ಕೊಪ್ಪಳ

ಇ ಅಪ್ಲೋಡಿಂಗ್ ಕಡ್ಡಾಯ

Published On :

ಗಂಗಾವತಿ: ರು. 50 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವ ವರ್ತಕರು ಕಡ್ಡಾಯವಾಗಿ ಇ ಅಪ್ಲೋಡಿಂಗ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆಯ ದಾವಣಗೆರೆ ವಿಭಾಗದ ಜಂಟಿ ಆಯುಕ್ತ ಜೆ. ಕುಚೇಲ ತಿಳಿಸಿದರು.
ನಗರದ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ಮತ್ತು ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು ಆಯೋಜಿಸಿದ್ದ ಖರೀದಿ ಮತ್ತು ಮಾರಾಟ ವಿವರಗಳ ವಿದ್ಯುನ್ಮಾನ ಅಳವಡಿಕೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಂಗಾವತಿಯಲ್ಲಿ 900 ವರ್ತಕರಲ್ಲಿ ಕೇವಲ 413 ವರ್ತಕರು ಮಾತ್ರ ಇ ಅಪ್ಲೋಡಿಂಗ್ ಮಾಡಿದ್ದಾರೆ. ಆದರೆ ವರ್ತಕರಿಗೆ ಇ ಅಪ್ಲೋಡಿಂಗ್ ಕುರಿತು ಹೆಚ್ಚಿನ ಮಾಹಿತಿ ಕೊರತೆ ಮತ್ತು ಭಯ ಇರುವುದರಿಂದ ಅಪ್ಲೋಡ್ ಮಾಡುವ ವರ್ತಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಅಮೆಂಡ್‌ಮೆಂಟ್ ಪ್ರಕಾರ ರು. 2 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ವರ್ತಕರು ಜೂನ್‌ನಿಂದ ಖರೀದಿ ತೆರಿಗೆ ಕಡ್ಡಾಯವಾಗಿ ಇ ಅಪ್ಲೋಡ್ ಮಾಡುವ ಮೂಲಕ ವಹಿವಾಟು ವಿವರಣೆ ನೀಡಬೇಕೆಂದು ತಿಳಿಸಿದರು.
ಎಂಟು ತಿಂಗಳ ಅವಧಿಯಲ್ಲಿ ರು. 50 ಕೋಟಿಗೂ ಹೆಚ್ಚು ಪರ್ಚೇಜ್ ಮತ್ತು ಸೇಲ್ ಅಪ್ಲೋಡಿಂಗ್  ಮಾಡುವ ಮೂಲಕ ಇಲಾಖೆಗೆ ವಿವರಣೆ ನೀಡಲಾಗಿದೆ ಎಂದರು. ವರ್ತಕರ ತೆರಿಗೆ ರೂಪದ ಹಣದಲ್ಲಿ ಸರ್ಕಾರ ಜನಕಲ್ಯಾಣ ಮತ್ತು ಸಮುದಾಯದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಆದ ಕಾರಣ ವರ್ತಕರು ವಾಣಿಜ್ಯ ತೆರಿಗೆ ಇಲಾಖೆ ಜತೆ ಸಹಕರಿಸಿ, ತಮ್ಮ ವಹಿವಾಟಿನ ವಿವರಗಳನ್ನು ನೀಡುವ ಜತೆಗೆ ಸರ್ಕಾರಕ್ಕೆ ತೆರಿಗೆ ಕಟ್ಟಿ ಪಾರದರ್ಶಕತೆ ಮೆರೆಯಬೇಕು ಎಂದರು.
ವಾಣಿಜ್ಯ ತೆರಿಗೆ ಅಧಿಕಾರಿ ಜಿ. ನಾರಪ್ಪ, ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೀರಪ್ಪ ರಾಜೂರ, ಬಳ್ಳಾರಿಯ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎನ್.ಎಸ್. ರಘುನಾಥಗೌಡ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಶೆಟ್ಟಿ, ಗಂಗಾವತಿಯ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಐ.ಜೆ. ನಿಲೋಗಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉದ್ಯಮಿ ಕಾಳಪ್ಪ, ತೆರಿಗೆ ಇಲಾಖೆಯ ಬದರಿನಾಥ ಜೋಷಿ, ಇಲಾಖೆ ಸಿಬ್ಬಂದಿ, ವರ್ತಕರು ಭಾಗವಹಿಸಿದ್ದರು. ಭೀಮಸೇನ ಅಳವಂಡಿಕರ ನಿರೂಪಿಸಿದರು, ಬೇಥಲ್ ಶಾಲೆ ಮಕ್ಕಳು ರ್ಪ್ರ್ಙಾಸಿದರು. ವಸುಧೇಂದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.