ವಸಂತ ವೇದ ಶಿಬಿರ ಏ.14ರಿಂದ
ಕೋಲಾರ: ನಗರದ ಪಿ.ಸಿ. ಬಡಾವಣೆಯ ಬ್ರಾಹ್ಮಣ ಸಂಘದಿಂದ ಏ.14ರಿಂದ ಮೇ.1ರವರೆಗೂ ವಸಂತ ವೇದ ಶಿಬಿರ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಎ. ಅಯ್ಯರ್ ತಿಳಿಸಿದ್ದಾರೆ. ಶಿಬಿರದಲ್ಲಿ ಪಾಲ್ಗೊಳ್ಳಲು 18 ವರ್ಷದೊಳಗಿನ ಬ್ರಾಹ್ಮಣ ವಟುಗಳು ಅರ್ಹರಾಗಿದ್ದು, ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಶಿಬಿರದಲ್ಲಿ ಸಂಧ್ಯಾವಂದನೆ, ದೇವತಾರ್ಚನೆ, ಸ್ತೋತ್ರ ಪಾಠಗಳು, ಸಂಸ್ಕೃತ ಮತ್ತಿತರ ವಿಷಯ ಹೇಳಿಕೊಡಲಾಗುತ್ತದೆ. ಆಸಕ್ತರು ನಗರದ ಪಿಸಿ ಬಡಾವಣೆಯ ಗಾಯತ್ರಿ ಮಂದಿರದ ವೇದವ್ಯಾಸ ವೇದ ಪಾಠಶಾಲೆಯಲ್ಲಿ ಅರ್ಜಿ ಪಡೆದು ಏ.10 ರೊಳಗಾಗಿ ಹೆಸರು ನೊಂದಾಯಿಸಲು ಕೋರಿದ್ದಾರೆ. ವಿವರಗಳಿಗೆ ವೇದಬ್ರಹ್ಮ ರಾಮಕೃಷ್ಣ ಭಟ್-9481752184, ಜೆ.ಎನ್. ರಾಮಕೃಷ್ಣ-9731040800, ಅಚ್ಚುತ-9448030574 ರನ್ನು ಸಂಪರ್ಕಿಸಿ.
ಸುಂದರಪಾಳ್ಯದಲ್ಲಿ
ಶಿಕ್ಷಕರ ಹೊಡೆದಾಟ
ಕೆಜಿಎಫ್: ಸುಂದರಪಾಳ್ಯ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಮುಖ್ಯ ಶಿಕ್ಷಕಿ, ಸಹ ಶಿಕ್ಷಕನ ನಡುವೆ ಹೊಡೆದಾಟ ನಡೆದ ಘಟನೆ ವರದಿಯಾಗಿದೆ. ಮುಖ್ಯ ಶಿಕ್ಷಕಿ ಕಾಂತಮ್ಮ ಬಿಸಿಯೂಟ ಕಾರ್ಯಕ್ರಮ ಸರಿಯಾಗಿ ನಡೆಸುತ್ತಿಲ್ಲ ಎಂದು ಅದೇ ಶಾಲೆ ಶಿಕ್ಷಕ ವೆಂಕಟರಾಮ್ ಅವರನ್ನು ಮೇಲಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ ಶಾಲೆಗೆ ವಿತರಿಸಲಾದ ಅಕ್ಕಿ ಮತ್ತು ಇತರೇ ಸಾಮಗ್ರಿ ವೆಂಕಟರಾಮ್ ರಾತ್ರೋರಾತ್ರಿ ಮಾರಾಟ ಮಾಡುತ್ತಿದ್ದಾರೆ ಎಂದು ಕಾಂತಮ್ಮ ಆರೋಪಿಸಿದ್ದರು. ಈ ಹಿನ್ನೆಲೆ ವೆಂಕಟರಾಮ್ ಮತ್ತು ಕಾಂತಮ್ಮ ನಡುವೆ ಮಾತಿನ ಚಕಮಕಿ ನಡೆದಿತ್ತ್ತು. ಕಾಂತಮ್ಮರ ಪತಿ ಸುಬ್ರಮಣಿ, ಮಗ ಲೋಕೇಶ್ ಶಾಲೆ ಬಳಿಗೆ ಬಂದು ವೆಂಕಟರಾಮ್ ಜೊತೆ ಹೊಡೆದಾಡಿದರು. ಶಿಕ್ಷಕ ವೆಂಕಟರಾಮ್‌ಗೆ ಏಟು ಬಿದಿದ್ದು ಬೇತಮಂಗಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

