಿ ಯಾಂತ್ರಿಕತೆಗಳನ್ನು ಅಳವಡಿಸಿಕೊಂಡು, ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳ ಉತ್ಪಾದನೆ ಮಾಡಲು ರೈತರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷ ಜಗದೀಶ್ ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಂತ್ರಿಕ ಮಾಹಿತಿ ಒಳಗೊಂಡ ಪ್ರಕಟಣೆಯನ್ನು ರೈತರಿಗೆ ವಿತರಿಸಿದರು. ಜಿಪಂ ಸದಸ್ಯೆ ರೇಣುಕಾ ನಾಗರಾಜು, ತಾಪಂ ಸದಸ್ಯ ಬಸವರಾಜು, ಪುಟ್ಟಮಾದಮ್ಮ, ಶಿವಮ್ಮ, ರೂಪಶ್ರೀ, ಪರಮೇಶ್, ಗ್ರಾಪಂ ಅಧ್ಯಕ್ಷ ಕುರುಬೂರು ವೀರೇಶ್, ಗುರುಮೂರ್ತಿ, ಡಾ.ಸೌಮ್ಯನಾರಾಯಣ್, ಎಒ ಶಿವಣ್ಣ, ವಿಜಯಲಕ್ಷ್ಮಿ, ರಮೇಶ್, ಸಿದ್ದರಾಜು, ಕಾಂತರಾಜು, ದೇವಾನಂದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

