ಮಂಡ್ಯ

ಜಮೀನು ಖರೀದಿಸಿದ ಅನಿಲ್ ಕುಂಬ್ಳೆ

Published On :

ಪಾಂಡವಪುರ: ಕರ್ನಾಟಕ ಕ್ರಿಕೆಟ್ ಮಂಡಳಿ(ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅವರ ಪತ್ನಿ ಚೇತನ ಕುಂಬ್ಳೆ ಹೆಸರಿನಲ್ಲಿ ಕೃಷಿ ಜಮೀನನ್ನು ಖರೀದಿಸಿ ಪಾಂಡವಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದರು.
ಶುಕ್ರವಾರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಆಗಮಿಸಿ ಅನಿಲ್ ಕುಂಬ್ಳೆ ಹಾಗೂ ಪತ್ನಿ ಚೇತನ ಕುಂಬ್ಳೆ ಅವರ ಕುಟುಂಬದವರು ತಾಲೂಕಿನ ನಾರ್ಥ್ ಬ್ಯಾಂಕ್ ನಿವಾಸಿ ಜಯಲಕ್ಷ್ಮಮ್ಮ ಕೊಂ. ಶಂಭಯ್ಯ ಅವರ ಜಮೀನು ಚಿಕ್ಕಯಾರಹಳ್ಳಿ ಸರ್ವೆ ನಂ. 162- 1ರಲ್ಲಿ 1.39 ಗುಂಟೆ, 162-2ರಲ್ಲಿ 1ಎಕರೆ 38 ಗುಂಟೆ ಕೃಷಿ ಭೂಮಿಯನ್ನು ಚೇತನ ಕುಂಬ್ಳೆ ಹೆಸರಿನಲ್ಲಿ ಕ್ರಯಕ್ಕೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ಜಮೀನಿನಲ್ಲಿ ವನ್ಯಜೀವಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶವಿದೆ. ಕಾದು ನೋಡಿ ಎಂದರು.
ವಿ.ಸಿ. ನಾಲೆ ಪಕ್ಕದಲ್ಲಿಯೇ ಕೃಷಿ ಜಮೀನನ್ನು ಅನಿಲ್ ಕುಂಬ್ಳೆ ಖರೀದಿಸಿರುವುದು, ಅದನ್ನು ಬೇರೆ ಉದ್ದೇಶಕ್ಕೆ ಪರಿವರ್ತನೆಗೆ ಮಾಡಬಹುದೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಕೃಷಿ ಜಮೀನು ಖರೀದಿಸಿದಾಗ ಅಲ್ಲಿ ಕೃಷಿಗೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ಮಾಡಬೇಕೆ ಹೊರತು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ.
ನೂಕುನುಗ್ಗಲು: ಸಬ್ ರಿಜಿಸ್ಟ್ರಾರ್ ಕಚೇರಿಗೆ ಕ್ರಿಕೆಟಿಗ ಅನಿಲ ಕುಂಬ್ಳೆ ಆಗಮಿಸಿದ್ದಾರೆಂಬ ಸುದ್ದಿ ಪಟ್ಟಣದಲ್ಲಿ ಹರಡಿದ ಕೂಡಲೇ ಕಚೇರಿಯಲ್ಲಿ ನೂಕುನುಗ್ಗಲು ಉಂಟಾಯಿತು. ಹಲವು ಅಭಿಮಾನಿಗಳು ಭಾವಚಿತ್ರಕ್ಕಾಗಿ, ಹಸ್ತಲಾಘವಕ್ಕಾಗಿ ಹರಸಾಹಸ ಪಟ್ಟರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.