ಧರ್ಮ ಆಧಾರಿತ ಮತ ಚಲಾವಣೆ ಬೇಡ
ಸಾಲಿಗ್ರಾಮ: ಪ್ರಜಾಪ್ರಭುತ್ವದಲ್ಲಿ ನ್ಯಾಯಸಮ್ಮತ ಚುನಾವಣೆಗಳು ದೇಶದ ಘನತೆಯನ್ನು ಎತ್ತಿ ಹಿಡಿಯುತ್ತವೆ. ಆದರೆ ಇಂದಿನ ಚುನಾವಣೆಗಳು ಆ ಘನತೆಯನ್ನು ಹಾಳು ಮಾಡುತ್ತಿವೆ ಎಂದು ತಹಸೀಲ್ದಾರ್ ಡಿ.ಬಿ. ನಟೇಶ್ ವಿಷಾದಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರಿಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರನು ನಿರ್ಭಿತಿಯಿಂದ ಮತ ಚಲಾಯಿಸುವ ವಾತಾವರಣ ಸೃಷ್ಟಿಯಾಗಬೇಕು. ಜತೆಗೆ ಜಾತಿ, ಮತ, ಧರ್ಮದ ಆಧಾರದ ಮೇಲೆ ಮತ ಚಲಾಯಿಸುವ ಅನಿಷ್ಟ ಪದ್ಧತಿ ತೊಲಗಬೇಕು ಎಂದರು.
ಮತದಾರ ತನ್ನ ಮತವನ್ನು ಸಮರ್ಪಕವಾಗಿ ಚಲಾಯಿಸದಿದ್ದರೆ, ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ. ಮತ ಚಲಾವಣೆ ಎಲ್ಲರ ಹಕ್ಕು ಮತ್ತು ಜಾಗೃತರಾಗಿ ಮತದಾನ ಮಾಡುವುದು ದೇಶದ ನಾಗರಿಕನ ಕರ್ತವ್ಯ. ಯಾರಿಗಾದರೂ ಮತದಾನ ಮಾಡಿ, ಆದರೆ ಚುನಾವಣೆಗೆ ಸ್ವರ್ಧಿಸುವವರು ನಮ್ಮ ಆಶಯಕ್ಕೆ ದುಡಿಯುತ್ತಾರೆಯೆ ಎಂದು ಯೋಚಿಸಿ ಎಂದು ಸಲಹೆ ನೀಡಿದರು. ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದರೆ ಜನಾದೇಶಕ್ಕೆ ಗೌರವ ಇರುವುದಿಲ್ಲ. ಮತದಾನದ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ. ಇದರಿಂದ ರಾಷ್ಟ್ರದ ಬದಲಾವಣೆ ಸಾಧ್ಯ ಎಂದು ನಟೇಶ್ ಅಭಿಪ್ರಾಯಪಟ್ಟರು.
ಉಪತಹಸೀಲ್ದಾರ್ ತಿಮ್ಮಯ್ಯ, ಶಿರಸ್ತೇದಾರ್ ಗುರುಪ್ರಸಾದ್, ಚುನಾವಣಾ ಶಾಖಾಧಿಕಾರಿ ಶಿವಣ್ಣ, ಪ್ರಭಾರ ಪ್ರಾಂಶುಪಾಲ ಶಿವಕುಮಾರಸ್ವಾಮಿ, ಪ್ರಾಧ್ಯಾಪಕರಾದ ರಾಘು, ಜ್ಯೋತಿ, ಮೃತ್ಯುಂಜಯ, ಡಾ. ಸತೀಶ್‌ಚಂದ್ರ, ಮಂಜುನಾಥ್, ಶ್ರೀನಿವಾಸ್ ದೇವಮಣ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

