ಮಂಡ್ಯ

ಕೃಷ್ಣರಾಜಸಾಗರದಲ್ಲಿ 100 ಅಡಿ ನೀರು

Published On :

ಮಂಡ್ಯ: ರೈತರಿಗೆ ಸಂತಸದ ಸಂಗತಿ, ಕೆಆರ್‌ಎಸ್ ಜಲಾಶಯದಲ್ಲಿ 100 ಅಡಿ ನೀರು, ಅದೇ ರೀತಿಯಲ್ಲಿ ಕಳೆದ ಒಂದು ವಾರದಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಮುಂಗಾರ ಕೊರತೆಯ ಆತಂಕದ ನಡುವೆಯೂ ಸೋಮವಾರ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದಲ್ಲಿ 100 ಅಡಿ ನೀರು ಬಂದಿದೆ. ಅಣೆಕಟ್ಟು ಭರ್ತಿಗೆ ಇನ್ನೂ 24 ಅಡಿ ಬಾಕಿ ಇದೆ. ಕೊಡಗು ಮತ್ತು ಮಲೆನಾಡಿನ ಪ್ರದೇಶದಲ್ಲಿ ಮಳೆಯ ಅಬ್ಬರ ಇನ್ನೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದಿನ 15 ದಿನದೊಳಗೆ ಆಣೆಕಟ್ಟೆ ಭರ್ತಿಯಾಗುವುದು ನಿಶ್ಚಿತ.   ಕಳೆದ ವರ್ಷ ಜುಲೈ ಅಂತ್ಯಕ್ಕೆ ಕೆಆರ್‌ಎಸ್ ಜಲಾಶಯ ಭರ್ತಿಯಾಗಿತ್ತು. ಈ ವರ್ಷ ಮುಂಗಾರು ವಿಫಲವಾದರೂ ರೈತರು ಮುಖದಲ್ಲಿ ಮಂದಹಾಸ ಮೂಡಿಸಲು ವರುಣ ದೇವ ತಡವಾಗಿಯಾದರೂ ಸಮೃದ್ಧಿಯಾಗಿ ಮಳೆ ಸುರಿಸಿದ್ದಾನೆ. ಹೀಗಾಗಿ ಈ ವರ್ಷ ಜುಲೈ 21 ರ ವೇಳೆಗೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 100 ಅಡಿ ನೀರು ತುಂಬಿದೆ. ಒಳ ಹರಿವಿನ ಪ್ರಮಾಣ ಕೂಡ ಹೆಚ್ಚು ಕಡಮೆ ಆಗಿದೆ.
ನಾಲೆಗಳಿಗೆ ನೀರಿಲ್ಲ
ಕೆಆರ್‌ಎಸ್ ಜಲಾಶಯದಲ್ಲಿ 100 ಅಡಿ ನೀರು ಬಂದಿದ್ದರೂ ಇದುವರೆಗೂ ಮಂಡ್ಯದ ಯಾವುದೇ ನಾಲೆಗಳಿಗೆ ನೀರು ಹರಿಸಿಲ್ಲ. ತಮಿಳುನಾಡಿಗೆ ಅಂದಾಜು 15 ರಿಂದ 20 ಟಿಎಂಸಿ ನೀರು ಹರಿಸಿರುವ ಸರ್ಕಾರ ಜಿಲ್ಲೆಯಲ್ಲಿನ ನಾಲೆಗಳಿಗೆ ನೀರು ಹರಿಸಿಲ್ಲ.  ವಿಸಿ ನಾಲೆ ಸೇರಿದಂತೆ ಪ್ರಮುಖ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕಾವೇರಿ ನೀರಾವರಿ ನಿಗಮವು ಬೇಸಿಗೆ ಸಮಯದಲ್ಲಿ ಕಾಮಗಾರಿಗಳನ್ನು ಪೂರೈಸದೇ ಮಳೆಗಾಲದಲ್ಲೇ ಆತುರ ಆತುರ ಆತುರವಾಗಿ ಕಳಪೆ ಗುಣ ಮಟ್ಟದ ಕಾಮಗಾರಿಗಳನ್ನು ಮಾಡಿ ಮುಗಿಸುವ ಹುನ್ನಾರ ನಡೆಸಿದೆ. ಹುಲಿಕೆರೆ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸದ ನಂತರವೇ ನಾಲೆಗಳಿಗೆ ನೀರು ಬಿಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಇನ್ನೂ ಕನಿಷ್ಠ10 ದಿನಗಳ ಕಾಲ ನಾಲೆಗಳಿಗೆ ನೀರು ಬಿಡುವ ಯಾವುದೇ ಆಲೋಚನೆಯನ್ನು ಅಧಿಕಾರಿಗಳು ಮಾಡಿಲ್ಲ.
ಕಳೆದ ವರ್ಷ ಇದೇ ದಿನ
118.80 ಅಡಿ
ಒಳ ಹರಿವು
24,387
ಹೊರ ಹರಿವು
4,068

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.