ಎಲ್ಲರಿಗೂ ಸಮಾನತೆ ಹಕ್ಕು ಸಿಗಲಿ
ಭಾರತೀನಗರ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೂ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ಸಿಕ್ಕಾಗ ಮಾತ್ರ ಸಂವಿಧಾನ ಎಂಬ ಪದಕ್ಕೆ ಅರ್ಥ ಬರುತ್ತದೆ ಎಂದು ಕಾರ್ಯದರ್ಶಿ ಲೋಕೇಶ್ ತಿಳಿಸಿದರು.
ಇಲ್ಲಿನ ವಿವೇಕಾನಂದ ಕಾನ್ವೆಂಟ್ನಲ್ಲಿ ನಡೆದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದಿದ್ದರೆ ಎಲ್ಲೆಲ್ಲಿಯೂ ಅಸಮಾನತೆ ತಾಂಡವಾಡುತ್ತಿತ್ತು. ದೇಶಕ್ಕಾಗಿ ಅರ್ಪಿಸಿಕೊಂಡ ನಾಯಕರ ಸ್ಮರಣೆ ಅತ್ಯಗತ್ಯ ಎಂದರು.
ಅಧ್ಯಕ್ಷತೆಯನ್ನು ಶಿಕ್ಷಕಿ ಪೂರ್ಣಿಮಾ ವಹಿಸಿದ್ದರು. ಶಿಕ್ಷಕರಾದ ಎಸ್. ಶೃತಿ, ದಾಕ್ಷಯಿಣಿ, ರೂಪ, ಪ್ರಗತಿ, ಶಿಲ್ಪ, ಗೀತಾ, ಸಹಾಯಕಿ ಲಕ್ಷ್ಮಮ್ಮ ಸೇರಿದಂತೆ ಇತರರಿದ್ದರು.
ಬೊಪ್ಪಸಮುದ್ರ ಸರ್ಕಾರಿ ಸಂಯುಕ್ತ ಪ್ರೌಢಶಾಲೆ: ಧ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಯಕ್ಷ ನಾಗರಾಜು ನೆರವೇರಿಸಿ ಮಾತನಾಡಿ, ಭ್ರಷ್ಟಾಚಾರ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಜಾಗೃತರಾಗಿ ನವ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಎಂ.ಮಂಗಳಭಟ್ ವಹಿಸಿದ್ದರು. ಶ್ರೀಕಂಠೇಗೌಡ, ಲಿಂಗಯ್ಯ, ತಾಪಂ ಮಾಜಿ ಸದಸ್ಯ ಡಿ. ತಮ್ಮಯ್ಯ, ಗ್ರಾಪಂ ಸದಸ್ಯ ನಿಂಗಯ್ಯ, ಮುಖಂಡರಾದ ಪುಟ್ಟರಾಮು, ಪಿಳ್ಳಯ್ಯ, ಸಿದ್ದರಾಮು, ಬಿ.ಸಿ. ರವಿ, ಪ್ರಫುಲ್ಲಚಂದ್ರ, ನಾಗರಾಜು, ಜಯಶೀಲಾ, ಪತ್ರಕರ್ತ ಶಿವಮಲ್ಲು, ಮುಖ್ಯ ಶಿಕ್ಷಕರಾದ ಎಂ.ಮಂಗಳ ಭಟ್, ನಂಜುಂಡಯ್ಯ, ಸಹ ಶಿಕ್ಷಕರಾದ ಯೋಗಾನಂದ್, ರೂಪೇಶ್, ನಂಜುಂಡಶರ್ಮ, ಮಹಮದ್ಅಲಿ, ಸೌಮ್ಯ, ತೇಜ, ಸುವರ್ಣ, ರವಿ, ಪ್ರಶಿಕ್ಷಣಾರ್ಥಿ ಬಿ.ಎ. ಮಧುಕುಮಾರ್ ಸೇರಿದಂತೆ ಇತರರು ಇದ್ದರು.
ಚಂದೂಪುರ ಬಾಲಕ-ಬಾಲಕಿಯರ ವಿದ್ಯಾರ್ಥಿನಿಲಯ: ಧ್ವಜಾರೋಹಣವನ್ನು ಡಾ.ನೋಡಲ್ ಅಧಿಕಾರಿ ಡಾ. ಮಹೇಶ್ಕುಮಾರ್ ನೆರವೇರಿಸಿದರು. ಮೇಲಿಚಾರಕರಾದ ಎಂ.ಡಿ. ನಂಜುಂಡಪ್ಪ, ಶರಣಮ್ಮ ಸೇರಿದಂತೆ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

