ಕೊಪ್ಪಳ

ಚನ್ನಬಸವ ತಾತನ ರಥೋತ್ಸವ

Published On :

ಗಂಗಾವತಿ: ನಗರದ ಆರಾಧ್ಯ ದೈವ, ಕಾಯಕ ಪುರುಷ ಶ್ರೀ ಚನ್ನಬಸವಸ್ವಾಮಿ ತಾತನವರ ರಥೋತ್ಸವ ಶ್ರದ್ಧಾ-ಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು. ಮಲ್ಲಿಕಾರ್ಜುನ ಮಠದಿಂದ ಪ್ರಾರಂಭಗೊಂಡ ರಥೋತ್ಸವ ಬಸವೇಶ್ವರ ವೃತ್ತದ ವರೆಗೂ ಸಾಗಿತು. ಬೆಳಗ್ಗೆ ಬಿಲ್ವಾರ್ಚನೆ, ವಿಶೇಷ ಅಲಂಕಾರ, ಪ್ರವಚನ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 9 ಗಂಟೆಗೆ ಮಡಿ ರಥೋತ್ಸವ. 3 ದಿನಗಳಿಂದ ನಡೆಯುತ್ತಿರುವ ಜಾತ್ರೆಯಲ್ಲಿ ಚನ್ನಬಸವ ತಾತನವರ ಮುತ್ತಿನ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.
ಹರಕೆ ತೀರಿಸಿದ ಭಕ್ತರು: ಶ್ರೀ ಚನ್ನಬಸವಸ್ವಾಮಿ ತಾತನವರ ಜಾತ್ರೆ ನಿಮಿತ್ತ ಸಹಸ್ರಾರು ಭಕ್ತರು ವಿವಿಧ ಗ್ರಾಮಗಳಿಂದ ಪಾದಯಾತ್ರೆ ಮೂಲಕ ಮಠಕ್ಕೆ ಆಗಮಿಸಿ ಹರಕೆ ತೀರಿಸಿದರು. ಕಾರಟಗಿ, ಕನಕಗಿರಿ, ಶ್ರೀರಾಮನಗರ, ಮರ್ಲಾನಳ್ಳಿ, ಗೋರೆಬಾಳು ಮುಂತಾದ ಗ್ರಾಮಗಳಿಂದ ಬೆಳಗ್ಗೆಯಿಂದಲೇ ಪಾದಯಾತ್ರೆ ಪ್ರಾರಂಭಿಸಿ ರಥೋತ್ಸವ ಸಮಯಕ್ಕೆ ಆಗಮಿಸಿ, ಭಕ್ತಿ ಸಮರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.