ಕೋಲಾರ

ಬೆದರಿಕೆ: ಫೈನಾಶ್ಷಿಯರ್ ಸೇರಿ 3 ಸೆರೆ

Published On :

ಕ.ಪ್ರ.ವಾರ್ತೆ ಕೋಲಾರ ಮಾ.29
ಹಣಕಾಸು ಲೇವಾದೇವಿ ವಿಚಾರದಲ್ಲಿ ಮಹಿಳೆಯೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿರುವ ದೂರಿನ ಮೇರೆಗೆ ಜಿಲ್ಲಾ ಅಪರಾಧ ನಿಗ್ರಹ ದಳದ ಪೊಲೀಸರು ನಗರಸಭೆ ಮಾಜಿ ಸದಸ್ಯ ಮುಕ್ಕಡ್ ವೆಂಕಟೇಶ್ ಹಾಗೂ ಇವರ ಪುತ್ರರಾದ ಮುರಳಿ ಕೃಷ್ಣ ಹಾಗೂ ಹರಿಕೃಷ್ಣ ಎಂಬುವರನ್ನು ಬಂಧಿಸಿದ್ದಾರೆ.
ತಾಲೂಕಿನ ಹರಟಿ ಗ್ರಾಮದ ವಾಸಿ ಅಶ್ವಥಮ್ಮ ಎಂಬಾಕೆಯ ಮನೆಗೆ ನುಗ್ಗಿ, ಪ್ರಾಣ ಬೆದರಿಕೆ ಹಾಕಿ ದಾಂಧಲೆ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಮುಕ್ಕಡ್ ವೆಂಕಟೇಶ್ ಹಾಗೂ ಇವರಿಬ್ಬರ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ.
ದೂರುದಾರರಾದ ಅಶ್ವಥಮ್ಮನವರ ಪುತ್ರ ಹರಟಿ ಗೋಪಾಲ್ ಎಂಬುವರು ಪ್ರಸ್ತುತ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಮುಕ್ಕಡ್ ವೆಂಕಟೇಶ್ ಜೊತೆ ಹಣಕಾಸು ಲೇವಾದೇವಿಯನ್ನು ಇಟ್ಟುಕೊಂಡಿದ್ದರು. ಇವರು ಈ ಹಿಂದೆ ಶೇ. 3ರ ಬಡ್ಡಿಗೆ ಸುಮಾರು 11 ಲಕ್ಷ ರು. ಸಾಲವನ್ನು ಪಡೆದಿದ್ದರು. ಆದರೆ ದಾಖಲು ಪತ್ರಗಳ ಸಹಿಯಾದ ನಂತರ ಶೇ. 10 ರಷ್ಟು ಬಡ್ಡಿ ದರವನ್ನು ವಿಧಿಸಿ, ಸುಮಾರು 30 ಲಕ್ಷದ ವರೆಗೆ ಬಡ್ಡಿ ಬೆಳೆಯುತ್ತಾ ಹೋಯಿತೆಂದು, ಇದರ ತೀರುವಳಿಗೆ ಪಾಲಸಂದ್ರ ಬಡಾವಣೆಯಲ್ಲಿನ ನಿವೇಶನವನ್ನು ಮಾರಲಾಗಿದೆ, ಮುಕ್ಕಡ್ ಅವರ ಬಳಿ ಹಾಕಿದ್ದ ಚೀಟಿಗಳನ್ನು ಸಹ ಅವರೆ ತೆಗೆದುಕೊಳ್ಳುತ್ತಿದ್ದರು ಎಂದು ದೂರಿದ್ದಾರೆ.ಹೆಚ್ಚು ಬಡ್‌ಡಿ ಕಟ್ಟಲಾಗದೆ ಸಾಲ ಪಡದೆ ಅರ್ಜುನ್ ಬೇಸತ್ತು ಮುಕ್ಕಡ್ ವೆಂಕಟೇಶ್ ಅವರೊಂದಿಗೆ ಜಗಳವಾಡಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಮಾ.28ರ ಗುರುವಾರ ರಾತ್ರಿ ಮುಕ್ಕಡ್ ವೆಂಕಟೇಶ್ ಹಾಗೂ ಇವರ ಪುತ್ರರಾದ ಮುರಳಿ, ಹರಿ ಮತ್ತು ಇತರೆ ಐದಾರು ಮಂದಿ ಗುಂಪು ಕಟ್ಟಿಕೊಂಡು ಹರಟಿಯಲ್ಲಿರುವ ಅರ್ಜುನ್ ಅವರ ಮನೆಗೆ ದಾಳಿ ಮಾಡಿದ್ದರಿಂದ ಭಯಗೊಂಡ ಅರ್ಜುನ್ ಅವರ ತಾಯಿ ಅಶ್ವಥಮ್ಮ ಅವರು ಕೋಣೆಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಾಗ ಹಣ ನೀಡದಿದ್ದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆಂದು ಅಶ್ವಥಮ್ಮ ದೂರಿದ್ದರಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.