ನಗರದ ವಿವಿಧೆಡೆ ಸುಭಾಷ್ ಚಂದ್ರಬೋಸ್ ಜಯಂತಿ
ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಪ್ರಾಣ ತೆತ್ತವರಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಮೈಸೂರಿನ ಯುವಕ ರಾಮಸ್ವಾಮಿ ಪ್ರಮುಖರು. ಹೀಗಾಗಿ ಮೈಸೂರಿನಲ್ಲಿ ರಾಮಸ್ವಾಮಿ ಅವರ ಬಗ್ಗೆ ತಿಳಿಸುವ ಕಾರ್ಯ ಕೈಗೊಂಡರೆ 20 ಲಕ್ಷ ನೀಡುವುದರೊಂದಿಗೆ ಸಹಕಾರ ನೀಡುತ್ತೇನೆ ಎಂದು ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ಸ್ಪಿರಿಟ್ ಈವೆಂಟ್ಸ್ ಸಂಸ್ಥೆಯು ನಗರದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 116ನೇ ಜನ್ಮೋತ್ಸವದಲ್ಲಿ ಭಾಗವಹಿಸಿ ನೇತಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಮಹಾರಾಜ ಕಾಲೇಜಿನ ಬಿಎ ವಿದ್ಯಾರ್ಥಿ ರಾಮಸ್ವಾಮಿ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ಪ್ರಾಣತೆತ್ತ. ಆತನ ದೇಶಪ್ರೇಮದ ಬಗ್ಗೆ ತಿಳಿಸಲು ಇಂದಿನ ಯುವಕರು ಪ್ರಯತ್ನಿಸಬೇಕು. ಆತನ ಬಗ್ಗೆ ತಿಳಿಸಲು ರಾಮಸ್ವಾಮಿ ವೃತ್ತದಲ್ಲಿ ಭಾವಚಿತ್ರ ನಿರ್ಮಿಸಿ ಇತಿಹಾಸ ಬರೆಯಬೇಕು. ಇದಕ್ಕೆ ಬೇಕಾದ ಅನುದಾನ ಮತ್ತು ಸಹಕಾರ ನೀಡುತ್ತೇನೆ ಎಂದರು.
ದೇಶ ವಿರೋಧಿ ಹೇಳಿಕೆ: ಕೆಲವರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ನಿಜವಾದ ದೇಶಪ್ರೇಮಿ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಾನೆ. ದೇಶದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.
ಇದಕ್ಕೂ ಮೊದಲು ಉದ್ಯಾನದಲ್ಲಿರುವ ದಂಡಿಯಾತ್ರೆ ಪ್ರತಿಮೆ ಮುಂಭಾಗ ಸ್ಯಾಕ್ಸೋಫೋನ್ ಮತ್ತು ವಯೋಲಿನ್ ಸಂಗೀತ ವಾದ್ಯಗಳ ಮಿಳಿತದಿಂದ ದೇಶಭಕ್ತಿ ಗೀತೆಗಳ ಜುಗಲ್‌ಬಂದಿಯನ್ನು ಪ್ರಸ್ತುತಪಡಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ಬಿ.ಲಿಂಗಯ್ಯ, ಪಾಲಿಕೆ ಪ್ರತಿಪಕ್ಷ ನಾಯಕ ಮ.ವಿ. ರಾಮಪ್ರಸಾದ, ಪಾಲಿಕೆ ಸದಸ್ಯ ಎಂ.ಡಿ. ಪಾರ್ಥಸಾರಥಿ, ಆರ್‌ಎಸ್‌ಎಸ್‌ನ ಶಿವರಾಮು, ಕಾಂಗ್ರೆಸ್ ಮುಖಂಡ ಬಾಬು, ವಿದ್ಯಾರ್ಥಿ ಮುಖಂಡ ಜಯರಾಮು ಹೆಗಡೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ವಿ. ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

