ಕೊಪ್ಪಳ

ಜಿಲ್ಲೆಗೆ ಅನ್ಯಾಯ: ಕರವೇ ಖಂಡನೆ

Published On :

ಕೊಪ್ಪಳ: ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಯಾವುದೇ ಅನುದಾನ ಘೋಷಣೆ ಮಾಡದೇ ರೈಲ್ವೆ ಸಚಿವ ಸದಾನಂದಗೌಡ ಜಿಲ್ಲೆಯ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ಯ ಉತ್ತರ ಕನಾಟಕ ಕಾರ್ಯಾಧ್ಯಕ್ಷ ರಾಜೇಶ ಅಂಗಡಿ ಆರೋಪಿಸಿದ್ದಾರೆ.
ಕೊಪ್ಪಳಕ್ಕೆ ನೂತನ ರೈಲ್ವೆ ಯೋಜನೆ ಜಾರಿಯಾದಾಗಿನಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮುನಿರಾಬಾದ್-ಮೆಹಬೂಬ್‌ನಗರ ಮಾರ್ಗದ ಕಾಮಗಾರಿ ಚಾಲ್ತಿಯಲ್ಲಿದ್ದು ಹಣಕಾಸಿನ ಕೊರತೆಯಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ರಾಜ್ಯದವರೇ ಆದ ಸದಾನಂದಗೌಡರು ಮಂಡಿಸುವ ಬಜೆಟ್‌ನಲ್ಲಿ ಜಿಲ್ಲೆಗೆ ಸಿಂಹಪಾಲು ಬರಬಹುದು ಎನ್ನುವ ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಜನತೆಗೆ ಭ್ರಮನಿರಸನವಾಗಿದೆ. ರೈಲ್ವೆ ಕಾಮಗಾರಿಯನ್ನು ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಆಶ್ವಾಸನೆ ನೀಡಿ ಆಯ್ಕೆಯಾಗಿರುವ ಸಂಸದ ಸಂಗಣ್ಣ ಕರಡಿ ಜನರಿಗೆ ಉತ್ತರಿಸಬೇಕಿದೆ ಎಂದಿದ್ದಾರೆ.

ಈ ಬಾರಿ ರೈಲ್ವೆ ಬಜೆಟ್ ಕೊಪ್ಪಳ ಪಾಲಿಗೆ ಬುರ್‌ಬುಷ್ ಆಗಿದೆ. ಏನು ಸಿಗದೆ ಇರುವುದು ಬೇಸರ ತರಿಸಿದೆ. ಹಾಲಿ ಸಂಸದರು ಒತ್ತಡ ಹಾಕಿ, ಜಿಲ್ಲೆಗೆ ಏನಾದರೂ ದೊರಕುವಂತೆ ಮಾಡಬೇಕಾಗಿತ್ತು. ರಾಜ್ಯದವರೇ ಸಚಿವರಾಗಿದ್ದಾಗಲೂ ಜಿಲ್ಲೆಗೆ ಏನು ಸಿಗದೆ ಇರುವುದು ನೋವಿನ ಸಂಗತಿ ಮತ್ತು ಬೇಸರವನ್ನುಂಟು ಮಾಡಿದೆ.
-ರಾಘವೇಂದ್ರ ಹಿಟ್ನಾಳ,
ಶಾಸಕರು, ಕೊಪ್ಪಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.