ಮಂಡ್ಯ

ಆರೋಗ್ಯವಂತ ಮಕ್ಕಳ ಪ್ರದರ್ಶನ

Published On :

ಮಂಡ್ಯ: ರೋಹಿಣಿ ಮಹಿಳಾ ಮಂಡಳಿ ವತಿಯಿಂದ ನಗರದ ಗಾಂಧಿಭವನದಲ್ಲಿ ಫೆ.5ರಂದು ಆರೋಗ್ಯವಂತ ಮಕ್ಕಳ ಪ್ರದರ್ಶನ ಸ್ಪರ್ಧೆ ಏರ್ಪಡಿಸಲಾಗಿದೆ.  ಸ್ಪರ್ಧೆಯು ಉಚಿತವಾಗಿದೆ. ಮಧ್ಯಾಹ್ನ 1 ರಿಂದ 4 ಗಂಟೆವರೆಗೆ ನಡೆಯಲಿದ್ದು, 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು ಎಂದು ಮಂಡಳಿ ಕಾರ್ಯದರ್ಶಿ ಶಾರದಾ ತಿಳಿಸಿದ್ದಾರೆ.
ಅಂಗವಿಕಲರ ಬಸ್ ಪಾಸ್ ಪರಿಷ್ಕರಣೆ
ಮಂಡ್ಯ: ರಾಜ್ಯ ರಸ್ತೆ ಸಾರಿಗೆ ನಿಗಮವು ಅಂಗವಿಕಲರ ರಿಯಾಯಿತಿ ಬಸ್ ಪಾಸ್ ದರ ಪರಿಷ್ಕರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸರ್ಕಾರದಿಂದ ಮಾಹಿತಿ ಬರಬೇಕಿದೆ. ಮಾಹಿತಿ ಬರುವವರೆಗೂ ಅಂಗವಿಕಲರಿಗೆ ಆಗುವ ತೊಂದರೆ ನಿವಾರಿಸಲು ಹಾಲಿ ಇರುವ 2012ನೇ ಸಾಲಿನ ರಿಯಾಯಿತಿ ಬಸ್ ಪಾಸ್ ಉಪಯೋಗಿಸಿಕೊಂಡು ಫೆ.28ರವರೆಗೆ ಅಂಗವಿಕಲರು ಪ್ರಯಾಣಿಸಬಹುದಾಗಿದೆ ಎಂದು ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಾಣಾಧಿಕಾರಿಗಳು ತಿಳಿಸಿದ್ದಾರೆ.
ಛಾಯಾಗ್ರಾಹಕರ ಸಂಘಕ್ಕೆ ಆಯ್ಕೆ
ಮಂಡ್ಯ: ಮಾಂಡವ್ಯ ವೃತ್ತಿಪರ ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಐ.ನಾ.ರಾವ್, ಗೌರವ ಸಲಹೆಗಾರರಾಗಿ ಎ.ಎನ್. ಮಧುಚಂದ್ರ, ಸತ್ಯನಾರಾಯಣ ರಾವ್ (ಮಂಡ್ಯ ಸತ್ಯ), ಬಾಲಚಂದ್ರು, ಸುರೇಶ, ಅಧ್ಯಕ್ಷರಾಗಿ ಕೆ.ಕೆ.ಪ್ರಭು, ಉಪಾಧ್ಯಕ್ಷರಾಗಿ ಎಚ್.ಎಸ್.ಲಕ್ಷ್ಮಣ್ (ಪಟೇಲ್), ಖಜಾಂಚಿಯಾಗಿ ದಿನೇಶ್, ಕಾರ್ಯದರ್ಶಿಯಾಗಿ ನವೀನ್‌ಕುಮಾರ್, ಸಹ ಕಾರ್ಯದರ್ಶಿಯಾಗಿ ಬಾಬು ಗಂಗಾಡಿಕರ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಸ್. ಜಗದೀಶ್ ಆಯ್ಕೆಯಾಗಿದ್ದಾರೆ. ಕ್ರೀಡಾ ಕಾರ್ಯದರ್ಶಿಯಾಗಿ ವಿನೋದ, ಶಿವು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿನಯ್, ರೇವಣ್ಣ, ಪ್ರಚಾರ ಸಮಿತಿಗೆ ಹರೀಶ್‌ಕುಮಾರ್, ನಿರ್ದೇಶಕರಾಗಿ ಅಂಕೇಗೌಡ, ಗೋಪಾಲಗೌಡ, ರೂಬಿನ್, ವೆಂಕಟೇಶ್, ಚನ್ನಪ್ಪ, ಮುನ್ನ ನೇಮಕಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.