ನೀರು ಪೋಲು ತಡೆದ ಜಸ್ಕೋ
ಮೈಸೂರು: ನಗರದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವ ಸಂದರ್ಭದಲ್ಲೇ ಇಲ್ಲಿನ ಕೃಷ್ಣಮೂರ್ತಿಪುರಂ ರಾಮ ಅಯ್ಯರ್ ರಸ್ತೆಯ ಅಶೋಕ ಕ್ಲಿನಿಕ್ ಬಳಿ ಹಲವು ದಿನಗಳಿಂದ ನೀರು ಪೋಲಾಗುತ್ತಿದ್ದನ್ನು ಜಸ್ಕೋ ದುರಸ್ತಿ ಮಾಡಿ ತಡೆದಿದೆ. ನೀರು ಪೋಲಾಗುತ್ತಿದ್ದ ಬಗ್ಗೆ ಕನ್ನಡಪ್ರಭ ಜ.22 ರಂದು 5 ದಿನಗಳಿಂದ ನೂರು ಪೋಲು ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಜಸ್ಕೋ, ಪೈಪ್ ಅಳವಡಿಸಿ ಅರ್ಧಕ್ಕೆ ಬಿಟ್ಟಿದ್ದನ್ನು ಸರಿಪಡಿಸಿ ನೀರು ಪೋಲಾಗದಂತೆ ಬಂದ್ ಮಾಡಿದೆ.
ಆದಿಶ್ರೀಗಳಿಗೆ ಇಂದು ಶ್ರದ್ಧಾಂಜಲಿ
ಮೈಸೂರು: ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜ.24ರ ಸಂಜೆ 5ಕ್ಕೆ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ತ್ರಿವಿಧ ದಾಸೋಹಿಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಮಾಡಿದ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ.
ಹಲ್ಲೆ ಮಾಡಿದ್ದ ಮೂವರಿಗೆ ಜೈಲು
ಮೈಸೂರು: ಮಹಿಳೆ ಮೇಲೆ ಹಲ್ಲೆ ನಡೆಸಿದ ಒಂದೇ ಕುಟುಂಬದ ಮೂವರಿಗೆ ಇಲ್ಲಿನ ನ್ಯಾಯಾಲಯವು ತಲಾ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮೈಸೂರು ತಾಲೂಕು ಚೋರನಹಳ್ಳಿ ನಿವಾಸಿಗಳಾದ ದೊಡ್ಡ ದೇವಯ್ಯ ಎಂಬವರ ಪುತ್ರ ದೊಡ್ಡಯ್ಯ, ಇವರ ಪತ್ನಿ ಮಹಾದೇವಮ್ಮ ಮತ್ತು ಪುತ್ರ ಮರಿಸ್ವಾಮಿ ಶಿಕ್ಷೆಗೆ ಗುರಿಯಾದವರು. ಈ ಮೂವರು ಚೋರನಹಳ್ಳಿ ಗ್ರಾಮದ ದೇವಣ್ಣ ಎಂಬವರ ಪತ್ನಿ ರಾಧಾ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. 2010ರ ಜು.18 ರಂದು ರಾಧಾ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಅಲಸಂದೆ ಕಟಾವಿಗೆ ಹೋಗಿದ್ದರು. ಈ ವೇಳೆ ದೊಡ್ಡಯ್ಯ, ಮಹಾದೇವಮ್ಮ ಮತ್ತು ಮರಿಸ್ವಾಮಿ ದನಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದರು. ಇದನ್ನು ಪ್ರಶ್ನಿಸಿದ ರಾಧಾರೊಂದಿಗೆ ಮೂವರು ಜಗಳ ತೆಗೆದು, ರಾಧಾ ಕೈಗೆ ಕುಡುಗೋಲಿನಿಂದ ಹೊಡೆದು ಗಾಯಗೊಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

