ಕೊಪ್ಪಳ

ರು.150ಕ್ಕೆ 4500 ಲೀ. ಶುದ್ಧ ನೀರು!

Published On :


ಯಲಬುರ್ಗಾ: ಸ್ಥಳೀಯ ಪಪಂದಿಂದ ಸಾರ್ವಜನಿಕರಿಗೆ ರು.150ಗೆ 4,500 ಲೀಟರ್ ಶುದ್ಧ ಕುಡಿಯುವ ನೀರು ವಿತರಿಸುವ ನೂತನ ಟ್ಯಾಂಕಿಗೆ ಶನಿವಾರ ಸಂಜೆ ಪಪಂ ಅಧ್ಯಕ್ಷ ಸುರೇಶಗೌಡ ಶಿವನಗೌಡ ಚಾಲನೆ ನೀಡಿದರು. ಪಪಂ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರಿಗೆ ನಿತ್ಯ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊರೆಸಿದ ಹಲವಾರು ಕೊಳವೆಬಾವಿಗಳಿಂದಲೂ ನೀರು ಸಿಗುತ್ತಿರಲಿಲ್ಲ. ಇದ್ದ ಕೆಲವು ಬೋರ್‌ವೆಲ್‌ಗಳು ಸಹ ಹಾಳಾಗಿದ್ದರಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗಿತ್ತು. ಈ ಸಮಸ್ಯೆ ನಿವಾರಣೆ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಜನರ ಸಮಸ್ಯೆ ನಿವಾರಿಸಲು ತಿಂಗಳ ಬಾಡಿಗೆಯಂತೆ ಪಟ್ಟಣದ ಸರ್ಕಾರಿ, ಖಾಸಗಿ ಮಾಲೀಕತ್ವದ ಕೊಳವೆಬಾವಿಗಳಿಂದ ನೀರು ಪಡೆದು # 150ಕ್ಕೆ 4,500 ಲೀ. ನೀರು ವಿತರಿಸಲಾಗುವುದು ಎಂದರು. ರತ್ನಮ್ಮ ಕೊಡಗಲಿ, ಜಯಶ್ರೀ ಕಂದಕೂರು, ಅಮರಪ್ಪ ಕಲಬುರ್ಗಿ, ಚಂದುಸಾಬ್ ಕವಲೂರು, ರಮೇಶ ಗೊಂದಕರ್, ಚನ್ನಪ್ಪ, ಶಿವಕುಮಾರ, ರಮೇಶ ಬೇಲೇರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.