ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿ
ಮೈಸೂರು: ನಾಲ್ಕನೇ ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್‌ಸಿಸಿ ಘಟಕದಿಂದ ಸರಸ್ವತಿಪುರಂ ಜೆಎಸ್‌ಎಸ್ ಪ್ರೌಢಶಾಲೆಯ ಜೂನಿಯರ್ ಎನ್‌ಸಿಸಿ ಕೆಡೆಟ್‌ಗಳಿಗಾಗಿ ಎರಡು ದಿನಗಳ ವಾಯು ತರಬೇತಿ ಶಿಬಿರ ನಡೆಯಿತು.
ಕಮಾಂಡಿಂಗ್ ಅಧಿಕಾರಿ ಜೋಸೆಫ್ ವರ್ಗಿಸ್ ವಾಯು ತರಬೇತಿ ನೀಡಿದ್ದು, ಸಹಾಯಕ ವ್ಯವಸ್ಥಾಪಕ ಎಂ.ಆರ್. ವಂಶಿ ಕೃಷ್ಣ ಏರ್ ಕಂಟ್ರೋಲ್ ಬಗ್ಗೆ ಸಲಹೆ ನೀಡಿದರು. ಈ ತರಬೇತಿಯಲ್ಲಿ ಸುಮಾರು 50 ಕೆಡೆಟ್‌ಗಳು ಭಾಗವಹಿಸಿ ಸೂಕ್ತ ಮಾರ್ಗದರ್ಶನ ಪಡೆದರು. ಕೆಡೆಟ್‌ಗಳು ಬಹಳ ಉತ್ಸಾಹದಿಂದ ಭಾಗವಹಿಸಿ ಮಾರ್ಗದರ್ಶನ ಪಡೆದು ಹರ್ಷಗೊಂಡರು.
ಶಿಬಿರದಲ್ಲಿ ಆಡಳಿತಾಧಿಕಾರಿ ಅಫ್ತಾಬ್ ಆಲಮ್ ಹಾಜರಿದ್ದರು. ತರಬೇತಿ ವಿಭಾಗದ ಜೂನಿಯರ್ ವಾರೆಂಟ್ ಆಫೀಸರ್ ಜೆ.ಎಸ್. ಹರ್ಷ, ಎನ್‌ಸಿಸಿ ಅಧಿಕಾರಿ ಅಪ್ಪಾಸಾಬ್ ಮಾಲಿ, ಮಾಸ್ಟರ್ ವಾರೆಂಟ್ ಅಧಿಕಾರಿ ಎ.ಕೆ. ಸಿಂಗ್ ಹಾಗೂ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

