ಮಂಡ್ಯ

ಗುಂಪು ಘರ್ಷಣೆ: ಮೂವರಿಗೆ ಗಾಯ

Published On :

ಭಾರತೀನಗರ: ಇಲ್ಲಿಗೆ ಸಮೀಪದ ಕಾರ್ಕಳ್ಳಿಯಲ್ಲಿ ಎರಡು ಗುಂಪುಗಳ ವೈಷಮ್ಯದ ನಡುವೆ  ಬಸವೇಶ್ವರ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿತ್ತಾದರೂ ಕೂಡ ಕಳೆದ ರಾತ್ರಿ ಸಾರ್ವಕನಿಕರಿಂದ ದಾನವಾಗಿ ಪಡೆಯಲಾಗಿದ್ದ ದವಸ ಧಾನ್ಯವನ್ನು ಹರಾಜು ಹಾಕುವ ವೇಳೆ ದೇವೇಗೌಡನದೊಡ್ಡಿ ಮತ್ತು ಕಾರ್ಕಹಳ್ಳಿ ಗ್ರಾಮಗಳು 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಈ ಘಟನೆಯಲ್ಲಿ ಮೂರು ಮಂದಿ ತೀವ್ರವಾಗಿ ಗಾಯಗೊಂಡು, 5 ಬೈಕ್‌ಗಳು ಜಖಂಗೊಂಡಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಚಿಕ್ಕಮೊಗೇಗೌಡರಸ್ವಾಮಿ(40), ಪುಟ್ಟಸ್ವಾಮಿ ಮೆಡ್ಡಣ್ಣ(35), ಬಸವರಾಜು(32) ಗಾಯಗೊಂಡವರಾಗಿದ್ದು, ಸ್ವಾಮಿ ಹಾಗೂ ಪುಟ್ಟಸ್ವಾಮಿ ತೀವ್ರ ಗಾಯಗೊಂಡಿದ್ದಾರೆ.
ತಹಸೀಲ್ದಾರ್ ಡಾ.ಎಚ್.ಎನ್.ನಾಗರಾಜು ಎರಡು ಗುಂಪುಗಳ ನಡುವೆ ಶಾಂತಿ ಸಭೆ ನಡೆಸಿ ಯಾವುದೇ ಅಹಿತರ ಘಟನೆ ನಡೆಯದಂತೆ  ಎಚ್ಚರವಹಿಸಬೇಕೆಂದು ಪೊಲೀಸರಿಗೆ ಹಾಗೂ ಎರಡು ಗ್ರಾಮದ ಮುಖಂಡರಿಗೆ ತಿಳಿಸಿದ್ದರು.
ಮುತ್ತುರಾಯ ಸೇವೆ ಅನ್ನಸಂತರ್ಪಣೆ ಬಳಿಕ ಉಳಿದಿದ್ದ ದವಸ-ಧಾನ್ಯಗಳನ್ನು ಬಸವೇಶ್ವರ ಸೇವಾ ಟ್ರಸ್ಟ್‌ನವರು ರಾತ್ರಿ ವೇಳೆಯೇ ಹರಾಜು ಹಾಕುವ ಪ್ರಕ್ರಿಯೆಗೆ ಮುಂದಾದರು. ಆಗ ದೇವೇಗೌಡನದೊಡ್ಡಿ ಗ್ರಾಮದಿಂದ ಆಗಮಿಸಿದ್ದ ಮುಖಂಡರು ಹರಾಜು ಪ್ರಕ್ರಿಯೆ ನಡೆಸಬಾರದು. ತಹಸೀಲ್ದಾರ್ ಆದೇಶದ ಮೇರೆಗೆ ಬೆಳಿಗ್ಗೆ ಹರಾಜು ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎರಡು ಗ್ರಾಮಗಳ  2 ಗುಂಪುಗಳ ನಡುವೆ  ಮಾತಿನ ಚಕಮಕಿ ನಡೆದು ಕೈಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ನಂತರ ಸ್ವರೂಪ್‌ಚಂದ್ರ ಬಾಬು, ಮಹೇಶ್ ಸೇರಿದಂತೆ ಮತ್ತಿತರರು ದೇವೇಗೌಡನದೊಡ್ಡಿ ಗ್ರಾಮದ ಮುಖಂಡರಿಗೆ ಸೇರಿದ ಬಸವೇಶ್ವರ ದೇವಾಲಯದ ಮುಂಭಾಗ ನಿಲ್ಲಿಸಲಾಗಿದ್ದ 5 ಬೈಕ್‌ಗಳ ಮೇಲೆ ಕಲ್ಲನ್ನು ತೂರಾಡಿ ತೀವ್ರ ಜಖಂಗೊಳಿಸಿದರು.
ಇದರಿಂಗ ರೊಚ್ಚಿಗೆದ್ದ ದೇವೇಗೌಡನದೊಡ್ಡಿ ಹಾಗೂ ಕಾರ್ಕಳ್ಳಿಯ ಒಂದು ಗುಂಪು ಅದನ್ನು ವಿರೋಧಿಸಲು ಮುಂದಾದರು. ಈ ಸಂದರ್ಭದಲ್ಲಿ ಹಲವಾರು ಮಂದಿ ತೀವ್ರವಾಗಿ ಗಾಯಗೊಂಡರು. ಕಡಿಮೆ ಸಂಖ್ಯೆಯಲ್ಲಿದ್ದ ದೇವೇಗೌಡನದೊಡ್ಡಿ ಗ್ರಾಮಸ್ಥರು ತಕ್ಷಣವೇ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಘು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.