ಕೋಲಾರ

ಎತ್ತಿನಹೊಳೆ ಯೋಜನೆ ಅವೈಜ್ಞಾನಿಕ

Published On :

ಚಿಂತಾಮಣಿ: ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿ ಕೂಡಿದೆಯೆಂದು ಶಾಶ್ವತ ನೀರಾವರಿ ಮತ್ತು ಹೋರಾಟದ ಹಾದಿ ವಿಚಾರ ಗೋಷ್ಠಿಯಲ್ಲಿ ಸಿಪಿಐಎಂನ ಮಾಜಿ ಶಾಸಕ ಶ್ರೀರಾಮರೆಡ್ಡಿ ತೀವ್ರ ಆರೋಪ ಮಾಡಿದರು.
ನಗರದ ಸರ್ಕಾರಿ ಬಾಲಕರ ಪದವಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ 2ನೇ ದಿನದ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆಗೆ ಕುಡಿಯುವ ನೀರು ಹರಿಸಲು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿರುವ ಸರ್ಕಾರದ ಕಾರ್ಯವೈಖರಿ ಅವೈಜ್ಞಾನಿಕವಾಗಿ ಕೂಡಿದೆಯಂದು ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ತಪ್ಪು ಮಾಹಿತಿ: ಪಶ್ಚಿಮ ಘಟ್ಟಗಳಲ್ಲಿನ ನೇತ್ರಾವತಿ ನದಿ ತಿರುವು ಎಂದು ಜನ ಸಾಮಾನ್ಯರಲ್ಲಿ ಜನಪ್ರತಿನಿಧಿಗಳು ವೋಟ್ ಬ್ಯಾಂಕ್ಗಾಗಿ ತಪ್ಪು ಮಾಹಿತಿ ನೀಡಿ, ಎತ್ತಿನಹೊಳೆ ಯೋಜನೆಯೆಂದು ಕರೆಯುತ್ತಿದ್ದಾರೆ. ಆದರೆ ಪಶ್ಚಿಮ ಘಟ್ಟಗಳಿಂದ ಹರಿಯುವ ನದಿ ನೀರನ್ನು ಈ ಭಾಗದ ಜಿಲ್ಲೆಗಳಿಗೆ ಪೈಪ್ ಲೈನ್ ಮುಖಾಂತರ ವೈಜ್ಞಾನಿಕವಾಗಿ ಕುಡಿವ ನೀರನ್ನು ಕಲ್ಪಿಸಲು ಯೋಚಿಸದೆ ಕೋಟ್ಯಂತರ ರು. ಹಣದ ಯೋಜನೆಯಾದ ಎತ್ತಿನಹೊಳೆ ಯೋಜನೆಯನ್ನು ಖಾಸಗಿ ಕಂಪನಿಗೆ ನೀಡುತ್ತಿರುವುದು ಸರಿಯಿಲ್ಲವೆಂದರು. ಇನ್ನು 10 ವರ್ಷಗಳ ಕಾಲವಾದರೂ ಎತ್ತಿನಹೊಳೆ ನೀರು ತರಲು ನಮ್ಮ 2 ಜಿಲ್ಲೆಗಳಿಗೆ ಆಗುವುದಿಲ್ಲ. ನಮ್ಮ 2 ಜಿಲ್ಲೆಯಲ್ಲಿ 2600 ಕೆರೆಗಳಿದ್ದು,ಕೆರೆಗಳು ತುಂಬಬೇಕಾದರೆ 210 ಟಿಎಂಸಿ ನೀರು ಬೇಕು ಆದರೆ ಎತ್ತಿನಹೊಳೆ ಯೋಜನೆಯಿಂದ 8 ರಿಂದ 10 ಟಿಎಂಸಿ ನೀರು ಮಾತ್ರ ಬರುತ್ತದೆ ಎಂದು ವಿವರಿಸಿದರು.
ಬರ ಪರಿಸ್ಥಿತಿ: ನಂತರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಲ ತಜ್ಞ ಕೆ. ನಾರಾಯಣಸ್ವಾಮಿ ಮಾತನಾಡಿ, ಯಾವುದೇ ನದಿ ಮೂಲಾಧಾರವಿಲ್ಲದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಜನರು ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಳೆಯಿಲ್ಲದೆ ಬೆಳೆಯಿಲ್ಲದೆ ಕೆರೆ ಕುಂಟೆಗಳು ಬತ್ತಿಹೋಗಿ ಜಾನುವಾರುಗಳಿಗೆ ಮೇವು ನೀರಿಲ್ಲದೆ ಪರಿತಪಿಸುತ್ತಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉಭಯ ಜಿಲ್ಲೆಗಳ ರೈತಾಪಿ ಜನರ ಧ್ವನಿ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲವೆಂದು ಸಭೆಯಲ್ಲಿ ಮಾಡಿದರು.
 ನಂತರ ಚಿಕ್ಕಬಳ್ಳಾಪುರ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಶಿಕ್ಷಣ ಮತ್ತು ಮಾತೃಭಾಷೆಯ ಗೊಂದಲಗಳು ವಿಷಯವಾಗಿ ಪ್ರಾಸ್ತಾವಿಕ  ಭಾಷಣ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸಿ.ಬಿ. ಹನುಮಂತಪ್ಪ ಸಮಕ್ಷಮದಲ್ಲಿ ಮಾಜಿ ಶಾಸಕ ಶ್ರೀರಾಮರೆಡ್ಡಿ, ಜಲತಜ್ಞ ಕೆ.ನಾರಾಯಣ ಸ್ವಾಮಿ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಅವರಿಗೆ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಎ.ಎಸ್. ನಾಗರಾಜ್, ಮುಖಂಡರಾದ ಕನ್ನಡ ಅಶ್ವಥ್,ನಿವೃತ್ತ ಸಿಬಿಐ ಅಧಿಕಾರಿ ಅರುಣ್ ಬಾಬು, ವಜೀರ್ ಅಹಮದ್, ಯುವಮುಖಂಡ ವಿ. ಅಮರ್ ಉಪಸ್ಥಿತರಿದ್ದರು.

