ಕೊಪ್ಪಳ

ರಾಜ್ಯದಲ್ಲಿ 1216 ಜಾತಿ

Published On :

ಕೊಪ್ಪಳ:  ರಾಜ್ಯದ ಜಾತಿಗಳ ಅಂಕಿ-ಸಂಖ್ಯೆಗಳ ಕುರಿತು ಸರ್ಕಾರಕ್ಕೆ ಈ ಮೊದಲು ನಿಖರ ಮಾಹಿತಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಸದ್ಯ ಇರುವ ಜಾತಿಗಳ ಕುರಿತು ನಿಖರ ಮಾಹಿತಿಗಾಗಿ ಜಾತಿ ಸಮೀಕ್ಷೆ ನಡೆಸುವಂತೆ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸಿದ್ದು, ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 1216 ಜಾತಿಗಳಿವೆ.
ರಾಜ್ಯದಲ್ಲಿ ಮನೆ, ಮನೆಗೆ ತೆರಳಿ ಕುಟುಂಬ ಸಮೀಕ್ಷೆ ನಡೆಯುವ ವೇಳೆ ಜಾತಿ ಕಾಲಂ ಹಾಗೂ ಧರ್ಮದ ಕಾಲಂ ಭರ್ತಿ ಮಾಡಿ ಅಂಕಿ ಅಂಶ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಜೂನ್ ತಿಂಗಳಾಂತ್ಯಕ್ಕೆ ಜಾತಿ ಸಮೀಕ್ಷೆ ಮುಕ್ತಾಯವಾಗಿದೆ. ಸದ್ಯ ರಾಜ್ಯದಲ್ಲಿ 1216 ಜಾತಿಗಳಿವೆ ಎಂದು ಹಿಂದುಳಿದ ವರ್ಗಗಳ ಆಯೋಗ ಅಧಿಕೃತ ಮಾಹಿತಿ ನೀಡಿದೆ. ಸರ್ಕಾರದ ಸೌಲಭ್ಯ ಎಲ್ಲರಿಗೂ ತಲುಪಬೇಕು. ರಾಜ್ಯದಲ್ಲಿ ಕಡಿಮೆ ಜಾತಿಯ ಜನಾಂಗಕ್ಕೂ ಕಾನೂನಿನಡಿ, ನ್ಯಾಯಸಮ್ಮತವಾಗಿ, ಶೈಕ್ಷಣಿಕ, ಸಾಮಾಜಿಕ ಮೀಸಲಾತಿ, ಸೌಲಭ್ಯ ದೊರೆತು ಎಲ್ಲರೂ ಸಮಬಾಳು ಸಮಪಾಲು ಎನ್ನುವ ಇರಬೇಕು. ಇದು ಜಾತಿ ಸಮೀಕ್ಷೆ ನಡೆದು ಅಂಕಿ ಸಂಖ್ಯೆ ದೊರೆತಾಗ ಮಾತ್ರ ಸಾಧ್ಯ ಎನ್ನುವ ಉದ್ದೇಶದಿಂದ ಜಾತಿ ಸಮೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಅಸ್ತು ಎಂದು ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಜವಾಬ್ದಾರಿ ವಹಿಸಿದ್ದರು. ಈಗ ಸಮೀಕ್ಷೆ ನಡೆಸಿ ಸದ್ಯ ರಾಜ್ಯದಲ್ಲಿ 1216 ಜಾತಿಗಳಿವೆ ಎನ್ನುತ್ತಿದೆ.
ಹಿಂದುಳಿದ ವರ್ಗದಲ್ಲಿ 1065 ಜಾತಿ: ಹಿಂದುಳಿದ ವರ್ಗದಡಿ ರಾಜ್ಯದಲ್ಲಿ ಬರೋಬ್ಬರಿ 1065 ಜಾತಿಗಳಿವೆ ಎನ್ನುವ ಮಾಹಿತಿ ಆಯೋಗ ಕಲೆ ಹಾಕಿದೆ. ಇದರಲ್ಲಿ ನೂರಾರು ಸೇರ್ಪಡೆಯಾಗಿವೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜಾತಿಯಲ್ಲೇ ದೊಡ್ಡ ಪ್ರಮಾಣದ ಜಾತಿಯ ಜನಾಂಗಗಳಿವೆ ಎನ್ನುವಂತಾಗಿದೆ.
ಎಸ್ಸಿ, ಎಸ್ಟಿ ಗಣನೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿಯೂ ಹಲವು ಉಪ ಜಾತಿಗಳಿವೆ. ಇವುಗಳನ್ನು ನಿಯಮಾನುಸಾರ ಆಯೋಗ ಗಣನೆಗೆ ತೆಗೆದುಕೊಂಡಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದರೆ, ಪರಿಶಿಷ್ಟ ಪಂಗಡದಲ್ಲಿ 50 ಜಾತಿಗಳಿವೆ ಎನ್ನುತ್ತಿದೆ.
ಬಿಟ್ಟುಹೋದ ಜಾತಿ ಸೇರ್ಪಡೆಗಿದೆ ಅವಕಾಶ
ಜಾತಿಯ ಪಟ್ಟಿಯನ್ನು ನೋಡಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ, ಜಿಪಂ ಸಿಇಒ ಕಚೇರಿ, ತಾಪಂ, ತಹಸೀಲ್ದಾರ್ ಕಚೇರಿ, ಗ್ರಾಪಂ, ಜಿಲ್ಲಾ ಹಿಂದುಳಿದ ವರ್ಗಗಳ ಕಚೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇತರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಕಚೇರಿಯಲ್ಲಿ ಜಾತಿಯ ಪಟ್ಟಿ ಲಭ್ಯವಿರುತ್ತದೆ. ಸಾರ್ವಜನಿಕರು ಜಾತಿ ಪಟ್ಟಿಯಲ್ಲಿ ತಮ್ಮ ಜಾತಿಗಳ ನಮೂದು ಸರಿಯಾಗಿ ಆಗದಿದ್ದಲ್ಲಿ, ತಪ್ಪಾಗಿದ್ದಲ್ಲಿ, ಸದ್ಯದ ಜಾತಿ ಪಟ್ಟಿಯಲ್ಲಿ ತಮ್ಮ ಜಾತಿ ಇಲ್ಲದೇ ಇದ್ದಲ್ಲಿ, ಆ ಹೊಸ ಜಾತಿಯನ್ನು ಸೇರ್ಪಡೆ ಮಾಡಬೇಕಿದ್ದಲ್ಲಿ ಸಂಬಂಧಿಸಿದ ಅರ್ಜಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಪಡೆದು ಜು. 18ರ ಒಳಗಾಗಿ ಇಲಾಖೆ ಅಧಿಕಾರಿ ಮೂಲಕ ಹೊಸ ಜಾತಿ ಸೇರ್ಪಡೆ ಮಾಡಬಹುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಆರ್. ಶಾಂತರಾಜ್ ಪ್ರಕಟಣೆ ನೀಡಿದ್ದಾರೆ.


-ದತ್ತು ಕಮ್ಮಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.