ಉರ್ದು ಶಾಲೇಲಿ ಬಿಯರ್ ಬಾಟಲ್
ಕುಕನೂರ: ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಿದ್ದು, ಶಾಲಾ ಆವರಣ ಹಾಗೂ ಕಟ್ಟೆಗಳ ಮೇಲೆ ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿವೆ. ಬೆಳಗ್ಗೆ ಶಾಲೆ ಪ್ರಾರಂಭಕ್ಕೂ ಮುನ್ನ ಬಾಟಲ್, ಗುಟ್ಕಾ ಚೀಟು ಆಯುವುದೇ ಮಕ್ಕಳಿಗೆ ಒಂದು ಕಾಯಕವಾಗಿದೆ ಎಂದು ಶಿಕ್ಷಕರು ಗೋಳಿಡುತ್ತಿದ್ದಾರೆ.
ಗ್ರಾಮದ ವಿದ್ಯಾನಗರದ ರಸ್ತೆ ಪಕ್ಕದ ಉರ್ದು ಶಾಲೆಯಲ್ಲಿ ಈ ದುಃಸ್ಥಿತಿ ಇದೆ. ಶಾಲಾ ಸಿಬ್ಬಂದಿ ಇಲ್ಲದಿರುವುದನ್ನು ಗಮನಿಸಿದ ಪುಂಡರು ಇಂತಹ ಕೃತ್ಯಗಳಿಗೆ ಶಾಲೆ ಬಳಸುತ್ತಿದ್ದಾರೆ.
ಶಾಲೆ ಮುಂದೆ ವಿದ್ಯುತ್ ಕಂಬವಿಲ್ಲದೇ ಕತ್ತಲು ಇರುವುದರಿಂದ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಈ ಶಾಲೆಗೆ ಕಾಂಪೌಂಡ್ ಇಲ್ಲದೇ ಮುಖ್ಯ ದ್ವಾರಕ್ಕೆ ಬೀಗ ಹಾಕಲು ಗೇಟ್ ಇಲ್ಲದಿರುವುದರಿಂದ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲೆ ಪ್ರಾರಂಭವಾಗಿ 6ರಿಂದ 7 ವರ್ಷ ಕಳೆದರೂ ಇದುವರೆಗೆ ಶಾಲೆಗೆ ಸೂಕ್ತ ರೀತಿಯಲ್ಲಿ ರಕ್ಷಣೆ ನೀಡುವ ಮುಖ್ಯ ದ್ವಾರಕ್ಕೆ ಗೇಟ್ ಇಲ್ಲ. ಇದು ಸಮಸ್ಯೆಯಾಗಿ ಪರಿಣಮಿಸಿದೆ ಎನ್ನುವುದು ಸ್ಥಳೀಯರ ಅಂಬೋಣ.
ಶಾಲೆ ಆವರಣದಲ್ಲಿ ಹೆಚ್ಚಾಗಿ ಕಸ ಬೆಳೆಯುತ್ತಿದ್ದು, ಮಳೆಯಾದರೆ ಮಕ್ಕಳೊಂದಿಗೆ ಶಿಕ್ಷಕರು ಆವರಣ ಸ್ವಚ್ಛ ಮಾಡಬೇಕು. ಸಮತಟ್ಟಾದ ಜಾಗ ಇಲ್ಲವಾಗಿದ್ದು, ಮಳೆಯಾದಾಗ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದರಿಂದ ವಿರ್ದ್ಯ್ಙಾಗಳಿಗೆ ಆಟ, ಓಡಾಡಲು ತೊಂದರೆಯಾಗುತ್ತಿದೆ ಎಂದು ಶಿಕ್ಷಕರು ಹೇಳುತ್ತಾರೆ.
ದನಗಳ ಕಾಟ: ಶಾಲೆ ಆವರಣದಲ್ಲಿ ಹಲವು ಬಗೆಯ ಸಸಿಗಳನ್ನು ನೆಟ್ಟು, ಶಾಲೆ ಅಂದವನ್ನು ಹೆಚ್ಚಿಸಲು ಶಿಕ್ಷಕರು ಮುಂದಾಗಿ ಆಸಕ್ತಿಯಿಂದ ಶಿಕ್ಷಕರು ಸಸಿಗಳನ್ನು ನಡೆಸಿದರೆ, ಅವು ದನ ಹಾಗೂ ಕುರಿಗಳ ಪಾಲಗುತ್ತಿವೆ. ಇನ್ನಾದರೂ ಸಂಬಂಧಪಟ್ಟವರು ಇಲ್ಲಿ ನಡೆಯುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

