ಮಂಡ್ಯ

ವಾಹನ ಅಡ್ಡಗಟ್ಟಿ ನಗದು ದರೋಡೆ

Published On :

ಮಳವಳ್ಳಿ: ರಾತ್ರಿ ವೇಳೆ ವಾಹನವೊಂದನ್ನು ಅಡ್ಡಗಟ್ಟಿ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ, ಹಣ ದೋಚಿ ಪರಾರಿಯಾಗಿರುವ  ಘಟನೆ ತಾಲೂಕಿನ ಮಳವಳ್ಳಿ-ಮದ್ದೂರು ಮುಖ್ಯ ರಸ್ತೆಯ 10ನೇ ಮೈಲಿ ಬಳಿ ಜರುಗಿದೆ.  ತಾಲೂಕಿನ ತಳಗವಾಡಿ ಗ್ರಾಮದ ಚಿಕ್ಕಣ್ಣ ಎಂಬುವರ ಮಗ  ಚಂದ್ರಶೇಖರ್ ಹಣ ಕಳೆದುಕೊಂಡವರಾಗಿದ್ದು, ಶುಕ್ರವಾರ ರಾತ್ರಿ ತಮ್ಮ ಬೊಲೆರೋ ಗೂಡ್ಸ್ ಟೆಂಪೋದಲ್ಲಿ ಎಳನೀರು ತುಂಬಿಕೊಂಡು ಮದ್ದೂರು ಎಪಿಎಂಸಿ ಯಾರ್ಡ್‌ಗೆ ಸಾಗಾಣಿಕೆ ಮಾಡಿ ರಾತ್ರಿ 11 ಗಂಟೆಯ ಸಮಯದಲ್ಲಿ ಹಿಂತಿರುಗುತ್ತಿದ್ದಾಗ ಈ ಕೃತ್ಯ ಜರುಗಿದೆ.  ಎರಡು ಬೈಕ್‌ಗಳಲ್ಲಿ 7 ಮಂದಿ ಯುವಕರಿದ್ದ ದುಷ್ಕರ್ಮಿಗಳ ಗುಂಪೊಂದು ಏಕಾಏಕಿ  ಬೊಲೆರೋ ವಾಹನ ಅಡ್ಡಗಟ್ಟಿ ಚಾಲಕ ಚಂದ್ರಶೇಖರ್ ಅವರನ್ನು ವಾಹನದಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಅಸ್ವಸ್ಥನಾಗಿದ್ದ ಚಂದ್ರಶೇಖರ್ ಜೇಬಿನಲ್ಲಿದ್ದ ಎಳೆ ನೀರು ಮಾರಿದ ಬಾಬ್ತಿನ ಹಣ ರು. 8,600 ದೋಚಿ  ಪರಾರಿಯಾಗಿದ್ದಾರೆ ಎನ್ನಲಾಗಿದೆ. ಠಾಣೆಗೆ ದೂರು ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.