ರೈತರ ಅಭಿವೃದ್ಧಿಯೇ ಬ್ಯಾಂಕ್ ಧ್ಯೇಯ
ಕೋಲಾರ: ಕೃಷಿಕರ ಅಭಿವೃದ್ಧಿಯೇ ಧ್ಯೇಯೋದ್ದೇಶವಾಗಿರುವ ಸಹಕಾರಿ ಬ್ಯಾಂಕುಗಳಲ್ಲಿಯೇ ರೈತರು ತಮ್ಮ ಆರ್ಥಿಕ ವಹಿವಾಟು ನಡೆಸುವಂತೆ ಕೋಲಾರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ಅವರು ಮಾಲೂರಿನ ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರಿ ಸಂಘದ ವತಿಯಿಂದ ಅರ್ಹ ಫಲಾನುಭವಿಗಳಿಗೆ ರೈತರ ಮನೆ ಬಾಗಿಲಿಗೆ ಶೂನ್ಯ ಬಡ್ಡಿ ದರದ ಕೃಷಿ ಸಾಲ ಸೌಲಭ್ಯದ ಚೆಕ್ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಬಹುತೇಕ ರೈತರು ತಮ್ಮ ಆರ್ಥಿಕ ವಹಿವಾಟುಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಡೆಸಿ ಕೇವಲ ಸಾಲ ಸೌಲಭ್ಯಗಳಿಗೆ ಮಾತ್ರ ಸಹಕಾರಿ ಬ್ಯಾಂಕಿನೆಡೆಗೆ ನೋಡುವ ಮನೋಭಾವ ಬಿಡಬೇಕು, ಸಹಕಾರಿ ಸಂಸ್ಥೆಗಳನ್ನು ಬಲಗೊಳಿಸಲು ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.
ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯುವುದರ ಜತೆಗೆ ಠೇವಣಿ ಇಡಲು ಮುಂದೆ ಬರಬೇಕು ಎಂದು ಕೋರಿ, ಬ್ಯಾಂಕ್ ನೀಡುತ್ತಿರುವ ಶೂನ್ಯ ಬಡ್ಡಿ ದರದ ಸಾಲ ಸದುಪಯೋಪಡಿಸಿಕೊಳ್ಳಲು ಕೋರಿದರು.
ಡಿಸಿಸಿ ಬ್ಯಾಂಕ್ 3 ಲಕ್ಷದವರೆಗೂ ಶೂನ್ಯ ಬಡ್ಡಿದರ, ಶೇ.3 ಬಡ್ಡಿಯಲ್ಲಿ 10 ಲಕ್ಷದವರೆಗೂ ರೈತರಿಗೆ ಕೃಷಿ ಸಾಲ ನೀಡುತ್ತಿದೆ, ಜತೆಗೆ ಹೈನುಗಾರಿಕೆಗೂ ಶೇ 4 ರ ಬಡ್ಡಿದರದ ಸಾಲ ನೀಡುತ್ತಿದೆ ಎಂದರು. ಇದೀಗ ಬ್ಯಾಂಕ್ ಆನ್ಲೈನ್ ಸೇವೆಗೂ ಒಳಪಟ್ಟಿದ್ದು, ಇನ್ನು ಮುಂದೆ ವಾಣಿಜ್ಯ ಬ್ಯಾಂಕುಗಳಿಗಿಂತ ಉತ್ತಮ ಗ್ರಾಹಕ ಸೇವೆ ಒದಗಿಸಲಿದೆ ಎಂದು ಭರವಸೆ ನೀಡಿ, ಹಿಂದಿನ ಕಹಿ ನೆನಪನ್ನು ಮರೆತು ಬ್ಯಾಂಕ್ನಲ್ಲಿ ವಹಿವಾಟು ನಡೆಸಿ ಎಂದು ಕೋರಿದರು.
ಮಹಿಳಾ ಸಂಘಗಳಿಗೆ ಆರ್ಥಿಕ ಸಭಲೀಕರಕ್ಕಾಗಿ ಸಾಲಸೌಲಭ್ಯ ನೀಡುವುದರ ಜೊತೆಗೆ ತಾಲೂಕಿನ ಹಾಲು ಉತ್ಪಾದರಕ ಸಹಕಾರಿ ಸಂಘಗಳು ಸಹಕಾರಿ ಬ್ಯಾಂಕುಗಳಲ್ಲಿ ಖಾತೆ ತೆರೆಯುವ ಮೂಲಕ ಆರ್ಥಿಕ ವಹಿವಾಟು ನಡೆಸುವುದರರಿಂದ ಹೈನುಗಾರಿಕೆಯ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ ಎಂದರು.
ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಅನೇಕ ಬ್ಯಾಂಕುಗಳು ಮುಚ್ಚಿಹೋಗಿದ್ದು ದ್ಯಾಪಸಂದ್ರ ರೇಷ್ಮೆ ಬೆಳೆಗಾರರ ಸಹಕಾರಿ ಸಂಘವು ರೈತರ ಅನುಕೂಲಕ್ಕಾಗಿ ತಮ್ಮ ಸೇವಾ ಕ್ಷೇತ್ರವನ್ನು ವಿಸ್ತರಿಸಿ ರೈತರಿಗೆ ಅನುಕೂಲ ವಾಗುವಂತಹ ರಸಗೊಬ್ಬರ, ಕೀಟ ನಾಶಕಗಳು ಮತ್ತು ಪಶು ಆಹಾರಗಳನ್ನು ಮಾರುಕಟ್ಟೆಯ ದರಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು ರೈತರ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಉಮಾಕಾಂತ್, ನಿರ್ದೇಶಕರಾದ ಶಂಕರನಾರಾಯಗೌಡ, ಸೋಮಶೇಖರ್, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಮುನಿರಂಗಪ್ಪ, ಆರ್. ಪ್ರಭಾಕರ್, ಎಸ್.ಟಿ. ನಾರಾಯಣಪ್ಪ, ಮಂಜುಳಮ್ಮ, ವನಜಮ್ಮ, ವ್ಯವಸ್ಥಾಪಕ ಸುಧಾಕರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

