ಮಂಡ್ಯ

ಬಾರದ ಕಬ್ಬುಬಾಕಿ ಹಣ: ಧರಣಿ

Published On :

ಭಾರತೀನಗರ: ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಮೂರು ತಿಂಗಳಾದರೂ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ತಳಗವಾಡಿ, ದೇವಿಪುರ, ಮಾಲಗಾರನಹಳ್ಳಿ ಮತ್ತಿತರ ಗ್ರಾಮದ ರೈತರು ಕಾರ್ಖಾನೆಯ ಅತಿಥಿ ಗೃಹ ಹಾಗೂ ಅಕೌಂಟ್ ಕಚೇರಿಗೆ ಬೀಗ ಜಡಿದು ಪ್ರತಿಭಟನಾ ಧರಣಿ ನಡೆಸಿದರು.
ಅತಿಥಿ ಗೃಹದ ಬಳಿ ಧರಣಿ ನಡೆಸಿದ ರೈತರು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿ ಕೂಡಲೇ ಹಣ ಪಾವತಿಮಾಡಬೇಕೆಂದು ಆಗ್ರಹಿಸಿದರು.
ಸಿಪಿಎಂ ಮುಖಂಡ ತಳಗವಾಡಿ ಆನಂದ್ ಮಾತನಾಡಿ,  ಕಳೆದ 15 ರಂದು ಬಾಕಿ ಹಣ ಪಾವತಿಗಾಗಿ ಚಳವಳಿ ನಡೆಸಿದ ಸಂದರ್ಭದಲ್ಲಿ ಮಾ.25 ರೊಳಾಗಿ 18 ರಿಂದ 21 ಬ್ಯಾಚ್‌ಗಳ ತನಕ ಪೂರ್ತಿ ಹಣ ಪಾವತಿ ಮಾಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರೂ, ಇಲ್ಲಿಯವರೆಗೂ ಹಣ ಪಾವತಿಮಾಡಿಲ್ಲ  ಎಂದು ಕಿಡಿಕಾರಿದರು.
ಬರದಲ್ಲಿ ತಲ್ಲಣಗೊಳ್ಳುತ್ತಿರುವ ರೈತರು ಕಷ್ಟಪಟ್ಟು ಕಾರ್ಖಾನೆಗೆ ಕಬ್ಬು ಸಾಗಿಸಿದರೂ ಕೂಡ ಹಣವನ್ನು ತಮಗೆ ಇಷ್ಟಬಂದಾಗ ಭಿಕ್ಷೆ ನೀಡುವ ರೀತಿಯಲ್ಲಿ ಕೊಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ  ಹರಿಹಾಯ್ದರು.
ಸರಿಯಾದ ಸಮಯಕ್ಕೆ ಹಣವನ್ನು ಸಂದಾಯ ಮಾಡದಿದ್ದರೆ ವಕೀಲರ ಮೂಲಕ ಕಾರ್ಖಾನೆಯ  ವಿರುದ್ಧ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬಸವರಾಜು, ದೊಡ್ಡಣ್ಣ, ದೇವರಾಜು, ಹನುಮಂತು, ರವಿ, ಸಿದ್ದಪ್ಪ, ಸಿದ್ದೇಗೌಡ, ಬಸವ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.