ಜಿಟಿ ಜಿಟಿ ಮಳೆಗೆ ರಸ್ತೆ ಕೆಸರು
ಕೊಪ್ಪಳ: ಗುರುವಾರ ಆದ ಜಿನುಗು ಮಳೆಯಿಂದಾಗಿ ರಸ್ತೆಗಳೆಲ್ಲವೂ ಕೆಸರು ಗದ್ದೆಯಂತೆ ಆಗಿವೆ. ನಗರ ನಿವಾಸಿಗಳು ಸಂಚಾರಕ್ಕೆ ಪ್ರಯಾಸ ಪಡುವಂತಾಗಿದೆ. ನಗರದಲ್ಲಿ ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಯುಜಿಡಿ, ಚರಂಡಿ ಕಾಮಗಾರಿ ನಿಧಾನದಿಂದಾಗಿ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿವೆ.
ಕೊಪ್ಪಳ ನಗರಸಭೆಯಿಂದ ಹಲವು ವರ್ಷಗಳಿಂದ ಯುಜಿಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕಾಮಗಾರಿ ಮಾತ್ರ ಅಮೆಗತಿಯಲ್ಲಿ ನಡೆಯುತ್ತಿದೆ. ಕೆಲವು ವಾರ್ಡ್ಗಳಲ್ಲಿ ರಸ್ತೆಗಳನ್ನು ಕಿತ್ತು ಹಾಕಲಾಗಿದ್ದು, ಪುನಃ ದುರಸ್ತಿ ಮಾಡಲು ಮುಂದಾಗಿಲ್ಲ. ಇನ್ನು ಕೆಲ ವಾರ್ಡ್ಗಳಲ್ಲಿ ಯುಜಿಡಿ ಕಾಮಗಾರಿ ಸಂಪೂರ್ಣ ಮುಗಿದರೂ ಪುನಃ ಕಿತ್ತ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯಕ್ಕೆ ನಗರಸಭೆ ಮುಂದಾಗಿಲ್ಲ. ಹೀಗಾಗಿ ರಸ್ತೆಗಳೆಲ್ಲವೂ ಕೆಸರು ಗದ್ದೆಗಳಂತಾದವು. ಜನತೆ ಸಂಚರಿಸಲು ತೀವ್ರ ಪ್ರಯಾಸ ಪಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅದರಲ್ಲೂ ಸಿರಸಪ್ಪಯ್ಯನ ಮಠದ ರಸ್ತೆಯನ್ನು ಮಳೆಗಾಲದಲ್ಲಿಯೇ ಪ್ರಾರಂಭ ಮಾಡಲಾಗಿದೆ. ಇನ್ನು ಕೊಪ್ಪಳ-ಕಾತರಕಿ ರಸ್ತೆಯಲ್ಲಿಯೂ ಕಾಮಗಾರಿ ನಡೆದಿದೆ ಇದರಿಂದ ಜನತೆ ಸಂಚಾರಕ್ಕೆ ಸುವ್ಯವಸ್ಥಿತ ದಾರಿ ಇಲ್ಲದೇ ಪ್ರಯಾಸ ಪಡುವಂತಾಗಿದೆ. ನಗರಸಭೆ ರಸ್ತೆ ಕಾಮಗಾರಿ, ಯುಜಿಡಿ ಕಾಮಗಾರಿ ಮಾಡುವ ವೇಳೆ ಕನಿಷ್ಠ ಜನತೆಯ ಸಂಚಾರಕ್ಕೆ ಪರ್ಯಾಯ ರಸ್ತೆ ಮಾಡಲಿ ಎಂದು ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ, ಪೌರಾಯುಕ್ತರಿಗೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

