ಮಕ್ಕಳಿಗೆ ತ್ಯಾಗ ಬಗ್ಗೆ ತಿಳಿಹೇಳಿ
ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ
ಕುಷ್ಟಗಿ: ನಮ್ಮ ದೇಶದ ಸಂವಿಧಾನ, ರಾಷ್ಟ್ರಭಕ್ತಿ, ದೇಶಕ್ಕಾಗಿ ಮಹಾನ್ ನಾಯಕರು ಮಾಡಿದ, ತ್ಯಾಗ ಬಲಿದಾನ ಕುರಿತು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತಿಳಿಹೇಳುವ ಕೆಲಸವಾಗಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಹೇಳಿದರು. ಶನಿವಾರ ಇಲ್ಲಿನ ಸಂತೆ ಮೈದಾನದಲ್ಲಿ ನಡೆದ 64ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹಬ್ಬಗಳ ಆಚರಣೆ ಜೊತೆಗೆ ಮಕ್ಕಳಿಗೆ ಅವುಗಳ ಮಹತ್ವ ತಿಳಿಹೇಳುವ ಕೆಲಸವಾದಾಗ ಮಾತ್ರ ರಾಷ್ಟ್ರೀಯ ಹಬ್ಬಗಳಿಗೆ ಮಹತ್ವ ಬರುತ್ತದೆ ಎಂದರು. ಕಾರ್ಯಕ್ರಮ ಕುರಿತು ಪುರಸಭೆ ಸದಸ್ಯ ಎಂ.ಡಿ ಅಸ್ಲಂ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಕಾಳಮ್ಮ ಬಡಿಗೇರ, ಉಪಾಧ್ಯಕ್ಷೆ ರೂಪಾ ಕೋನಸಾಗರ, ಜಿಪಂ ಸದಸ್ಯ ಪರಸಪ್ಪ ಕತ್ತಿ, ಇನಾಯಿತ್ಸಾಬ ಸಿದ್ದಿಕಿ, ವೀರೇಶ ಬಂಗಾರಶೆಟ್ಟರ್ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಮುಖ್ಯಾಧಿಕಾರಿ ಮಹಾದೇವ ಬಿಸೆ ಇದ್ದರು. ನೈರ್ಮಲ್ಯಾಧಿಕಾರಿ ಹಂಪಯ್ಯ ನಿರೂಪಿಸಿ, ವಂದಿಸಿದರು.
ಸ್ತಂಭ ಬದಲಾವಣೆಗೆ ಸೂಚನೆ: ಸಾರ್ವಜನಿಕ ಸಂತೆ ಮೈದಾನದಲ್ಲಿರುವ ಧ್ವಜ ಸ್ತಂಭವು ತುಕ್ಕು ಹಿಡಿದಿರುವುದನ್ನು ಗಮನಿಸಿದ ಶಾಸಕ ಭಯ್ಯಾಪುರ ಅದನ್ನು ಬದಲಾಯಿಸಲು ಸೂಚಿಸಿದರು.
ನೂತನ ತಾಲೂಕು ಕ್ರೀಡಾಂಗಣದಲ್ಲಿ ಧ್ವಜರೋಹಣ: ನೂತನ ತಾಲೂಕು ಕ್ರೀಡಾಂಗಣದಲ್ಲಿ ತಹಸೀಲ್ದಾರ್ ವೀರೇಶ ಬಿರಾದಾರ 64ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೇರವೇರಿಸಿದರು. ತಾಪಂ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿದರು. ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನು ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇವೇಳೆ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ತಾಪಂ ಉಪಾಧ್ಯಕ್ಷೆ ಶರಣಮ್ಮ ಅಂಗಡಿ, ಪುರಸಭೆ ಅಧ್ಯಕ್ಷ್ಯೆ ಕಾಳಮ್ಮ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಆಶ್ರಯ ಬಡಾವಣೆಯಲ್ಲಿ: ಕುಷ್ಟಗಿ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 64ನೇ ಗಣರಾಜೋತ್ಸವ ಆಚರಿಸಲಾಯಿತು. ಗಣತಂತ್ರ ನಿಮಿತ್ತ ಶಾಲೆಯಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷ ಈರಪ್ಪ ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಶಾಲೆ ಮುಖ್ಯಶಿಕ್ಷಕ ಕಳಕಪ್ಪ ಮೇಟಿ, ಎಸ್ಡಿಎಂಸಿ ಸದಸ್ಯರು, ಶಿಕ್ಷಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

