ಜಿಪುಣತನಕ್ಕೆ 18 ಜೀವ ಬಲಿ!
ಕೊಪ್ಪಳ: ಗದಗ ತಾಲೂಕು ಹುಲಕೋಟಿ ಬಳಿ ಗುರುವಾರ ರಾತ್ರಿ ನಡೆದ ರಸ್ತೆ ದುರಂತದಲ್ಲಿ 18 ಜನರು ಬಲಿಯಾಗಿದ್ದು, ಇನ್ನು ಕೆಲವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇಂಥದ್ದೊಂದು ಭೀಕರ ದುರಂತಕ್ಕೆ 'ಜಿಪುಣತನ' ಕಾರಣವೇ ಎನ್ನುವ ಜಿಜ್ಞಾಸೆ ನಡೆಯುತ್ತಿದೆ.
ರೈತಾಪಿ ವರ್ಗ ಭೂಮಿ ಉಳುಮೆಗಾಗಿ ಹಾಗೂ ದವಸ-ಧಾನ್ಯ ಸಾಗಿಸಲು ಅನುಕೂಲವಾಗಲಿ ಎಂದು ಟ್ರ್ಯಾಕ್ಟರ್ ಖರೀದಿಸುತ್ತಾರೆ. ಜನರ ಪ್ರಯಾಣಕ್ಕೂ ಅದೇ ಟ್ರ್ಯಾಕ್ಟರ್ ಬಳಸುವುದು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಜಾನುವಾರುಗಳನ್ನೂ ಟ್ರ್ಯಾಕ್ಟರ್ನಲ್ಲಿ ಸಾಗಿಸುವುದಿಲ್ಲ. ಆದರೆ ಒಂದೇ ಟ್ಯ್ರಾಕ್ಟರ್ನಲ್ಲಿ51ಕ್ಕೂ ಅಧಿಕ ಜನರು ಪ್ರಯಾಣಿಸುವುದು ಅಪಾಯಕಾರಿ.
ಟ್ರ್ಯಾಕ್ಟರ್ನಲ್ಲಿ ಜನರನ್ನು ಸಾಗಿಸಿದ್ದು ದೊಡ್ಡ ತಪ್ಪು. ವಾಹನಗಳ ಬಾಡಿಗೆ ಅಧಿಕವಾಗುತ್ತದೆ ಎಂಬ ಕಾರಣಕ್ಕೆ ತೀರಾ ಕಡಿಮೆ ಬಾಡಿಗೆಗೆ ಸಿಗುವ ಇಲ್ಲವೇ ಸ್ವಂತ ಟ್ರ್ಯಾಕ್ಟರ್ನಲ್ಲೇ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಪ್ರಯಾಣ ಮಾಡುವ ವ್ಯವಸ್ಥೆ ಇದೆ. ಕಡಿಮೆ ಖರ್ಚಿನಲ್ಲಿ ಟ್ರ್ಯಾಕ್ಟರ್ನಲ್ಲಿ ಪ್ರಯಾಣ ಮಾಡುವುದು ಸರ್ವೇ ಸಾಮಾನ್ಯ. ಆದರೆ ಟ್ರ್ಯಾಕ್ಟರ್ ವೇಗವಾಗಿ ಚಲಿಸುತ್ತಿದ್ದಂತೆಯೇ ನಿಯಂತ್ರಣ ತಪ್ಪುತ್ತದೆ. ಪ್ರಯಾಣಿಕರು ತುಂಬಿರುವ ಟ್ರ್ಯಾಲಿ ಚಾಲಕನ ನಿಯಂತ್ರಣದಲ್ಲಿ ಇರುವುದಿಲ್ಲ. ಹೀಗಾಗಿ ಟ್ರ್ಯಾಕ್ಟರ್ ಪ್ರಯಾಣವನ್ನು ಮೊದಲು ತಡೆಯಬೇಕಿದೆ.
ಈಗ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಿದ್ನೇಕೊಪ್ಪ ಗ್ರಾಮದವರು ಮೃತಪಟ್ಟಿರುವುದು ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುವಾಗ. ಸ್ವಂತ ಟ್ರ್ಯಾಕ್ಟರ್ಗಳಿವೆ, ಮತ್ಯಾಕೆ ಬಾಡಿಗೆ ವಾಹನ ಮಾಡಬೇಕು ಎನ್ನುವ ಆಲೋಚನೆಯೇ ಇಷ್ಟೊಂದು ಜನರನ್ನು ಬಲಿ ತೆಗೆದುಕೊಂಡಿತು.
ಮಂಜುನಾಥ (22) ಎನ್ನುವಾತನ ಮದುವೆ ನಿಶ್ಚಯವಾಗಿತ್ತು. ಅಪಘಾತದಲ್ಲಿ ಆತ ಮಡಿದಿದ್ದಾನೆ. ಮನೆಯಲ್ಲಿ ನಾಲ್ವರು ಸಹೋದರರು ಇದ್ದರು. ಅಂಗವಿಕಲ ತಮ್ಮನಿದ್ದಾನೆ, ಜತೆಗೆ ತಂದೆ, ತಾಯಿ ಇದ್ದಾರೆ. ಮನೆಗೆ ಆಸರೆಯಾಗಿದ್ದ ಮಂಜುನಾಥ ಮೃತಪಟ್ಟಿರುವುದು ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.
ತಾಯಿ-ಮಗ ನಿಧನ: ದುರಂತದಲ್ಲಿ ತಾಯಿ-ಮಗ ಮೃತಪಟ್ಟಿದ್ದಾರೆ. ಶಿವಗಂಗಮ್ಮ (ತಾಯಿ) ಹಾಗೂ ಪ್ರಕಾಶ್ (ಮಗ) ದುರಂತಕ್ಕೆ ಬಲಿಯಾಗಿದ್ದಾರೆ. ಈ ಕುಟುಂಬದಲ್ಲಿ ಕಣ್ಣೀರಕೋಡಿ ಹರಿಯುತ್ತಿದೆ.
-ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

