ನಂಜನಗೂಡು ಎಪಿಎಂಸಿ ಬಿಜೆಪಿ ಪಾಲು
ನಂಜನಗೂಡು: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಬುಧವಾರ ನಡೆದು ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗುರುಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಚಂದ್ರಪ್ಪ ಆಯ್ಕೆಯಾದರು.
ಒಟ್ಟು 16 ಸದಸ್ಯ ಬಲದ ಎಪಿಎಂಸಿಯಲ್ಲಿ ಎ.ಎಂ. ಗುರುಸ್ವಾಮಿ 9 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕೆಜೆಪಿ ಅಭ್ಯರ್ಥಿ, ಹಾಲಿ ಅಧ್ಯಕ್ಷ ಚಿನ್ನಂಬಳ್ಳಿ ಮಂಜುನಾಥ್ 7 ಮತಗಳನ್ನು ಪಡೆದು ಪರಾಭವ ಹೊಂದಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎ.ಎಂ. ಚಂದ್ರಪ್ಪ ಮತ್ತು ಪ್ರತಿಸ್ಪರ್ಧಿ ಕೆಜೆಪಿಯ ದೊರೆಸ್ವಾಮಿ ತಲಾ 8 ಮತಗಳನ್ನು ಪಡೆದರು. ಲಾಟರಿ ಮೂಲಕ ಜಯಶಾಲಿಯ ಆಯ್ಕೆ ನಡೆಯಿತು.
ಚಂದ್ರಪ್ಪ ಅವರಿಗೆ ಅದೃಷ್ಟ ಒಲಿದುಬಂತು. ಇತ್ತೀಚೆಗಷ್ಟೆ ಪಟ್ಟಣದಲ್ಲಿ ನಡೆದ ಸಮಾವೇಶದ ನಂತರ ಕೆಜೆಪಿಯಲ್ಲಿ ಭಾರಿ ಹುಮ್ಮಸ್ಸು ಮನೆ ಮಾಡಿತ್ತು. ಆದರೆ ಮುಖಂಡ ಕಾ.ಪು. ಸಿದ್ದಲಿಂಗಸ್ವಾಮಿಯ ಪರಮಾಪ್ತ ವಲಯಕ್ಕೆ ಸೇರಿದವರೆಂದೆ ಗುರುತಿಸಲ್ಪಡುವ ಮಂಜುನಾಥ್ ಸೋಲು ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿದೆ. ನೂತನ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಕೆಜೆಪಿಯ ಕೆಲವು ಮುಖಂಡರ ಸರ್ವಾಧಿಕಾರಿ ಧೋರಣೆ ವಿರೋಧಿಸಿ ತಾವು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾಗಿ ಹೇಳಿದರು. ಉಪಾಧ್ಯಕ್ಷ ಚಂದ್ರಪ್ಪ ಮಾತನಾಡಿ, ನಮ್ಮ ಪಕ್ಷದವರೆ ನನಗೆ ಮೋಸ ಮಾಡಿದ್ದರಿಂದ ಲಾಟರಿ ಮೂಲಕ ಆಯ್ಕೆಯಾಗುವ ಪರಿಸ್ಥಿತಿ ಬಂದೊದಗಿತು ಎಂದು ಆರೋಪಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸಿದ್ದಲಿಂಗಪ್ಪ, ದೇವನೂರು ಪ್ರತಾಪ್, ಚುಂಚನಹಳ್ಳಿ ನಾಗರಾಜು, ಎನ್.ಆರ್. ಕೃಷ್ಣಪ್ಪಗೌಡ, ಡಾ.ಶಿವರಾಂ, ಗುರುಪಾದಸ್ವಾಮಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುಬ್ಬಣ್ಣ, ಬಿ.ಎಸ್. ಮಹದೇವಪ್ಪ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

