'ರಾಜಕೀಯ ವೇದಿಕೆಯಲ್ಲಿ ಕುರುಬ ಸಮಾಜದ ವಿಚಾರ ಪ್ರಸ್ತಾಪ ಸಲ್ಲದು'
ಕ.ಪ್ರ.ವಾರ್ತೆ ಕೋಲಾರ ಮಾ.30
ಕುರುಬ ಸಮುದಾಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ರಾಜಕೀಯ ವೇದಿಕೆಗಳಲ್ಲಿ ಸಮಾಜದ ಮುಖಂಡರುಗಳು ಮಾತನಾಡುವುದು ಸರಿಯಲ್ಲ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎನ್. ಮಧುಸೂದನ್ ತಾಕೀತು ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಸಮುದಾಯದವರು ಯಾವುದೇ ಪಕ್ಷದಲ್ಲಿರಲಿ ಸಮಾಜದ ಬಗ್ಗೆ ಮಾತ್ರ ಕಿಂಚಿತ್ತೂ ಮಾತನಾಡಬಾರದು. ಸಮುದಾಯದ ವಿಚಾರಗಳನ್ನು ಸಮಾಜದ ಹಿರಿಯರ ಸಲಹೆ ಸೂಚನೆ ಮೇರೆಗೆ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ರಾಜಕೀಯ ತೆವಲಿಗೆ ಸಮಾಜದ ಆಂತರಿಕ ವಿಚಾರಗಳನ್ನು ಬೀದಿಯಲ್ಲಿ ಹರಾಜು ಹಾಕದಂತೆ ಮನವಿ ಮಾಡಿದ್ದಾರೆ. ಕುರುಬ ಸಮುದಾಯದ ಮುಖಂಡರು ಸ್ವ ಸಾಮರ್ಥ್ಯದ ಮೇಲೆ ತಮ್ಮ ತಮ್ಮ ಮುಖಂಡನನ್ನು ಗೆಲ್ಲಿಸಿಕೊಳ್ಳಬೇಕೆ ಹೊರತು ಸಮಾಜದಲ್ಲಿನ ಒಡಕು ತೊಡಕುಗಳನ್ನು ಇನ್ನೊಬ್ಬರ ಮುಂದೆ ಮಾತನಾಡಿದರೆ ಸಂಘದಿಂದ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಲ್ಲದೆ ಒಗ್ಗಟ್ಟಿಲ್ಲದೆ ಕೆಲ ದಿನಗಳ ಹಿಂದೆ ಎದುರಿಸಿದ ಪರಿಣಾಮಗಳೇನು ಎಂಬುದರ ಬಗ್ಗೆ ಸಮುದಾಯದ ಮುಖಂಡರು ಆತ್ಮಾವಲೋಕನ ಮಾಡಿಕೊಂಡು ಹೆಜ್ಜೆಗಳನ್ನಿಡಬೇಕು ಎಂದು ತಿಳಿಸಿದ್ದಾರೆ. ಸಮುದಾಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ಇತರರಲ್ಲಿ ನಗೆಪಾಟಲಿಗೆ ಈಡಾಗಬೇಕಾಯಿತು. ಬೇರೆ ಸಮುದಾಯದಲ್ಲಿನ ಒಗ್ಗಟ್ಟನ್ನು ನೋಡಿ ನಮ್ಮ ಸಮಾಜದ ಯುವ ಮುಖಂಡರುಗಳು ಪಾಠ ಕಲಿಯಲಿ ಎಂದು ಸಲಹೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

