ಮಂಡ್ಯ

ಆಸ್ಪತ್ರೆ ಅವ್ಯವಸ್ಥೆ: ನಾಗರಿಕರ ತರಾಟೆ

Published On :

ಪಾಂಡವಪುರ: ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಹಾಗೂ ಸಾರ್ವಜನಿಕರ ಜತೆ ವೈದ್ಯರ ಅನುಚಿತ ವರ್ತನೆ ಖಂಡಿಸಿ ಪಟ್ಟಣದ ನಾಗರಿಕರು ಆಸ್ಪತ್ರೆ ವೈದ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬುಧವಾರ ಮಧ್ಯಾಹ್ನ 12 ಗಂಟೆಯಲ್ಲಿ ಬಿ.ಜೆ.ಪಿ. ಮುಖಂಡರಾದ ಎಚ್.ಎನ್. ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೋ.ಪು. ಗುಣಶೇಖರ್ ನೇತೃತ್ವದಲ್ಲಿ ನಾಗರಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಡಾ.ಟಿ. ಜಯರಾಂರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ನಾಗರಿಕರೊಂದಿಗೆ ವೈದ್ಯಾಧಿಕಾರಿ ಜಯರಾಂ ಮಾತುಕತೆ ನಡೆಸಿದರು. ಆಗ, ಡಾ. ಮಮತಾರವರು ಸಾರ್ವಜನಿಕರ ಜತೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಇವರ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಇವರು ಬಂದು ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಡಾ.ಮಮತಾ ಅವರು ಬಂದು, ನಾನು ಎಂದೂ ಬೇಜವಾಬ್ದಾರಿಯಿಂದ ನಡೆದುಕೊಂಡಿಲ್ಲ. ರೋಗಿಗಳ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಒಬ್ಬಳೇ ಇದ್ದುದರಿಂದ ಎಲ್ಲರನ್ನು ನೋಡಲು ತೊಂದರೆ ಆಗಿದೆ. ಅದಕ್ಕೆ ಕ್ಷಮೆ ಯಾಚಿಸುತ್ತೇನೆ. ಇನ್ನು ಮುಂದೆ ಯಾವುದೇ ತೊಂದರೆ ಅಗದಂತೆ ನಡೆದುಕೊಳ್ಳುವುದಾಗಿ ಸಭೆಯಲ್ಲಿ ಮನವಿ ಮಾಡಿಕೊಂಡರು.  ನಂತರ ಆಸ್ಪತ್ರೆಯ ಶುಚಿತ್ವ ಕಾಪಾಡಿಕೊಳ್ಳುವುದು, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಒದಗಿಸಬೇಕು. ಹೊರರೋಗಿಗಳಿಗೆ ಕೂರಲು ಕಲ್ಲು ಹಾಸು, ಹಾಗೆ ನೆರಳು ಇಲ್ಲದೆ ಪರಿತಪ್ಪಿಸುವ ಸ್ಥಿತಿ ಇರುವುದರಿಂದ ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಲ್ಯಾಬ್‌ನಲ್ಲಿ ವಿವಿಧ ಪರೀಕ್ಷೆಗಳಿಗೆ ಹೆಚ್ಚುವರಿಯಾಗಿ  ಹಣ ಪಡೆಯುತ್ತಿದ್ದಾರೆ. ಆದರೆ ಸಾರ್ವಜನಿಕರಿಗೆ ರಶೀದಿ ಕೊಡುವಾಗ ಕಡಿಮೆ ಹಣ ನಮೂದಿಸಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಡಾ. ರಾಜಣ್ಣ ತೊಂದರೆ: ಆಂಬುಲೆನ್ಸ್‌ಗಳು ಸರಿಯಾಗಿ ಕೆಲಸ ನಿರ್ವಹಿಸದೆ ರೋಗಿಗಳಿಗೆ ತುಂಬ ತೊಂದರೆ ಆಗಿದೆ. ಮೂಳೆ ವೈದ್ಯರಾದ ಡಾ. ರಾಜಣ್ಣ ರವರು ಅಂಗವಿಕಲರ ಸರ್ಟಿಫಿಕೇಟ್ ಕೊಡಲು ತುಂಬಾ ತೊಂದರೆ ಕೊಡುತ್ತಿದ್ದಾರೆ. ಇವರ ಬಗ್ಗೆ ಕ್ರಮ ಜರುಗಿಸಿ ನಿಜವಾದ ಫಲಾನುಭವಿಗಳಿಗೆ ಅರ್ಹತೆ ಅನುಗುಣವಾಗಿ ಸರ್ಟಿಫಿಕೇಟ್ ಕೊಡಲು ಸೂಚನೆ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದರು. ಸಮಸ್ಯೆಗಳನ್ನು ಆಲಿಸಿದ ವೈದ್ಯಾಧಿಕಾರಿ ಡಾ.ಟಿ. ಜಯರಾಂ ಮೇಲಧಿಕಾರಿಗಳ ಜತೆ ಮಾತನಾಡಿ ಬಗೆಹರಿಸುವುದಾಗಿ ಭರವಸೆ ನೀಡಿದರು.  ಡಾ. ಮಂಜುನಾಥ್, ಡಾ, ಕಾಂತರಾಜ್, ಡಾ. ಶ್ರೀಧರ್, ಡಾ. ಶಾಸ್ತ್ರಿ ಉಪಸ್ಥಿತರಿದ್ದರು.
ಪಟ್ಟಣದ ನಾಗರಿಕ ಮುಖಂಡರಾದ ಶ್ರೀನಿವಾಸ್ ನಾಯಕ, ಅರ್. ಚನ್ನಕೇಶವ. ಅರ್. ಕೋದಂಡ ದುರ್ಗೇಶ್, ಈರೇಗೌಡ, ರಕ್ಷಣಾ ವೇದಿಕೆ ಅದ್ಯಕ್ಷ ಗೋವಿಂದರಾಜ್ ದೊರೆಸ್ವಾಮಿ, ಬಿ.ಜೆ.ಸ್ವಾಮಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.