ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಂಧಾನ ಸಭೆ
ಶ್ರೀರಂಗಪಟ್ಟಣ: ಪಟ್ಟಣದ ಗೌತಮ ಕ್ಷೇತ್ರದಲ್ಲಿ ಟ್ರಸ್ಟಿಗಳ ಗಮನಕ್ಕೆ ತಾರದೆ ಮರಗಳ ಮಾರಣಹೋಮ ನಡೆಸಿ ಸಾರ್ವಜನಿಕರ ಆಕ್ರೋಷಕ್ಕೆ ತುತ್ತಾಗಿದ್ದ ಗೌತಮ ಕ್ಷೇತ್ರದ ಶ್ರೀ ಗಜಾನನಸ್ವಾಮಿ ಪ್ರಕರಣವನ್ನು ಇತ್ಯರ್ಥ ಮಾಡಲು ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬುಧವಾರ ಸಂಧಾನ ಸಭೆ ನಡೆಯಿತು.
ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಂಪುರ, ಲಾಳಿಪಳ್ಯ, ಅಚ್ಚಪ್ಪನಕೊಪ್ಪಲು, ಕೆಂಗಾಲ್ ಕೊಪ್ಪಲು, ದೊಡ್ಡೇಗೌಡನಕೊಪ್ಪಲು, ಬ್ಯಾಟೆ ತಿಮ್ಮನಕೊಪ್ಪಲು, ಕ್ಯಾತನಹಳ್ಳಿ, ಎಣ್ಣೆಹೊಳೆಕೊಪ್ಪಲು ಮತ್ತು ಚಲುವರಸನಕೊಪ್ಪಲು ಗ್ರಾಮಗಳ ಮುಖಂಡರ ಸಮ್ಮುಖದಲ್ಲಿ ಗೌತಮಕ್ಷೇತ್ರದ ಆವರಣದಲ್ಲಿ ಸಭೆ ನಡೆಸಲಾಯಿತು.
ಟ್ರಸ್ಟಿಗಳ ಗಮನಕ್ಕೆ ತಾರದೆ ಮರಗಳನ್ನು ಮಾರಾಟ ಮಾಡಿರುವ ಸ್ವಾಮೀಜಿಯ ವರ್ತನೆ ಖಂಡಿಸಿ ಸಾರ್ವಜನಿಕರು ಹಲ್ಲೆಗೆ ಮುಂದಾಗಿದ್ದರು. ಮಠಕ್ಕೆ ಸಂಬಂಧಿಸಿದ ಟ್ರಸ್ಟಿಗಳ ಸಮ್ಮುಖದಲ್ಲಿ ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಯಿತು. ಕೆಲ ಟ್ರಸ್ಟಿಗಳು ಸಭೆಗೆ ಗೈರು ಹಾಜರಾಗಿದ್ದ ಕಾರಣ ನೂತನ ಟ್ರಸ್ಟಿಗಳ ನೇಮಕಕ್ಕೆ ಒಲವು ನೀಡದೇ ಪ್ರತಿ ಗ್ರಾಮದ ಒಬ್ಬರು ಅಥವಾ ಇಬ್ಬರನ್ನೊಳಗೊಂಡ 10 ರಿಂದ 15 ಸದಸ್ಯರ ಟ್ರಸ್ಟಿಗಳನ್ನು ನೇಮಕ ಮಾಡಿಕೊಂಡು ನಾಲ್ವರು ಪ್ರಮುಖ ವ್ಯಕ್ತಿಗಳ ಸಮ್ಮುಖದಲ್ಲಿ ಸ್ವಾಮೀಜಿಯ ವರ್ತನೆ ಕುರಿತು ಗಂಭೀರವಾಗಿ ಚರ್ಚಿಸಿ ಸ್ವಾಮೀಜಿಯನ್ನು ಮಠದಲ್ಲಿ ಉಳಿಸಿಕೊಳ್ಳಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸೋಣ ಎಂದು ಪುಟ್ಟಣ್ಣಯ್ಯ ನೀಡಿದ ಸಲಹೆಯ ಮೆರೆಗೆ ಸಭೆಯನ್ನು ಮುಕ್ತಾಯವಾಯಿತು. ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಜಿಪಂ ಮಾಜಿ ಅಧ್ಯಕ್ಷಲಿಂಗಣ್ಣ , ಅಕ್ಕಪಕ್ಕ ಗ್ರಾಮಸ್ಥರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

