ಮಂಡ್ಯ

ಕನ್ನಡದಲ್ಲಿ ಮಾತನಾಡಿದ ಬಾಬಾ

Published On :


ಯೋಗಗುರು ರಾಮ್‌ದೇವ್ ಹಿಂದಿಯಲ್ಲಿ ತಮ್ಮ ಭಾಷಣ ಆರಂಭಿಸಿದ ಕೆಲವು ನಿಮಿಷಗಳ ನಂತರ ಕನ್ನಡದಲ್ಲಿ ಮಾತು ಆರಂಭಿಸಿದರು. ಹಿಂದಿ ಭಾಷೆಯಲ್ಲೇ ಕನ್ನಡವನ್ನು ಬರೆದುಕೊಂಡು 5 ನಿಮಿಷ ಮಾತನಾಡಿದ್ದು ಬಹು ಅರ್ಥಪೂರ್ಣವಾಗಿತ್ತು.
ನೂರಾರು ದಶಕದ ಹಿಂದೆ ಕಂಚು, ಚುಂಚ ಎಂಬ ರಾಕ್ಷಕರನ್ನು ಸಂಹಾರ ಮಾಡಿ ಧರ್ಮ ಸಂಸ್ಥಾಪನೆ ಮಾಡಿದ ಸ್ಥಳ ಚುಂಚನಗಿರಿಯ ಮಹಿಮೆಯಲ್ಲಿದೆ. ಆಗ ಇಬ್ಬರು ರಾಕ್ಷಸರಿದ್ದರು. ಆದರೆ, ಈಗ ಭಾರಿ ರಾಕ್ಷಕರು ಹುಟ್ಟುಕೊಂಡಿದ್ದಾರೆ. ಅವರೆನ್ನೆಲ್ಲಾ ಸಂಹಾರ ಮಾಡಲು ದೇವರೆ ಬರಬೇಕು ಎಂದು ತಮ್ಮ ಭಾಷಣದಲ್ಲಿ ಹೇಳಿದ ಕೊನೆಯ ಮಾತುಗಳು ತುಂಬಾ ಮಾರ್ಮಿಕವಾಗಿದ್ದವು.
ಭಾರತಕ್ಕೆ ಉನ್ನತದ ಕಾಲ ಬಂದಿದೆ. ನಮ್ಮದು ಯಾವುದು ತುಂಡು ಭೂಮಿಯಲ್ಲ. ಭವ್ಯ ಭಾರತದ ಪರಂಪರೆ, ಸಂಸ್ಕೃತಿ ಹೊಂದಿರುವ ಪವಿತ್ರ ಭೂಮಿ, ಆದಿಶಂಕರರು ಸೇರಿದಂತೆ ಬಾಲಗಂಗಾಧರನಾಥ ಶ್ರೀಗಳತನಕ ಸನ್ಯಾಸ ಪರಂಪರೆ ಈ ದೇಶಕ್ಕೆ ರಕ್ಷಾಕವಚವಾಗಿದೆ ಎಂದು ಶ್ರೀಗಳ ಸೇವೆಯನ್ನು ಮುಕ್ತಕಂಠದಿಂದ ರಾಮ್‌ದೇವ್ ಪ್ರಶಂಸಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.