ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ: ವರ್ತೂರ್ ಶಂಕೆ
ಕ.ಪ್ರ. ವಾರ್ತೆ ಕೋಲಾರ ಮಾ.30
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಜೆಡಿಎಸ್‌ಗೆ ವರ್ಗಾಯಿಸಲು 10 ಕೋಟಿ ರು. ಗಳ ಒಳ ಒಪ್ಪಂದ ಸಂಸದ ಕೆ.ಹೆಚ್. ಮುನಿಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡ ಮಧ್ಯೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಶಂಕೆ ವ್ಯಕ್ತಪಡಿಸಿದ್ದಾರೆ.
ನಗರದ 33 ನೇ ವಾರ್‌ಡಿನಲ್ಲಿ ಅಲ್ಪ ಸಂಖ್ಯಾತ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಎಪಿಎಂಸಿ, ವೇಮಗಲ್ ಜಿಪಂ ಉಪ ಚುನಾವಣೆ ಹಾಗೂ ನಗರಸಭೆ ಚುನಾವಣೆಯಲ್ಲಿ ಜರುಗಿದಂತೆ ವಿಧಾನಸಭೆ ಚುನಾವಣೆಯಲ್ಲಿಯೂ ಈ ಪಕ್ಷಗಳ ಅನೈತಿಕ ಸಂಬಂಧ ಮುಂದುವರೆದಿದ್ದು, ಶ್ರೀನಿವಾಸಗೌಡರನ್ನು ಗೆಲ್ಲಿಸಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪನವರಿಗೆ ಸಹಕರಿಸುವ ಬಗ್ಗೆ ಅವರಿಬ್ಬರಲ್ಲಿ ಮಾತುಕತೆಗಳು ನಡೆದಿದೆ ಎಂದು ಆರೋಪಿಸಿದರು.
ಮುನಿಯಪ್ಪ ಮತ್ತು ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ವಿರುದ್ಧ ಬಾಯಿಗೆ ಬಂದಂತೆ ಹೀನಾಯಮಾನವಾಗಿ ಬೈದು ಈಗ ಅವರನ್ನು ಹೊಗಳಿ ಅಟ್ಟಕ್ಕೇರಿಸಿ ನಜೀರ್ ಅಹಮ್ಮದ್ ನನ್ನ ಪ್ರತಿಸ್ಪರ್ಧಿ ಎಂದು ಹೇಳಿಕೊಳ್ಳುತ್ತಿರುವ ಮಾಜಿ ಸಚಿವರ ಮಾತಿನ ಹಿಂದಿರುವ ಮರ್ಮವೇನು ಎಂಬುದರ ಬಗ್ಗೆ ಮತದಾರರು ಚಿಂತಿಸಬೇಕು ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಅನುಮಾನ ಬಾರದಿರಲಿ ಎಂದು ನಗರದಲ್ಲಿ ಇತ್ತೀಚೆಗೆ ಆತುರಾತುರವಾಗಿ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಯಲ್ಲಿ ಪ್ರಬಲವಾಗಿ ಸ್ಪರ್ಧಿಸುವ ಮಾತುಗಳನ್ನು ಆಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಯಾಮಾರಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿಗೆ ಕ್ಷೇತ್ರದ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ವರ್ತೂರು ಪ್ರಕಾಶ್ ಕರೆ ನೀಡಿದರು.
ಇದಕ್ಕೂ ಮುನ್ನಾ ವಾರ್ಡ್ 35 ರ ಮುಖಂಡರಾದ ರಿಯಾಜ್, ನದೀಮ್, ವಸೀಮ್, ಇಲಾಕತ್, ನವಾಜ್, ನಜೀರ್, ಸುಲ್ತಾನ್, ಮುಜಾಯಿದ್, ಹಿತ್ಯಾಜ್, ಸುಲೇಮಾನ್, ಸುಲೇಮಾನ್‌ಪಾಷ, ನ್ಯಾಮತ್, ಸುಹೇಲ್ ಮತ್ತಿತರರು ವರ್ತೂರು ಬಣಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಸಾಬೀರ್‌ಪಾಷ, ಖಮ್ಮರ್, ಲಕ್ಕಿ ಮುಷ್ಟಾಕ್, ಕಂಬಿ ಅಸ್ಲಾಂ, ಅಲಿಖಾನ್, ಏಜಾಜ್, ಜಿಯಾವುಲ್ಲಾಖಾನ್, ಇಸ್ಮಾಯಿಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

