ಕೊಪ್ಪಳ

ಕವನದಿಂದ ಕೊರತೆ ಅನಾವರಣ: ಡಾ. ವಂಶಾಂಕೃತಮಠ

Published On :

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜೂ. 25
ಸಮಾಜದ ಕುಂದುಕೊರತೆ, ಒತ್ತಡಗಳನ್ನು ಅನಾವರಣಗೊಳಿಸುವುದೇ ಕಾವ್ಯ. ಸಾಹಿತ್ಯ ಲೋಕದಲ್ಲೂ ಮಹಿಳೆಯರಿಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂದು ಡಾ. ವಿಶ್ವನಾಥ ವಂಶಾಂಕೃತಮಠ ಹೇಳಿದರು.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಗುರು ಪ್ರಕಾಶನ, ಕವಿ ಸಮಯದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ 'ಒಡಲ ಬೆಂಕಿ' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು. ಅನಸೂಯಾ ಜಹಗೀರದಾರ ತಡ ಮಾಡಿ ಪ್ರಕಟಿಸಿದರೂ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕೊಡುಗೆಯನ್ನೇ ನೀಡಿದ್ದಾರೆ. ಜಹಗೀರದಾರರ ಕವನಗಳು ಸ್ತ್ರೀವಾದಿ ನೆಲೆಯಲ್ಲಿ ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಧ್ವನಿಯಾಗಿವೆ ಎಂದು ಹೇಳಿದರು.
ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ಜಹಗೀರದಾರರ ಮೂಲಕ ಇನ್ನು ಉತ್ತಮ ಕಾವ್ಯ ಮತ್ತು ಕೃತಿಗಳು ಹೊರಬರಬೇಕಿದೆ. ನಮ್ಮ ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ಹೆಣ್ಣು ಸಂಪೂರ್ಣವಾಗಿ ವ್ಯಕ್ತವಾಗಿಲ್ಲ. ಅಲ್ಲಿ ಹೆಣ್ಣಿನ ಜಗತ್ತು ಗೈರಾಗಿದೆ. ಇಲ್ಲಿಯ ಕವನಗಳು ಮೌನದಲ್ಲಿ ಹೋರಾಡುತ್ತವೆ. ಮಾನವೀಯ ಅಂತಃಕರಣದ ನೆಲೆಯಲ್ಲಿ ಕವನಗಳಿವೆ. ಕಾವ್ಯದಲ್ಲಿ ಆದ್ರತೆ, ವಿಷಾದ ಮತ್ತು ಪ್ರತಿರೋಧವಿದೆ ಎಂದರು.
ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ವರದಿಗಾರ ಸೋಮರಡ್ಡಿ ಅಳವಂಡಿ ಸಾಹಿತಿ ಮತ್ತು ಸಾಹಿತ್ಯದ ಸಾಮಾಜಿಕ ಜವಾಬ್ದಾರಿ ಕುರಿತು ಮಾತನಾಡಿದರು. ಸಾಹಿತಿ ಎಚ್.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಕೃಷ್ಣಶಾಸ್ತ್ರಿ ಅಳವಂಡಿ ಮಾತನಾಡಿದರು. ಮಹೇಶ ಬಳ್ಳಾರಿ ಸ್ವಾಗತಿಸಿದರು. ಪ್ರಕಾಶ ಬಳ್ಳಾರಿ ವಂದಿಸಿದರು. ವಿಜಯಲಕ್ಷ್ಮೀ ಮಠದ ಕಾರ್ಯಕ್ರಮ ನಿರ್ವಹಿಸಿದರು.
ಡಾ.ಆರ್.ಕೆ. ಕುಲಕರ್ಣಿ, ಡಾ.ವಿ.ಬಿ. ರಡ್ಡೇರ್, ವೀರಣ್ಣ ನಿಂಗೋಜಿ, ಜಗನ್ನಾಥ ಹುನಗುಂದ, ಶಾಂತಾದೇವಿ ಹಿರೇಮಠ, ಅನಸೂಯಾ ಜಾಗೀರದಾರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ ವಂಶಾಂಕೃತಮಠ, ಡಾ. ಆರ್.ಕೆ. ಕುಲಕರ್ಣಿ ಹಾಗೂ ಡಾ. ಜಾಜಿ ದೇವೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಕೊಪ್ಪಳದ ಸಾಹಿತ್ಯಾಸಕ್ತರು, ಬರಹಗಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.