ಕೋಲಾರ

ತಾಪಂ ಅನುದಾನ ಬ್ಯಾಂಕ್‌ನಲ್ಲಿ ಠೇವಣಿ

Published On :

ಮುಳಬಾಗಲು: ತಾಲೂಕು ಪಂಚಾಯಿತಿಯ 11ನೇ ಹಣಕಾಸು ಯೋಜನೆಯ ರು. 70 ಲಕ್ಷ ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡುವ ಉದ್ದೇಶದಿಂದ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣ ರೆಡ್ಡಿ ಅವರಿಗೆ ಭಾನುವಾರ ಚೆಕ್ ಹಸ್ತಾಂತರಗೊಳಿಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್ ಸರ್ಕಾರದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡುವುದು ವ್ಯವಹಾರ ನಡೆಸುವುದರಿಂದ ಬ್ಯಾಂಕ್‌ನಲ್ಲಿ ರೈತರಿಗೆ ಹೆಚ್ಚಿನ ಸಾಲ ನೀಡಲು ಸಹಾಯವಾಗುತ್ತದೆ ಎಂದರು. ಆದ್ದರಿಂದ ತಾ.ಪಂ. ಅನುದಾನವನ್ನು ಠೇವಣಿ ಇಡಲು ತೀರ್ಮಾನಿಸಲಾಗಿದೆ.  ಇತರೆ ಇಲಾಖೆಗಳ ಹಣವನ್ನು ಸಹ ಇಲ್ಲಿ ತೊಡಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಸಿ. ನೀಲಕಂಠೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು, ನಾನಾ ಯೋಜನೆಗಳಿಗೆ ಸಾಲಗಳನ್ನು ಅತಿ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದೆ ಎಂದರು.
 ಹಾಲಿ ಕೃಷಿ ಸಂಬಂಧಿಸಿದ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ಮೂರು ಲಕ್ಷ ರು.ವರೆವಿಗೂ ನೀಡಲಾಗುತ್ತಿದೆ ಎಂದರು. ಬ್ಯಾಂಕ್‌ನಲ್ಲಿ  ಹೆಚ್ಚಿನ ಠೇವಣಿ ಇದ್ದರೆ ಹಾಗೂ ಹೆಚ್ಚಿನ ವಹಿವಾಟು ನಡೆಸಿದರೆ ನಬಾರ್ಡ್ ಹೆಚ್ಚಿನ ಸಾಲ ನೀಡುತ್ತದೆ ಎಂದರು. ತಾ.ಪಂ. ಅಧ್ಯಕ್ಷೆ ಅರ್ಚನಾ ಮಲ್ಲಿಕಾರ್ಜುನ್, ಉಪಾಧ್ಯಕ್ಷ ಬೈರಪ್ಪ, ಮುಖಂಡರಾದ ಕಲ್ಲುಪಲ್ಲಿ ಪ್ರಕಾಶ್, ಸೇವಾದಳ ಜಿಲ್ಲಾಧ್ಯಕ್ಷ ಕಗ್ಗನಹಳ್ಳಿ ಶ್ರೀನಿವಾಸ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಜಿ. ರಾಮಲಿಂಗಾರೆಡ್ಡಿ ಮತ್ತಿತರರು ಹಾಜರಿದ್ದರು.

ಕಾಂಗ್ರೆಸ್ ಸಾಧನೆ ಸ್ಮರಣಾರ್ಹ
ಬಂಗಾರಪೇಟೆ: ದೇಶದ ನಾಲ್ಕು ಕೋಟಿ ಬಡ ರೈತರ ಕುಟುಂಬಗಳಿಗೆ ರು. 72 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದರೂ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಹುಮತ ಲಭಿಸದಿರುವುದಕ್ಕೆ ಕೇಂದ್ರದ ಮಾಜಿ ಸಚಿವ ಹಾಲಿ ಸಂಸದ ಕೆ.ಎಚ್. ಮುನಿಯಪ್ಪ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸತತವಾಗಿ 7ನೇ ಬಾರಿ ಲೋಕಸಭೆ ಪ್ರವೇಶ ಮಾಡಿರುವ ಸಂಸದ ಕೆ.ಎಚ್. ಮುನಿಯಪ್ಪಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂಘಟನೆ: ಕಾಂಗ್ರೆಸ್‌ಗೆ ಒಳ್ಳೆ ದಿನಗಳು ಬರಲಿದೆ. ಆದ್ದರಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮಲ್ಲಿರುವ ಗುಂಪುಗಾರಿಕೆ ದೂರ ಮಾಡಿ, ಬೇರುಮಟ್ಟದಿಂದ ಪಕ್ಷವನ್ನು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು. ಮುಂಬರುವ ಗ್ರಾಪಂ ಚುನಾವಣೆಯಲ್ಲಿ 43 ಪಂಚಾಯ್ತಿಗಳಲ್ಲಿಯೂ ಪಕ್ಷದವರು ಅಧಿಕಾರಕ್ಕೆ ಬರುವಂತೆ ಶ್ರಮಿಸಬೇಕು. ಇದರ ಮುಂದಾಳತ್ವವನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಹಿಸಿಬೇಕೆಂದು ಹೇಳಿದರು.
ಬೆಲೆ ಏರಿಕೆ: ಎಂಎಲ್ಸಿ ನಜೀರ್ ಅಹ್ಮದ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಬದಲಾವಣೆ ತರುವುದಾಗಿ ಹೇಳಿ ಜನರಿಗೆ ಮಂಕುಬೂದಿ ಎರಚಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷ ಮಾಡಿದ್ದಾದರೂ ಏನು? ಅಧಿಕಾರಕ್ಕೆ ಬಂದೊಡನೆ ಅಗತ್ಯ ಬೆಲೆಗಳನ್ನು ಏರಿಕೆ ಮಾಡಿ ಸಾಮಾನ್ಯ ಜನರನ್ನು ಮತ್ತಷ್ಟು ದಿವಾಳಿಯತ್ತ ನೂಕಿದೆ ಎಂದರು. ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಅನಿಲ್ ಕುಮಾರ್, ಬಿಸೇಗೌಡ, ಗಂಗಮ್ಮ, ವೆಂಕಟರತ್ನಮ್ಮ, ಪಾರ್ಥಸಾರಥಿ, ಮಂಜುನಾಥ್, ಕೆ. ಚಂದ್ರಾರೆಡ್ಡಿ, ಟಿ. ಮುನಿರಾಜು, ಶಂಷುದ್ದಿನ್ ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.