ವರ್ತೂರ್ ಕುರುಬ ಸಮಾಜಕ್ಕೆ ಏನೂ ಮಾಡಿಲ್ಲ
ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮಾ.29
ಸಚಿವ ವರ್ತೂರು ಪ್ರಕಾಶ್ ಅವರು ಕುರುಬ ಸಮಾಜಕ್ಕೆ ಸೇರಿದವರಾದರೂ ಸಮಾಜದ ಏಳಿಗೆಗೆ ಏನನ್ನು ಮಾಡಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಜನತೆಯ ನಡುವೆ ಇದ್ದ ಸೌಹಾರ್ದತೆ ಹಾಳು ಮಾಡಿರುವುದೇ ಅವರ ಐದು ವರ್ಷಗಳ ಸಾಧನೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ನಾಗಭೂಷಣ್ ಟೀಕಿಸಿದರು.
ಅವರು ಶುಕ್ರವಾರ ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡರ ಪರವಾಗಿ ನರಸಾಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿ, ಸಚಿವರು ಸುರಿಸುವ ಮೊಸಳೆ ಕಣ್ಣೀರಿಗೆ ಕುರುಬ ಜನಾಂಗ ಕರಗದೆ, ಸಚಿವರ ದೌರ್ಜನ್ಯಕ್ಕೆ ಹೆದರದೆ ಧೈರ್ಯವಾಗಿ ಜೆಡಿಎಸ್ ಅಭ್ಯರ್ಥಿ ಕೆ. ಶ್ರೀನಿವಾಸಗೌಡರನ್ನು ಬೆಂಬಲಿಸಬೇಕೆಂದು ತಿಳಿಸಿದರು.
ಕುರುಬ ಜನಾಂಗದ ಯುವ ಮುಖಂಡ ಜಯಪ್ರಕಾಶ್ ನಾರಾಯಣ ಮಾತನಾಡಿ, ಕನಿಷ್ಠ ಕೋಲಾರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಕುರುಬರ ಹಾಸ್ಟೆಲ್‌ನ್ನು ಪೂರ್ಣಗೊಳಿಸಲಾಗದ ಸಚಿವರು ಇತರೆ ಸಮಾಜಕ್ಕೆ ಏನು ತಾನೇ ಮಾಡಿಯಾರು ಎಂದು ಪ್ರಶ್ನಿಸಿದರಲ್ಲದೆ, ಸಚಿವರ ಆಶ್ವಾಸನೆಗಳೆಲ್ಲಾ ಪೊಳ್ಳಾಗಿದ್ದು, ಇದನ್ನು ಮತದಾರರು ಅರಿತು ಜನಪರ ಕಾಳಜಿ ಇರುವ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಕೋರಿದರು.
ಪಕ್ಷದ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಕೀಲುಕೋಟೆ ಆರ್. ಶ್ರೀನಿವಾಸ್ ಮಾತನಾಡಿ, ಕಳೆದ ನಗರಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಅಭ್ಯರ್ಥಿಗಳನ್ನು ಸೋಲಿಸಿರುವ ಸಚಿವರಿಗೆ ಸಮಾಜದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಹೇಳಿದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ರಾಜರಾಜೇಶ್ವರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ಮಾತನಾಡಿದರು.
ಅಭ್ಯರ್ಥಿ ಕೆ. ಶ್ರೀನಿವಾಸಗೌಡರು ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ಪ್‌ಕ್ಷವಾಗಿದ್ದು, ವರ್ತೂರು ಪ್ರಕಾಶ್ ಮೂರನೇ ಸ್ಥಾನದಲ್ಲಿರುತ್ತಾರೆಂದು ಹೇಳಿದರು. ಮುಖಂಡರಾದ ಮೂರಾಂಡಹಳ್ಳಿ ಗೋಪಾಲ್, ನಾಗನಾಳ ಸೋಮಣ್ಣ, ಈರಪ್ಪ, ಬಣಕನಹಳ್ಳಿ ನಟರಾಜ್, ಆಂಜನಮ್ಮ, ಹೋಬಳಿ ಅಧ್ಯಕ್ಷ ಬೆಳಮಾರನಹಳ್ಳಿ ಆನಂದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