ಪ್ರಾಂಶುಪಾಲರನ್ನು ಸನ್ಮಾನಿಸಿ
ಚಿಂತಾಮಣಿ: ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿವೃತ್ತಿ ಹೊಂದಿದ ಪ್ರಾಂಶುಪಾಲರಾದ ಬ್ರಹ್ಮಚಾರಿ,ನಂಜುಂಡೇಶ್ವರ ಹಾಗೂ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾಲೇಜಿನ ಜಿ. ಕೃಷ್ಣಮೂರ್ತಿಯವರಿಗೆ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡದೆ ನಿರ್ಲಕ್ಷಿಸಿರುವುದರಿಂದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಖಂಡಿಸಿದೆ.
ನಗರದ ಬಾಲಕರ ಪದವಿ ಕಾಲೇಜಿನ ಆವರಣದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಸಾದಕರಿಗೆ ಸನ್ಮಾನ ಮಾಡಿರುವುದು ಸ್ವಾಗತ. ಆದರೆ ಇದೇ ಕಾಲೇಜಿನಲ್ಲಿ 4 ವರ್ಷಗಳಿಂದ ಪ್ರಾಂಶುಪಾಲರಾಗಿ ಕೆಲಸ ಮಾಡಿರುವ ಬ್ರಹ್ಮಚಾರಿ, ನಂಜುಂಡೇಶ್ವರ ಹಾಗೂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ ಅವರನ್ನು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಡಾ. ಸಿ.ಎನ್.ಆರ್. ರಾವ್ ವೇದಿಕೆಯಲ್ಲಿ ಇವರ ಸಾಧನೆ ಗುರ್ತಿಸಿ ಸನ್ಮಾನ ಮಾಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರಿಗೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥ ರೆಡ್ಡಿ, ಸುರೇಶ್, ವಿಜಯ್, ಅಭಿ, ಭಾಸ್ಕರ್,ನವಾಜ್, ಲಕ್ಷ್ಮಣ್, ಮಂಜು ಸೇರಿದಂತೆ ಇನ್ನೂ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಪಶ್ಚಿಮ ಘಟ್ಟಗಳಲ್ಲಿನ ನೇತ್ರಾವತಿ ನದಿ ತಿರುವು ಎಂದು ಜನ ಸಾಮಾನ್ಯರಲ್ಲಿ ಜನಪ್ರತಿನಿಧಿಗಳು ವೋಟ್ ಬ್ಯಾಂಕ್ಗಾಗಿ ತಪ್ಪು ಮಾಹಿತಿ ನೀಡಿ, ಎತ್ತಿನಹೊಳೆ ಯೋಜನೆಯೆಂದು ಕರೆಯುತ್ತಿದ್ದಾರೆ. ಆದರೆ ಪಶ್ಚಿಮ ಘಟ್ಟಗಳಿಂದ ಹರಿಯುವ ನದಿ ನೀರನ್ನು ಈ ಭಾಗದ ಜಿಲ್ಲೆಗಳಿಗೆ ಪೈಪ್ ಲೈನ್ ಮುಖಾಂತರ ವೈಜ್ಞಾನಿಕವಾಗಿ ಕುಡಿವ ನೀರನ್ನು ಕಲ್ಪಿಸಲು ಯೋಚಿಸದೆ ಕೋಟ್ಯಂತರ ರು. ಹಣದ ಯೋಜನೆಯಾದ ಎತ್ತಿನಹೊಳೆ ಯೋಜನೆಯನ್ನು ಖಾಸಗಿ ಕಂಪನಿಗೆ ನೀಡುತ್ತಿರುವುದು ಸರಿಯಿಲ್ಲ
 ಶ್ರೀರಾಮರೆಡ್ಡಿ, ಮಾಜಿ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.