ಪಿಕೆಜಿಬಿ ಎಟಿಎಂಗೆ ಚಾಲನೆ
ಕಾರಟಗಿ: ಸರ್ಕಾರದ ಆರ್ಥಿಕ ನೀತಿಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಗ್ರಾಮೀಣ ಬ್ಯಾಂಕ್ಗಳು ಮುಂಚೂಣೆಯಲ್ಲಿವೆ ಎಂದು ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕಾಧಿಕಾರಿ ಪಿ.ಎಸ್. ರಾವತ್ ಹೇಳಿದರು. ಪಟ್ಟಣದ ಪ್ರಗತಿ- ಕೃಷ್ಣ ಗ್ರಾಮೀಣ ಬ್ಯಾಂಕ್ನ ಎಟಿಎಂಗೆ ಚಾಲನೆ ಹಾಗೂ ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್ನ ಮುಂದೆ ಸ್ಥಾಪಿಸಲಾದ ಎಟಿಎಂ ಯಂತ್ರವನ್ನು ನಬಾರ್ಡ್ನ ಮುಖ್ಯ ಮಹಾಪ್ರಬಂಧಕ ಜಿ.ಆರ್. ಚಿಂತಾಲ ಉದ್ಘಾಟಿಸಿದರು. ಪ್ರಗತಿ- ಕೃಷ್ಣ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಿಸುವ ರೀತಿ, ಬಂಡವಾಳ ಲಾಭದ ಕುರಿತು ಬ್ಯಾಂಕ್ನ ಅಧ್ಯಕ್ಷ ಎಂ.ಜಿ. ಭಟ್ ವಿವರಿಸಿದರು. ಈ ವೇಳೆ ಕೆನರಾ ಬ್ಯಾಂಕ್ ಪ್ರಧಾನ ಪ್ರಭಂದಕ ಎಸ್. ರಮೇಶ ವರ್ತಕರು, ರೈತರು, ಬ್ಯಾಂಕ್ ಸಿಬ್ಬಂದಿ ಇದ್ದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಕಾರಟಗಿ: ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್ ಪಡೆದ ಚನ್ನವೀರೇಶ ಮತ್ತಿತರರ ವಿದ್ಯಾರ್ಥಿಗಳನ್ನು ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. ಕೆ. ರಾಘವೇಂದ್ರ, ಸಿ. ರಾದಾ ಹಾಗೂ ಅವರ ಪಾಲಕರನ್ನು ಶಾಲಾ ಆಡಳಿತ ಮಂಡಳಿ ಸನ್ಮಾನಿಸಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಅರಳಿ, ಕಾರ್ಯದರ್ಶಿ ಸಿ. ಶಿವಪ್ಪ, ವೆಂಕಟೇಶ ತಂಗಡಗಿ, ತಾಪಂ ಸದಸ್ಯ ಹಿರೇಬಸಪ್ಪ ಸಜ್ಜನ್, ಟಿ. ಗಂಗಮ್ಮ ಇದ್ದರು.
ಪೊಲೀಸ್ ನೇಮಕಾತಿ:ಹೈಕಕ್ಕೆ ಅನ್ಯಾಯ, ಖಂಡನೆ
ಗಂಗಾವತಿ: ಪೊಲೀಸ್ ನೇಮಕಾತಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಇದು ಖಂಡನೀಯ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಹೇಳಿದೆ. ಈ ಕುರಿತು ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದ ವೇದಿಕೆ ತಾಲೂಕಾಧ್ಯಕ್ಷ ಎ. ಸುಬ್ರಹ್ಮಣ್ಯಂ ಮಾತನಾಡಿ, ಜೂ. 19ರಂದು ಹೈಕ ಭಾಗದಲ್ಲಿ ಖಾಲಿ ಇರುವ 637 ನಾಗರಿಕ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 371ನೇ ಕಲಂ ನಿಯಮ ನಿರ್ಲಕ್ಷಿಸಲಾಗಿದೆ. ನಿಯಮದ ಪ್ರಕಾರ ಹೈಕ ಭಾಗದ ಆರು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ. 80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಹಾಗೂ ಶೇ. 20ರಷ್ಟು ಬೇರೆ ಜಿಲ್ಲೆಯವರಿಗೆ ಮೀಸಲಿಡಬೇಕು. ಆದರೆ ಇಲಾಖೆ ಅಹ್ವಾನಿಸಿದ ನೇಮಕಾತಿಯಲ್ಲಿ ಒಟ್ಟು 637 ಹುದ್ದೆಗಳ ಪೈಕಿ ಹೈಕಕ್ಕೆ 114 ಹುದ್ದೆಗಳನ್ನು, ಇತರೆ ಜಿಲ್ಲೆಯವರಿಗೆ 523 ಹುದ್ದೆಗಳನ್ನು ಮೀಸಲಿರಿಸಲಾಗಿದೆ ಎಂದು ಅರೋಪಿಸಿದ್ದಾರೆ. ಕೂಡಲೆ ಸರ್ಕಾರ ಮೀಸಲಾತಿಯಂತೆ ಈ ಪ್ರದೇಶಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಆರು ಜಿಲ್ಲೆಯ ಜನರ ಹೋರಾಟ ಅನಿವಾರ್ಯ ಎಂದು ವೇದಿಕೆ ಎಚ್ಚರಿಸಿದ್ದಾರೆ. ಈ ವೇಳೆ ವೆಂಕಟೇಶ ನಾಯಕ, ಶಂಕರ ಐಲಿ, ಎಂ.ಡಿ. ರಫೀಕ್, ಹನುಮಂತಪ್ಪ, ವೆಂಕಟೇಶ, ರಾಘವೇಂದ್ರ, ಪಂಪಾಪತಿ, ಅಯ್ಯಪ್ಪ, ವೆಂಕೋಬ, ಶಂಕರ ಸಿದ್ದಾಪುರ, ಹನುಮಂತ ಭಜಂತ್ರಿ, ತಿಮ್ಮಾಜಿ, ಮೆಹಬೂಬ್ ಇದ್ದರು.
ಜಾಗೃತಿ ಕಾರ್ಯಕ್ರಮ
ಕೊಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ಘಟಕದ ವತಿಯಿಂದ ಜಿಲ್ಲೆಯ ಶಾಲಾ-ಕಾಲೇಜುಗಳ 2500 ವಿದ್ಯಾರ್ಥಿಗಳಿಗೆ 20 ಕಾರ್ಯಕ್ರಮಗಳ ಮೂಲಕ ದುಶ್ಚಟಗಳಿಂದ ದೂರ ಉಳಿಯುವ ಜಾಗೃತಿ ಕಾರ್ಯಕ್ರಮಕ್ಕೆ ಯೋಜನೆಯ ಹೈ-ಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪ ಗೌಡ ಚಾಲನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

