ನೀರಿಲ್ಲದೆ ಒಣಗುತ್ತಿರುವ ಮುದುಗುಪ್ಪೆ ಕೆರೆ
ಸಾಲಿಗ್ರಾಮ: ಸಾಲಿಗ್ರಾಮ ಸಮೀಪ ಮುದುಗುಪ್ಪೆ ಗ್ರಾಮದ ಗೆಂಡೆಕೆರೆಯು ನೀರಿಲ್ಲದೆ ಒಣಗುತ್ತಿದೆ.
ಕೆ.ಆರ್. ನಗರ ತಾಲೂಕು ಸಾಲಿಗ್ರಾಮ ಸಮೀಪವಿರುವ ಈ ಕೆರೆಯಲ್ಲಿ ನೀರಿಲ್ಲದೇ ಒಣಗಿರುವುದು, ಅಲ್ಲದೆ ಬೇಸಿಗೆ ಪ್ರಾರಂಭವಾಗುವ ಮುನ್ನವೆ ಖಾಲಿಯಾಗಿರುವುದರಿಂದ ಆತಂಕ ಸೃಷ್ಟಿಸಿದೆ ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸುನಯ್‌ಗೌಡ ಹೇಳಿದ್ದಾರೆ.
ಇದೇ ರೀತಿ ಅಕ್ಕಪಕ್ಕದಲ್ಲಿರುವ ನಿಂಗನಕಟ್ಟೆ, ಪುಟ್ಟನಕಟ್ಟೆ, ಕೆಂಚನಹಳ್ಳಿ, ಸಂಕನಹಳ್ಳಿ ಹಾಗೂ ಬಾಚಹಳ್ಳಿ ಕೆರೆಗಳು ಬತ್ತಿಹೋಗಿದ್ದು, ಒಂದು ಹನಿ ನೀರಿಲ್ಲದೆ ಜನಗಳು ಮತ್ತು ಪ್ರಾಣಿಗಳಿಗೆ ಭಯ ಉಂಟಾಗಿ ಜೀವನ ಸಾಗಿಸುತ್ತಿದ್ದಾರೆ. ಮುದುಗುಪ್ಪೆ ಗ್ರಾಮದಲ್ಲಿ ದನಕರುಗಳಿಗೆ ನೀರುಣಿಸಲು ಎರಡು ಕಿಮೀ ದೂರದ ಹರೀಹಳ್ಳಿ ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
ಹಲವಾರು ವರ್ಷಗಳಿಂದ ಗ್ರಾಮದ ಜನ ಹಾಗೂ ಜಾನುವಾರುಗಳಿಗೆ ನೀರುಣಿಸುತ್ತಿರುವ ಈ ಕೆರೆ, ಬೇಸಿಗೆಯಲ್ಲೂ ನೀರುಣಿಸುತ್ತಿತ್ತು. ಆದರೆ ಕೆರೆಯಲ್ಲಿ ನೀರಿಲ್ಲದೆ ಒಣಗಿರುವುದು ಈ ಭಾಗದ ಜನತೆಗೆ ನೋವಾಗಿದೆ. ಕೆರೆಯು ಬತ್ತಿಹೋಗಿ ಇರುವ ಅಂತರ್ಜಲಮಟ್ಟ ಕುಸಿದರೆ ಮುಂದೆ ಇರುವ ಕೊಳವೆ ಬಾವಿಯಲ್ಲೂ ನೀರು ಸಿಗುವುದಿಲ್ಲ. ಭಯದ ಭೀತಿಯಲ್ಲಿ ಜನರು ಗುಳೆಹೋಗುವ ಪರಿಸ್ಥಿತಿ ಉದ್ಭವವಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿ: ಹಾರಂಗಿ ಎಡದಂಡೆ ನಾಲಾ ವ್ಯಾಪ್ತಿಗೆ ಈ ಕೆರೆಕಟ್ಟೆಗಳು ಬರುವುದರಿಂದ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ನೀರಿಲ್ಲದೆ ಒಣಗಿದ್ದು, ಕೆರೆಯ ಸುತ್ತಲಿನ ಜಮೀನಿನಲ್ಲಿ ಒಣಗುತ್ತಿರುವ ಬೆಳೆಗೂ ಪಂಪ್‌ಸೆಟ್, ಬೋರ್‌ವೆಲ್ ಹಾಗೂ ಅಂತರ್ಜಲವೃದ್ಧಿಗೂ ಸಹಕಾರಿಯಾಗಿತ್ತು. ನಾಲೆಯಲ್ಲಿ ನೀರು ಹರಿಸದೆ ಇರುವ ಕಾರಣ ಈ ಭಾಗದ ರೈತರು ಬೆಳೆಯಿಂದ ವಂಚಿತರಾಗಿದ್ದಾರೆ. ಹಂತಹಂತವಾಗಿ ಅಧಿಕಾರಿಗಳು ನೀರನ್ನು ಹರಿಸಿದರೂ ಈ ಭಾಗಕ್ಕೆ ಮಾತ್ರ ನೀರನ್ನು ಹರಿಸಲೆ ಇಲ್ಲ ಎಂದು ದೂರಿದರು. ಕಾವೇರಿ ನೀರಾವರಿ ನಿಗಮವು ಸಾಲಿಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಲೆಗಳಿಗೆ ನೀರನ್ನು ಹರಿಸಿದ್ದೇವೆ. 19 ಕೆರೆಗಳು ಸೇರಿದಂತೆ ಇತರೆ ಕಟ್ಟೆಗಳು ನೀರು ನಿರ್ವಹಣೆ ಮಾಡಿ ತುಂಬಿಸಲಾಗಿದೆ. ಈಗಲೂ ಕೆರೆಕಟ್ಟೆಗಳಲ್ಲಿ ನೀರು ಇದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಕುರುಡು ಮಾಹಿತಿ ನೀಡಿರುವುದು ನಾಚಿಕೆಗೇಡಿನ ಸಂಗತಿ. ಸೌಜನ್ಯಕ್ಕೂ ಸಹ ಈ ಭಾಗಕ್ಕೆ ಯಾವ ಅಧಿಕಾರಿಗಳು ಬಂದಿಲ್ಲ. ಎಲ್ಲೋ ಕುಳಿತು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ದಯಮಾಡಿ ಅಧಿಕಾರಿಗಳೆ ಈ ಭಾಗಕ್ಕೆ ಬಂದು ಪ್ರತ್ಯಕ್ಷವಾಗಿ ನೋಡಬೇಕೆಂದು ಮನವಿ ಮಾಡಿದ್ದಾರೆ. ಸಂಘದ ಕಾರ್ಯದರ್ಶಿ ಉಮೇಶ್‌ಗೌಡ, ರುದ್ರೇಶ್, ಹೊಸಅಗ್ರಹಾರ ಶಿವಪ್ಪ, ಮುದುಗುಪ್ಪೆ ಬಲರಾಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

