ಬಾಲಕಿಯರಿಗೆ ನೈರ್ಮಲ್ಯ ಕಿಟ್ ವಿತರಣೆ
ಮೈಸೂರು: ನಂಜನಗೂಡು ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ 2,925 ಬಾಲಕಿಯರಿಗೆ ವೈಯಕ್ತಿಕ ನೈರ್ಮಲ್ಯ ಕಿಟ್ಸ್ ವಿತರಿಸುವ ರಾಜ್ಯದ ಪ್ರಥಮ ಯೋಜನೆ ತಾಂಡವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಜಿಪಂ ಅಧ್ಯಕ್ಷ ಕಾ.ಪು. ಸಿದ್ಧವೀರಪ್ಪ ಅವರು ಬಾಲಕಿಯರಿಗೆ ಕಿಟ್‌ಗಳನ್ನು ವಿತರಿಸಿ, ಗ್ರಾಮೀಣ ಹಾಗೂ ಬಡ ಬಾಲಕಿಯರಿಗಾಗಿ ರೂಪಿಸಿದ ಈ ಕಾರ್ಯಕ್ರಮ ವಿನೂತನ ಮಾದರಿ ಕಾರ್ಯಕ್ರಮವಾಗಿದೆ. ತಮ್ಮ ಅನುದಾನದಿಂದ ಇದಕ್ಕಾಗಿ 5 ಲಕ್ಷ ನೀಡಿರುವುದಾಗಿ ಹೇಳಿದರು. ಜಿಪಂ, ತಾಪಂ ಹಾಗೂ ಗ್ರಾಪಂಗಳ ಆರ್ಥಿಕ ಸಹಾಯದಿಂದ ಜಾರಿಗೊಳ್ಳುತ್ತಿರುವ ಈ ಯೋಜನೆಯನ್ನು, ಫೆಬ್ರವಯಿಂದ ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೂ ವಿಸ್ತರಣೆಯಾಗಲಿದ್ದು, ಇದರಿಂದ ಸುಮಾರು 20-25 ಸಾವಿರ ಪ್ರೌಢಶಾಲಾ ಬಾಲಕಿಯರು 10 ತಿಂಗಳ ಕಾಲ ಪ್ರತಿ ತಿಂಗಳು, ಈ ವೈಯಕ್ತಿಕ ನೈರ್ಮಲ್ಯ ಕಿಟ್ಸ್‌ಗಳನ್ನು ಪಡೆಯಲಿದ್ದಾರೆ.
ಈ ಕಿಟ್ಸ್‌ಗಳಿಂದ ಬಾಲಕಿಯರ ಲೈಂಗಿಕ ಅಂಗಾಂಗಳ ಸೋಂಕು (ರಿ ಪ್ರಾಡಕ್ಟಿವ್ ಟ್ರ್ಯಾಕ್ ಇನ್ಫೆಕ್ಷನ್) ಹಾಗೂ ಬರಬಹುದಾದ ಗರ್ಭ ಕ್ಯಾನ್ಸರ್, ಬಂಜೆತನ ತಡೆಯಲು ಸಹಾಯಕವಾಗುವುದು.
ಜಿಪಂ ಉಪಾಧ್ಯಕ್ಷೆ ಎಂ.ಕೆ. ಸುಚಿತ್ರ, ವಿಪಕ್ಷ ನಾಯಕ ಮಾರುತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದ್ವಾರಕೀಶ್, ಸದಸ್ಯ ರೇವಣ್ಣ ಮಾಲೇಗೌಡ, ಪ್ರಭಾರ ಜಿಲ್ಲಾಧಿಕಾರಿ ಡಾ. ಅಜಯ್‌ನಾಗಭೂಷಣ್, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸದಸ್ಯ ಶ್ರೀಕಂಠ, ಗ್ರಾಪಂ ಸದಸ್ಯರಾದ ಗಿರೀಶ್, ಪ್ರಭುಸ್ವಾಮಿ, ರೇವಮ್ಮ ಕೆಂಪೇಗೌಡ, ರಮೇಶ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ. ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ತಾ. ಆರೋಗ್ಯಾಧಿಕಾರಿ ಡಾ. ನಾಗೇಶ್ ಇದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಬಗ್ಗೆ ವಿವರಿಸಿ, ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕಿಯರ ಶಾರೀರಿಕ ಮತ್ತು ಮಾನಸಿಕ ಹಾಗೂ ಅಂಗಾಂಗಗಳ ಲೈಂಗಿಕ ಬದಲಾವಣೆಯಿಂದ ಸುರಕ್ಷಿತ ಆರೋಗ್ಯ ಕಾಪಾಡಿಕೊಳ್ಳಲು ಈ ವೈಯಕ್ತಿಕ ನೈರ್ಮಲ್ಯತಾ ಕಿಟ್ಸ್ ಹೆಚ್ಚು ಸಹಾಯಕಾರಿಯಾಗಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

