ಇಂದು ನಾರಾಯಣ ರಾವ್ಗೆ ಸನ್ಮಾನ
ಗಂಗಾವತಿ: ಅಖಿಲ ಭಾರತ ಎಸ್ಬಿಎಚ್ ಬ್ಯಾಂಕ್ ನೌಕರರ ಸಂಘದ ರಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ನಗರದ ಎಸ್ಬಿಎಚ್ ಎಡಿಬಿ ಶಾಖೆಯ ಉದ್ಯೋಗಿ ನಾರಯಣ ರಾವ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಗಂಗಾವತಿಯ ಬ್ಯಾಂಕ್ ನೌಕರರ ಸಂಘ ಫೆ. 6ರಂದು ಸಂಜೆ 6 ಗಂಟೆಗೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸರ್ವ ಗ್ರಾಹಕರು ಭಾಗವಹಿಸುವಂತೆ ಗೋಪಾಲಕೃಷ್ಣ ತಿಳಿಸಿದ್ದಾರೆ. ಬ್ಯಾಂಕ್ ನೌಕರರ ಸಂಘಟನೆ ಹಾಗೂ ವಿವಿಧ ಸಂಘಗಳಿಗೆ ಮಾದರಿಯಾಗಿರುವ ನಾರಾಯಣ ರಾವ್ ಅವರ ಸೇವೆ ಶ್ಲಾಘನೀಯ ಎಂದು ಅವರು ಶ್ಲಾಘಿಸಿದ್ದಾರೆ.
ಹಲ್ಲೆ: ಜಿಪಂ ಸದಸ್ಯನಿಗೆ ನ್ಯಾಯಾಂಗ ಬಂಧನ
ಕುಷ್ಟಗಿ: ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋಮಣ್ಣ ಚಿನ್ನೂರು ಎಂಬುವರ ಮೇಲೆ 2005ರಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ತಾವಗೇರಾ ಜಿಪಂ ಕ್ಷೇತ್ರದ ಸದಸ್ಯ ವಿನಯಕುಮಾರ ಎಂ. ಮೇಲಿನಮನಿ ಅವರಿಗೆ ಫೆ. 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ. ವಿನಯಕುಮಾರ್ ಮೇಲಿನಮನಿ ಅವರ ತಾಯಿ ಶಿಶು ಅಭಿವೃದ್ಧಿ ಇಲಾಖೆ ಅಂಗನವಾಡಿಗಳ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಕೆಲವು ತಿಂಗಳಿಂದ ವೇತನ ಪಾವತಿ ಆಗಿರಲಿಲ್ಲ. ಹೀಗಾಗಿ, ತಮ್ಮ ತಾಯಿಯ ವೇತನವನ್ನು ವಿನಾಕಾರಣ ಏಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಲು ಬಂದ ವಿನಯಕುಮಾರ್ ಆಗ ಸಿಡಿಪಿಓ ಆಗಿದ್ದ ಸೋಮಣ್ಣ ಅವರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದರು. ಈ ಸಂಬಂಧ ಸೋಮಣ್ಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನೋಟಿಸ್ ನೀಡಿದ್ದರೂ ಕಳೆದ ಜೂ. 22ರ ವರೆಗೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಿನಯಕುಮಾರ್ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. ವಿನಯಕುಮಾರ್ ಮಂಗಳವಾರ (ಫೆ. 5) ನ್ಯಾಯಾಲಯಕ್ಕೆ ಶರಣಾಗಿದ್ದರು. ಇಲ್ಲಿನ ಜೆಎಂಎಫ್ಸಿ ನ್ಯಾಯಾಧೀಶ ವಿ. ವೆಂಕಟೇಶಪ್ಪ ಆರೋಪಿಗೆ ಫೆ. 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಬಣವೆಗೆ ಬೆಂಕಿ:ತಪ್ಪಿದ ಅನಾಹುತ
ಕುಷ್ಟಗಿ: ಸಮೀಪದ ಟೆಂಗುಂಟಿ ಗ್ರಾಪಂ ವ್ಯಾಪ್ತಿಗೆ ಬರುವ ಜಮೀನೊಂದರಲ್ಲಿ 2 ಬಣವೆಗಳಿಗೆ ಬೆಂಕಿ ಬಿದ್ದು, ಸಂಪೂರ್ಣ ಸುಟ್ಟಿವೆ. ಟೆಂಗುಂಟಿ ಗ್ರಾಮದ ಮುದಕಪ್ಪ ಅಬ್ಬಿಗೇರಿ ಎಂಬುವರಿಗೆ ಸೇರಿದ 2 ಜೋಳದ ಬಣವೆಗಳಿಗೆ ಬೆಂಕಿ ಬಿದ್ದಿದ್ದು, ಸುಮಾರು ರು. 40 ಸಾವಿರ ಮೌಲ್ಯದ ಮೇವು ಸುಟ್ಟಿದೆ ಎಂದು ಅಂದಾಜಿಸಲಾಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಹಾಲಯ್ಯ ಹಿರೇಮಠ ನಿಧನ
ಕೊಪ್ಪಳ: ತಾಲೂಕಿನ ಅಳವಂಡಿಯ ಹಾಲಯ್ಯ ಅಡಿವಯ್ಯ ಹಿರೇಮಠ (71) ಈಚೆಗೆ ಸ್ವಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾಗಿದರು. ಮೃತರಿಗೆ ಅಪಾರ ಬಂಧು ಮಿತ್ರರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

