ಕೊಪ್ಪಳ

ನಾಳೆ ಸೀಡಿ ಬಿಡುಗಡೆ

Published On :


ಕುಕನೂರ: ಸ್ಥಳೀಯ ಆರ್ಯರ ಮತ್ತು ಸೊರಟೂರ ಆಯಿಲ್ ಮಿಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯಲ್ಲಿ ಫೆ. 2ರಂದು ಪ್ರಿಯಾಂಕಾ ರೂರಲ್ ಎಜುಕೇಷನ್ ಅಂಡ್ ಮಲ್ಟಿಪರ್ಪಸ್ ಹಾಗೂ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾತಂತ್ರ್ಯ ಯೋಧ ದಿ ಯಜಮಾನ್ ರೊಕ್ಕಪ್ಪನವರ ಆರ್ಯರ 20ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ ಮತ್ತು ವೀರ ರಾಣಿ ಕಿತ್ತೂರ ಚನ್ನಮ್ಮಳ 189ನೇ ವಿಜಯೋತ್ಸವದ ಅಂಗವಾಗಿ ಚನ್ನಮ್ಮನ ಲಾವಣಿ ಪದಗಳ ಸಿಡಿ ಲೋಕಾರ್ಪಣೆಗೊಳ್ಳಲಿದೆ. ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿ, ಕೂಡಲ ಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಕಳಕಪ್ಪ ಬಂಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಸಂಗಣ್ಣ ಕರಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಚ್.ಕೆ. ಪಾಟೀಲ ಸಿಡಿ ಬಿಡುಗಡೆ ಮಾಡುವರು. ಅತಿಥಿಗಳಾಗಿ ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ಸಂಸದ ಶಿವರಾಮಗೌಡ, ಶಾಸಕರಾದ ಈಶಣ್ಣ ಗುಳಗಣ್ಣವರ, ಹಾಲಪ್ಪ ಆಚಾರ, ಎಚ್.ಆರ್. ಶ್ರೀನಾಥ, ಕೆ.ಬಿ. ಬ್ಯಾಳಿ, ಡಾ೤ ಮಲ್ಲಿಕಾರ್ಜುನ ರಾಂಪುರ, ವೀರಣ್ಣ ನಿಂಗೋಜಿ, ವಿರೂಪಾಕ್ಷಪ್ಪ ಚಂಡೂರ, ಗುರುಲಿಂಗಯ್ಯ ಹಿರೇಮಠ, ಕಾಶೀಮಸಾಬ ತಳಕಲ್ಲ ಭಾಗವಹಿಸಲಿದ್ದಾರೆ.ಅಲ್ಲಮಪ್ರಭು ಬೆಟ್ಟದೂರ, ಡಾ೤ ಬಸವರಾಜ ಸಬರದ, ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಗುವುದು ಎಂದು ಗವಿಸಿದ್ದಪ್ಪ ಆರೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.