ಮಂಡ್ಯ

ವೈರಮುಡಿ ಉತ್ಸವಕ್ಕೆ ವೈಭವದ ತೆರೆ

Published On :

ಮೇಲುಕೋಟೆ: ಹತ್ತು ಹಲವು ವಿಶೇಷಗಳೊಂದಿಗೆ ವೈರಮುಡಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಬಲರಾಮ ಚೆಲುವರಾಸ್ವಾಮಿಯನ್ನು ಆರಾಧಿಸಿದ ದಿನದ ಪ್ರತೀಕವಾಗಿ ವೈರಮುಡಿ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು. ಮೂಲಮೂರ್ತಿ ನಾರಾಯಣಸ್ವಾಮಿ ಮತ್ತು ಉತ್ಸವಮೂರ್ತಿ ಚೆಲುವರಾಯಸ್ವಾಮಿಯನ್ನು ಸಹಸ್ರಾರು ಭಕ್ತರು ದರ್ಶನ ಮಾಡಿದರು.
ಇದರ ಜೊತೆಗೆ ಯದುಗಿರಿನಾಯಕಿ ಮತ್ತು ಯೋಗನರಸಿಂಹಸ್ವಾವುಗೆ ಮಹಾಭಿಷೇಕ ನೆರವೇರಿತು. ವೈರಮುಡಿ ಜಾತ್ರಾ ಅವಧಿಯಲ್ಲಿ ಪ್ರಮುಖ ಕಾರ್ಯಕ್ರಮಗಳಾದ ನಾಗವಲ್ಲಿ ಮಹೋತ್ಸವ ವೈರಮುಡಿ ಕಿರೀಟಧಾರಣ  ಮಹೋತ್ಸವ, ಮಹಾರಥೋತ್ಸವ, ತೆಪ್ಪೋತ್ಸವ ಹಾಗೂ ತೀರ್ಥಸ್ನಾನಗಳಂದು ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಎಲ್ಲಾ ಉತ್ಸವಗಳು, ವಾಹನೋತ್ಸವಗಳೂ ಸಹ ವೈಭವಯುತವಾಗಿ ನೆರವೇರಿದವು. ಈ ಸಲ ವೈರಮುಡಿ ಉತ್ಸವ ಬೆಳಗಿನ 4ಗಂಟೆಯವರೆಗೂ ನಡೆಯುವ ಮೂಲಕ ಲಕ್ಷಾಂತರ ಭಕ್ತರಿಗೆ ದರ್ಶನ ದೊರೆಯಿತು. ಇದು ಭಕ್ತರ ಪ್ರಶಂಸೆಗೂ ಪಾತ್ರವಾಯಿತು.
ವಿವಿಧ ಉತ್ಸವಗಳ ದರ್ಶನಕ್ಕೆ ಬಂದ ಭಕ್ತರಿಗೆ ತ್ರಿದಂಡಿಶ್ರಿಮನ್ನಾರಾಯಣಜೀಯರ್ ಮಠ, ಆದಿಚುಂಚನಗಿರಿಮಠ, ಅಹೋಬಿಲಮಠ, ಶಠಗೋಪ ರಾಮಾನುಜಕೂಟಂ ಸೇರಿದಂತೆ ಹಲವು ಸೇವಾಸಂಸ್ಥೆಗಳು ಹಾಗೂ ಹಲವಾರು ಭಕ್ತರು ಉಚಿತ ಅನ್ನದಾನದ ವ್ಯವಸ್ಥೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.