ಬಸ್ ನಿಲ್ದಾಣಕ್ಕೆ ಅಡಿಗಲ್ಲು
ಕೊಪ್ಪಳ: ತಾಲೂಕಿನ ಬಿಸರಹಳ್ಳಿ ಗ್ರಾಮದ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಶಾಸಕ ಸಂಗಣ್ಣ ಕರಡಿ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಒಟ್ಟು ರು. 44 ಲಕ್ಷ ವೆಚ್ಚದ ಈ ಕಾಮಗಾರಿಗೆ ರು. 25 ಲಕ್ಷ ಅನುದಾನ ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. ತಾಪಂ ಉಪಾಧ್ಯಕ್ಷೆ ಸುಜಾತಾ ಮಹೇಂದ್ರಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷ ಯಮನೂರಪ್ಪ ಭಜಂತ್ರಿ, ಉಪಾಧ್ಯಕ್ಷೆ ರೇಷ್ಮಾ ಪ್ರಕಾಶ ಕೊಪ್ಪದ, ತಾಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್, ಗ್ರಾಪಂ ಸದಸ್ಯರಾದ ತಿಪ್ಪಣ್ಣ ಕವಲೂರು, ಯಲ್ಲೇಶ ಹುಲ್ಲೂರು, ಸಿದ್ಧಪ್ಪ ಅಂಗಡಿ, ಫಕೀರಪ್ಪ ಆರೇರ್, ಆನಂದ ಜಾಲಿಹಾಳ, ಪ್ರಕಾಶ ಕೊಪ್ಪದ, ಕೆಎಸ್ಆರ್ಟಿಸಿ ಅಧಿಕಾರಿ ಜಗನ್ನಾಥ ಇದ್ದರು.
ದೇಗುಲಗಳ ಅಭಿವೃದ್ಧಿಗೆ ರು. 20 ಲಕ್ಷ: ಶಾಸಕ ಕರಡಿ
ಕೊಪ್ಪಳ: ವಿಧಾನಸಭಾ ಕ್ಷೇತ್ರಗಳ 10 ದೇವಸ್ಥಾನಗಳಿಗೆ ತಲಾ ರು. 2 ಲಕ್ಷ ದಂತೆ ಒಟ್ಟು ರು. 20 ಲಕ್ಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಶಾಸಕ ಸಂಗಣ್ಣ ಕರಡಿ ತಿಳಿಸಿದ್ದಾರೆ. ಕೊಪ್ಪಳ ಕ್ಷೇತ್ರ ವ್ಯಾಪ್ತಿಯ 10 ದೇವಾಲಯಗಳ ಜೀರ್ಣೋದ್ಧಾರ, ಅಭಿವೃದ್ಧಿ ಹಾಗೂ ದುರಸ್ತಿ ಕಾರ್ಯಗಳಿಗಾಗಿ ತಲಾ ರು. 2 ಲಕ್ಷಗಳಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹುಲಿಗಿಯ ಈಶ್ವರ ದೇವಸ್ಥಾನ, ಬೆಳಗಟ್ಟ ಗ್ರಾಮದ ಕಲ್ಲಿನಾಥ ದೇವಾಲಯ, ಲಾಚನಕೇರಿಯ ಚನ್ನಪ್ಪ ದೇವಸ್ಥಾನ, ಗೊಂಡಬಾಳ ಗ್ರಾಮದ ನಿಮಿಷಾಂಬಾ ದೇವಸ್ಥಾನ, ಮುನಿರಾಬಾದ್ ಡ್ಯಾಂನ ಕಲಕಿ ಮಾರಮ್ಮ ದೇವಸ್ಥಾನ, ಗುಡಗೇರಿಯ ಈಶ್ವರ ದೇವಸ್ಥಾನ, ಕೊಪ್ಪಳ ಪ್ರಗತಿ ನಗರದ ಈಶ್ವರ ದೇವಸ್ಥಾನ, ಮುತ್ತೂರು ಗ್ರಾಮದ ಮದಗಮ್ಮ ದೇವಾಲಯ, ಹೊಸ ಶಿವಪುರದ ಗಾಳೆಮ್ಮ ದೇವಸ್ಥಾನ ಹಾಗೂ ಮಹಮ್ಮದ್ ನಗರದ ಪಾಂಡುರಂಗ ದೇವಾಲಯಗಳಿಗೆ ತಲಾ ರು. 2 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಅನುದಾನ ಬಿಡುಗಡೆ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಮುಜರಾಯಿ ಸಚಿವರು, ಉನ್ನತ ಅಧಿಕಾರಿಗಳಿಗೆ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

