ಜನಮನ ಸೆಳೆದ ಹಂಸ ವಾಹನೋತ್ಸವ
ಕೆಜಿಎಫ್: ಕೆಜಿಎಫ್‌ನ ಸುಪ್ರಸಿದ್ಧ ಪ್ರಸನ್ನ ಲಕ್ಷ್ಮೀ ವೆಂಕಟರಮಣ ದೇವಾಲಯದ 78ನೇ ವಾರ್ಷಿಕ ಜಾತ್ರೆಯ ಪ್ರಯುಕ್ತ ಮಲೆಯಾಳಿ ಸಮುದಾಯದವರಿಂದ ಹಂಸವಾಹನೋತ್ಸವ ಅತಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ಗಡಿ ಭಾಗದ ಕೆಜಿಎಫ್ ನಗರದ ಮುಜರಾಯಿ ಇಲಾಖೆಗೆ ಒಳಪಡುವ ಪ್ರಸನ್ನ ಲಕ್ಷ್ಮೀ ವೆಂಕಟರಮಣ ದೇವಾಲಯದ ಜಾತ್ರಾ ಮಹೋತ್ಸವವು ಕೋಲಾರ ಜಿಲ್ಲೆ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲೂ ಸಹ ಪ್ರಖ್ಯಾತಿ ಪಡೆದಿದೆ.
ಜಾತ್ರಾ ಮಹೋತ್ಸವದ 8ನೇ ದಿನದಂದು ಮಲಯಾಳಿ ಸಮುದಾಯದವರು ನಡೆಸಿಕೊಡುವ ಹಂಸ ವಾಹನೋತ್ಸವ ಉತ್ಸವ ವೀಕ್ಷಿಸಲು ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳು ಮಾತ್ರವಲ್ಲದೆ ಇತರೇ ಪಕ್ಕದ ರಾಜ್ಯಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡರು.
ಅನ್ನ ಸಂತರ್ಪಣೆ: ಬೆಳಗ್ಗೆ 6 ಗಂಟೆಗೆ ದೇವರಿಗೆ ಅಭಿಷೇಕದ ಜತೆಗೆ, ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ಮಾಡಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಭಕ್ತರ ಮನರಂಜನೆಗಾಗಿ ಕೇರಳ ರಾಜ್ಯದಿಂದ ಆನೆಯನ್ನು ಕರೆತಂದು ದೇವಾಲಯದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ಥೆಗಳು, ವೃತ್ತಗಳಲ್ಲಿ ಸಂಚರಿಸಿತು. ಮಹಿಳೆಯರ ಚಂಡೆ ವಾದ್ಯ, ಸ್ಥಬ್ದ ಚಿತ್ರಗಳಾದ ಲಕ್ಷ್ಮೀ, ರಾಮ, ಲಕ್ಷ್ಮಣ ಹಾಗೂ ರಾವಣನ ಪ್ರತಿ ರೂಪವನ್ನು ಪ್ರದರ್ಶಿಸಲಾಯಿತು,
ಕೇರಳ ರಾಜ್ಯದ ಸಂಸ್ಕೃತಿಯ ಕಲಾ ತಂಡಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಲಯಾಳಿ ಉತ್ಸವದಂದು ಭಕ್ತಾಧಿಗಳ ಗಮನ ಸೆಳೆಯುವುದೆಂದರೆ ಬಾಣಬಿರಸು ಪಟಾಕಿಗಳು ಸಿಡಿಸುವ ದೃಶ್ಯ ಇಲ್ಲಿ ವಿಶೇಷ.
ಹಂಸವಾಹನೋತ್ಸವದಲ್ಲಿ ಅಧ್ಯಕ್ಷ ಸುರೇಶ್ ನಾರಾಯಣಕುಟ್ಟಿ, ಸುರೇಶ್, ಆನಂದಕೃಷ್ಣನ್, ರವಿ, ನಟರಾಜನ್, ಚಂದ್ರಶೇಖರ್ ಸ್ವಾಮೀಜಿ, ಚಂದ್ರರೆಡ್ಡಿ, ಭಾಸ್ಕರ್‌ರೆಡ್ಡಿ, ಗೋಪಿ, ಶಿವದಾಸನ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

